ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಯುವರಾಜ್ ಸಿಂಗ್!

0
213

ನ್ಯೂಸ್ ಕನ್ನಡ ವರದಿ: (10.06.19): ಅನಿರೀಕ್ಷಿತವಾಗಿ ಭಾರತೀಯ ಕ್ರಿಕೆಟ್ ತಂಡದ ಖ್ಯಾತ ಆಟಗಾರ ಹಾಗೂ 2011ರಲ್ಲಿ ಭಾರತ ತಂಡ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು 2011ರ ವಿಶ್ವಕಪ್ ನ ಸಂದರ್ಭದ ಅತ್ಯುತ್ತಮ ಕ್ಷಣಗಳ ಕುರಿತು ಮಾತನಾಡಿದರು ಮಾತ್ರವಲ್ಲದೇ ತಮಮ್ ಕ್ರಿಕೆಟ್ ಜೀವನದುದ್ದಕ್ಕೂ ತಮಗೆ ಬೆಂಬಲ ನೀಡಿದ ಹಿರಿಯ ಕಿರಿಯ ಆಟಗಾರರನ್ನು ಅವರು ಸ್ಮರಿಸಿದರು.

ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯುವರಾಜ್​ ಸಿಂಗ್, 25 ವರ್ಷಗಳ ಸುದೀರ್ಘ ಕ್ರಿಕೆಟ್​ ವೃತ್ತಿ ಜೀವನದಲ್ಲಿ 22 ವರ್ಷ ದೇಶಿಯ ಹಾಗೂ 17 ವರ್ಷ ಅಂತಾರಾಷ್ಟ್ರೀಯ​ ಮಟ್ಟದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದೇನೆ. ಇದೀಗ ಇದರಿಂದ ಹೊರಬರುವ ನಿರ್ಧಾರವನ್ನು ಮಾಡಿದ್ದೇನೆ. ಯಾವ ರೀತಿ ಹೇರಾಟ ಮಾಡಬೇಕು? ಧೂಳಿನಿಂದ ಹೇಗೆ ಹೊರಬರಬೇಕು. ಬಿದ್ದಾಗ ಎದ್ದು ಹೇಗೆ ಮುಂದೆ ಸಾಗಬೇಕು ಎಂಬುದನ್ನು ಈ ಕ್ರೀಡೆ ಸಾಕಷ್ಟು ನನಗೆ ಕಲಿಸಿದೆ ಎಂದು ಕ್ರಿಕೆಟ್​ಗೆ ಧನ್ಯವಾದ ತಿಳಿಸಿದರು.

LEAVE A REPLY

Please enter your comment!
Please enter your name here