ನಮ್ಮವರು ಅವರ ಕಡೆ ಹೋಗ್ತಾರೆ, ಅವರು ನಮ್ಮ ಕಡೆ ಬರ್ತಾರೆ, ಆದರೂ 12 ಸೀಟ್ ಗೆಲ್ಲುತ್ತೇವೆ: ಬಿಎಸ್‌ವೈ

0
109

ನ್ಯೂಸ್ ಕನ್ನಡ ವರದಿ: ನಮ್ಮವರು ಅವರ ಕಡೆ ಹೋಗ್ತಾರೆ, ಅವರು ನಮ್ಮ ಕಡೆ ಬರ್ತಾರೆ. ಅಂತಿಮವಾಗಿ ಏನಾಗುತ್ತೋ ಅಂತ ಕಾದು ನೋಡೋಣ. ಏನೇ ಆದರೂ ನಾವು ಉಪ ಚುನಾವಣೆಯಲ್ಲಿ 12 ಸೀಟುಗಳನ್ನು ಗೆಲ್ಲುತ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದ್ದಾರೆ.

ಅವರು ಇಂದು ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ವಿಷಯ ತಿಳಿಸಿದರು. ಇದೇ ವೇಳೆ ಅವರು ಮಾತನಾಡಿ, ರಾಜು ಕಾಗೆ ಮತ್ತು ಅಶೋಕ್ ಪೂಜಾರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದು ನನಗೆ ಗೊತ್ತಿಲ್ಲ. ನಾನು ಎಲ್ಲವನ್ನು ಗಮನಿಸುತ್ತಿದ್ದೇನೆ ಅಂತ ಹೇಳಿದರು.

ಇದೇ ವೇಳೆ ಶರತ್ ಬಚ್ಚೇಗೌಡ 15ನೇ ತಾರೀಕು ನಾಮಪತ್ರ ಸಲ್ಲಿಸುವ ವಿಚಾರವಾಗಿ ನಾನು ಟೀಕೆ ಮಾಡುವುದಕ್ಕೆ ಹೋಗುವುದಿಲ್ಲ ಹಾಗೂ ಇದರ ಬಗ್ಗೆ ಚರ್ಚೆ ಮಾಡಲು ಇಷ್ಟವಿಲ್ಲ ಎಂದು ಹೇಳಿದರು.

LEAVE A REPLY

Please enter your comment!
Please enter your name here