ಅಮಿತ್ ಶಾ ಭಾರತ ಕಂಡರಿಯದ ಕ್ರೂರಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನ ಅಡ್ಯಾರ್ ಪ್ರತಿಭಟನೆ

0
26

ನ್ಯೂಸ್ ಕನ್ನಡ ವರದಿ: ಸಿಎಎ ಮತ್ತು ಎನ್ ಆರ್ ಸಿ ವಿರೋಧಿಸಿ ಇಂದು ಮಂಗಳೂರು ನಗರದ ಹೊರವಲಯದ ಅಡ್ಯಾರ್ ಕಣ್ಣೂರಿನಲ್ಲಿ ಬೃಹತ್ ಪ್ರತಿಭಟನೆ ನಡೆದಿದ್ದು, ಶಾಂತಿಯುತ ಪ್ರತಿಭಟನೆ ನಡೆದ ಹಿನ್ನೆಲೆ ಪೊಲೀಸರು ನಿಟ್ಟುಸಿರುಬಿಟ್ಟಿದ್ದಾರೆ.

ಅಡ್ಯಾರ್ ಕಣ್ಣೂರಿನ ಶಹಾ ಗಾರ್ಡನ್ ಮೈದಾನದಲ್ಲಿ ಇಂದು ನಡೆದ ಪ್ರತಿಭಟನೆಯಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಎಲ್ಲರ ಕೈಗಳಲ್ಲಿಯೂ ತ್ರಿವಣ ಧ್ವಜ ರಾರಾಜಿಸುತ್ತಿದ್ದವು.

ಮಂಗಳೂರು ನಗರ ಪೊಲೀಸ್ ಆಯುಕ್ತ ಪಿ,ಎಸ್ ಹರ್ಷ ಹಾಗೂ ಗೋಲಿಬಾರ್ ಮಾಡಿದ ಪೊಲೀಸರ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸಮಾವೇಶ ಉದ್ದೇಶಿಸಿ ಮಾತನಾಡಿದ ಮಾನವಹಕ್ಕು ಹೋರಾಟಗಾರ ಶಿವಸುಂದರ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾರತ ಕಂಡರಿಯದ ಕ್ರೂರಿ, ನನ್ನ ಮನೆ ಕಾಯಲು ನಾನು ಚೌಕಿದಾರ ನೇಮಿಸಿದೆ. ಒಂದು ವರ್ಷದ ಬಳಿಕ ಅವನೇ ನನ್ನ ಮನೆಯ ಪತ್ರ ಕೇಳುತ್ತಿದ್ದಾನೆ ಎಂದು ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದರು. ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶಭರಿತ ಘೋಷಣೆಗಳನ್ನು ಕೂಗಲಾಯಿತು.

ಉಡುಪಿ, ಕಾರವಾರ, ಚಾಮರಾಜನಗರ, ಕೊಡಗು, ಮೈಸೂರು ಜಿಲ್ಲೆಗಳಿಂದ ಪೊಲೀಸ್ ಪೋರ್ಸ್ ಪ್ರತಿಭಟನೆಯಲ್ಲಿ ಸರ್ಪಗಾವಲು ಹಾಕಿತ್ತು. ಜೊತೆಗೆ. ಕೆಎಸ್ ಆರ್ ಪಿ, ಸಿಎಆರ್. ಆರ್ ಎಎಫ್ ತುಕಡಿಗಳು ಕೂಡ ಪೊಲೀಸರಿಗೆ ಸಾಥ್ ನೀಡಿದ್ದವು, ಒಟ್ಟಾರೆ ಇಂದು ನಡೆದ ಮಂಗಳೂರು ಪ್ರತಿಭಟನೆ ಶಾಂತವಾಗಿತ್ತು.

LEAVE A REPLY

Please enter your comment!
Please enter your name here