ಬಜರಂಗದಳ ಕಾರ್ಯಕರ್ತರಿಗೆ ತಮ್ಮ ಸ್ವಂತ ನಿಧಿಯಿಂದ 4ಲಕ್ಷ ರೂ. ನೀಡಿದ ಜಮೀರ್ ಅಹ್ಮದ್!

0
3007

ನ್ಯೂಸ್ ಕನ್ನಡ ವರದಿ: (11.10.18) ಕೊಡಗಿನಲ್ಲಿ ತಿಂಗಳ ಹಿಂದೆ ಭಾರೀ ಪ್ರವಾಹ ಮತ್ತು ಭೂಕುಸಿತ ಉಂಟಾದ ಪರಿಣಾಮ ಹಲವಾರು ನಾಶ ನಷ್ಟಗಳು ಉಂಟಾಗಿತ್ತು. ಇದೀಗ ಕೊಡಗಿನಲ್ಲಿ ನೆರೆ ಉಂಟಾದ ಸಂದರ್ಭದಲ್ಲಿ ಮುಂದೆ ನಿಂತು ಹಲವಾರು ಪರಿಹಾರ ಕಾರ್ಯಗಳನ್ನು ಮಾಡಿದ್ದ ಯುವಕರಿಗೆ ಜಮೀರ್ ಅಹ್ಮದ್ ತಮ್ಮ ಸ್ವಂತ ನಿಧಿಯಿಂದ ಹಣ ನೀಡಿದ್ದಾರೆ. ಒಟ್ಟು 16 ಮಂದಿ ಈ ಕಾರ್ಯಾಚರಣೆಯಲ್ಲಿ ಮುಂದೆ ನಿಂತು ಕೆಲಸ ಮಾಡಿ ಹಲವಾರು ಮಂದಿಯ ಪ್ರಾಣ ರಕ್ಷಿಸಿದ್ದರು. ಇದರಲ್ಲಿ ಇದೀಗ 4 ಮಂದಿಗೆ ತಲಾ ಒಂದು ಲಕ್ಷ ರೂ.ಯಂತೆ ನಾಲ್ಕು ಲಕ್ಷ ರೂಪಾಯಿ ನೀಡಿದ್ದಾರೆ.

16 ಮಂದಿ ಯುವಕರಲ್ಲಿ 12 ಮಂದಿ ಮುಸ್ಲಿಮ್ ಧರ್ಮೀಯರಾಗಿದ್ದು, ಉಳಿದ ನಾಲ್ಕು ಮಂದಿ ಬಜರಂಗದಳ ಕಾರ್ಯಕರ್ತರಾಗಿದ್ದರು. ಈಗಾಗಲೇ 12 ಮಂದಿಗೆ ಮಕ್ಕಾ ಉಮ್ರಾ ಯಾತ್ರೆ ಕೈಗೊಳ್ಳು ಜಮೀರ್ ಅಹ್ಮದ್ ವ್ಯವಸ್ಥೆ ಮಾಡಿದ್ದರು. ಉಳಿದಂತೆ ನಾಲ್ಕು ಮಂದಿ ಬಜರಂಗದಳ ಕಾರ್ಯಕರ್ತರಿಗೆ ನೀವು ಯಾವುದೇ ಹಿಂದೂ ಪುಣ್ಯಕ್ಷೇತ್ರಕ್ಕೆ ತೆರಳುವುದಿದ್ದರೂ ನಾನು ವ್ಯವಸ್ಥೆ ಮಾಡುತ್ತೇನೆ ಎಂದಿದ್ದರು. ಅದರಂತೆ ಒಬ್ಬೊಬ್ಬರಿಗೂ ಒಂದೊಂದು ಲಕ್ಷ ರೂಪಾಯಿ ನೀಡಿ ಮಾನವೀಯತೆ ಮೆರೆದಿದ್ದಾರೆ.

video: eenadu

LEAVE A REPLY

Please enter your comment!
Please enter your name here