ನಟ ಯಶ್ ತಾಯಿ ವಿರುದ್ಧ ಎಫ್ ಐ ಆರ್ ದಾಖಲು!

0
551

ನ್ಯೂಸ್ ಕನ್ನಡ ವರದಿ (13-6-2019): ಹೈಕೋರ್ಟ್‌ ಆದೇಶದಂತೆ ಯಶ್ ಅವರ ಕುಟುಂಬ ಮನೆ ಖಾಲಿ ಮಾಡಿಕೊಂಡು ಹೋಗುವ ವೇಳೆ ವಸ್ತುಗಳನ್ನು ಎತ್ತಿಕೊಂಡು ಹೋಗುವ ಜತೆಗೆ ಕೆಲವು ವಸ್ತುಗಳನ್ನು ಹಾನಿಗೊಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮನೆ ಮಾಲೀಕರಾದ ಡಾ.ವನಜಾ ಅವರು ನೀಡಿದ ದೂರಿನ ಮೇಲೆ ಐಪಿಸಿ ಕಲಂ 427 ಅಡಿ ಯಶ್ ತಾಯಿ ವಿರುದ್ಧ ಕೇಸ್‌ ದಾಖಲಾಗಿದೆ.

“2010ರ ಅ.11ರಂದು ಬನಶಂಕರಿ 3ನೇ ಹಂತದಲ್ಲಿರುವ ಮನೆಯನ್ನು ಪುಷ್ಪಾ ಅವರಿಗೆ ಬಾಡಿಗೆಗೆ ನೀಡಿದ್ದೆವು. ಅವರು ಸರಿಯಾಗಿ ಬಾಡಿಗೆ ನೀಡದ ಕಾರಣ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದೆವು. ಏಳು ವರ್ಷಗಳ ಕಾಲ ಕೋರ್ಟ್’ಗಳಲ್ಲಿ ವಿಚಾರಣೆ ನಡೆದು, ಮನೆ ಖಾಲಿ ಮಾಡುವಂತೆ ಆದೇಶ ನೀಡಲಾಗಿತ್ತು. ಕೋರ್ಟ್ ಆದೇಶದಂತೆ ಅವರು ಮನೆ ಖಾಲಿ ಮಾಡಿ ಅವರ ವಕೀಲರ ಮೂಲಕ ಮನೆಯ ಕೀಲಿಯನ್ನು ಹಸ್ತಾಂತರಿಸಿದ್ದರು. ನಂತರ ಮನೆಯ ಬೀಗ ತೆಗೆದು ನೋಡಿದಾಗ ಮನೆಯಲ್ಲಿದ್ದ ಹಲವಾರು ವಸ್ತುಗಳನ್ನು ತೆಗೆದುಕೊಂಡು ಹೋದದ್ದಲ್ಲದೆ ವಾಷ್‌ಬೇಸಿನ್‌ ಮತ್ತು ಕಮೋಡ್‌ಗಳನ್ನು ಉದ್ದೇಶಪೂರ್ವಕವಾಗಿ ಒಡೆದು ಹಾಳುಮಾಡಿದ್ದಾರೆ. ಇವುಗಳ ಅಂದಾಜು ಬೆಲೆ 28 ಲಕ್ಷ ರೂ. ಆಗಿದೆ” ಎಂದು ದೂರಿನಲ್ಲಿ ಡಾ.ವನಜಾ ಆರೋಪಿಸಿದ್ದಾರೆ. ಈ ಹಿಂದೆ ಅಧೀನ ನ್ಯಾಯಾಲಯದಲ್ಲೂ ವಿಚಾರಣೆ ನಡೆದು ಕೊನೆಗೆ ಹೈಕೋರ್ಟ್ ಮೆಟ್ಟಿಲೇರಿತ್ತು ಈ ಪ್ರಕರಣ.

ಯಶ್ ತಾಯಿ ಪುಷ್ಪ

 

LEAVE A REPLY

Please enter your comment!
Please enter your name here