ಸಚಿವ ಸ್ಥಾನ ಕೇಳಿದ್ರೆ ರಾಜೀನಾಮೆ ಕೊಡ್ತಿನಿ ಅಂದ್ರು ಸಿಎಂ ಯಡಿಯೂರಪ್ಪ..!

0
61

ನ್ಯೂಸ್ ಕನ್ನಡ ವರದಿ: ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಆರಂಭವಾಗಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಆಕಾಂಕ್ಷಿಗಳ ಒತ್ತಡ ಹೆಚ್ಚಾಗಿದೆ. ಇದೇ ವೇಳೆ ಪಕ್ಷದ ವರಿಷ್ಠರು ಗ್ರೀನ್ ಸಿಗ್ನಲ್ ನೀಡದೇ ಸಿಎಂ ಧಾವಂತಕ್ಕೆ ತಡೆ ಹಾಕಿದ್ದಾರೆ. ಇದರಿಂದ ಬೇಸತ್ತ ಸಿಎಂ ರಾಜೀನಾಮೆ ಮಾತನ್ನಾಡಿದ್ದಾರೆ.

ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಹಣಗವಾಡಿಯಲ್ಲಿ ಪಂಚಮಸಾಲಿ ಗುರುಪೀಠದ ಹರ ಜಾತ್ರೆಯಲ್ಲಿ ರಾಜೀನಾಮೆ ಮಾತನಾಡಿದ್ದಾರೆ. ಪಂಚಮಸಾಲಿ ಸಮಾಜಕ್ಕೆ 3 ಸಚಿವ ಸ್ಥಾನ ನೀಡಬೇಕೆಂದು ವಚನಾನಂದ ಸ್ವಾಮೀಜಿ ಹೇಳಿದ್ದಕ್ಕೆ ಸಿಎಂ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.

ಪಂಚಮಸಾಲಿ ಸಮಾಜದ ಶ್ರೀಗಳು ಅರ್ಥಮಾಡಿಕೊಳ್ಳಬೇಕು. 17 ಶಾಸಕರು ರಾಜೀನಾಮೆ ನೀಡಿ ವನವಾಸ ಅನುಭವಿಸಿದ್ದಾರೆ. ಅವರಿಗೆ ನ್ಯಾಯ ನೀಡಬೇಕಿದೆ. ನನ್ನ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.

ನನಗೆ ಅಧಿಕಾರದ ಆಸೆಯಿಲ್ಲ. 17 ಶಾಸಕರ ಋಣ ತೀರಿಸಬೇಕಾದ ಬೇಕಿದೆ. ಬೇಕಿದ್ದರೆ ರಾಜೀನಾಮೆ ಕೊಟ್ಟು ಬರುತ್ತೇನೆ. ಬೇಕಾದರೆ ಎಲ್ಲಾ ಸ್ವಾಮೀಜಿಗಳನ್ನು ಸೇರಿಸಿ ನನ್ನ ಪರಿಸ್ಥಿತಿಯನ್ನು ನಿಮ್ಮೆಲ್ಲರಿಗೂ ಅರ್ಥ ಮಾಡಿಸುತ್ತೇನೆ ಎಂದು ಹೇಳಿದ್ದಾರೆ. ಇದೇ ವೇಳೆ ರಾಜ್ಯದ ಆರ್ಥಿಕ ಸ್ಥಿತಿ ಸರಿಯಿಲ್ಲ. ಮಾರ್ಚ್ ವರೆಗೆ ಕಾಯುತ್ತಿದ್ದೇನೆ ಎಂದು ಸಿಎಂ ಹೇಳುವ ಮೂಲಕ ಭಾರೀ ಕುತೂಹಲ ಮೂಡಿಸಿದ್ದಾರೆ.

LEAVE A REPLY

Please enter your comment!
Please enter your name here