ಯೆನೆಪೊಯ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆಯಿಂದ ಹಾಲೆ ಕಷಾಯ ವಿತರಣೆ

0
13

ನ್ಯೂಸ್ ಕನ್ನಡ ವರದಿ: ಯೇನೆಪೋಯ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆ ಕೊಲ್ಲೂರು ಕೋಡಿ ನರಿಂಗಾನ ಇದರ ದ್ರವ್ಯಗುಣ ವಿಭಾಗ ಮತ್ತು ರಸಶಾಸ್ತ್ರ ವಿಭಾಗದ ವತಿಯಿಂದ ಉಚಿತ ಅಟಿ ಕಷಾಯ ವಿತರಣೆ ಕಾರ್ಯಕ್ರಮವನ್ನು ಕಾಲೇಜ್ ನ ವೈದ್ಯಕೀಯ ಅಧೀಕ್ಷಕರಾದ ಡಾಕ್ಟರ್ ಲಕ್ಷ್ಮೀಶ ಉಪಾಧ್ಯಯರು ಮತ್ತು ಕಾಲೇಜು ನ ಪ್ರಾಂಶುಪಾಲ ರಾದ ಡಾಕ್ಟರ್ ಗುರುರಾಜ .ಎಚ್. ರವರು ಹಳೇಕೋಟೆ ಸಯ್ಯದ್ ಮದನಿ ಕಾಲೇಜ್ ನ ಪ್ರಾಂಶುಪಾಲ ರಾದ ಕೆ.ಎಂ.ಕೆ.ಮಂಜನಾಡಿಯವರಿಗೆ ಕಷಾಯ ನೀಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಮಾರಂಭದಲ್ಲಿ ಕಾಲೇಜ್ ನ ಉಪ ಪ್ರಾಂಶುಪಾಲ ರಾದ ಡಾಕ್ಟರ್ ಶ್ರೀದರ್ ಗೊಕಲೆ , ಡಾಕ್ಟರ್ ಶ್ರೀ ದೇವಿ ,ಡಾಕ್ಟರ್ ಆಶಾ ಮತ್ತು ಶಿಬಿರದ ಮುಖ್ಯಸ್ಥ ಅಬ್ದುಲ್ ರಜಾಕ್ ಅಸ್ಪತ್ರೆ ಯ ಅಧೀಕ್ಷಕ ರಾದ ಮುಸ್ತಾಕ್ ಮಹಮ್ಮದ್ ಅಸ್ಪತ್ರೆ ಯ ಆಶಾ ದಿನೇಶ್, ಅಸ್ಪತ್ರೆ ಯ ಎಲ್ಲಾ ವಿಭಾಗದ ವೈದ್ಯಕೀಯ ಮುಖ್ಯಸ್ಥರು ಗಳು, ವೈದ್ಯರು ಗಳು ಹಾಗೂ ಹೋಮೀಯೋಪತಿ ಮೆಡಿಕಲ್ ಕಾಲೇಜು ಆಸ್ಪತ್ರೆ ಯ ಎಲ್ಲಾ ವ್ಯೆದ್ಯರುಗಳು, ಅಸ್ಪತ್ರೆಯ ಎಲ್ಲಾ ಸಿಬ್ಬಂದಿಗಳು ಭಾಗವಹಿಸಿದರು . ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಂಡರು.

LEAVE A REPLY

Please enter your comment!
Please enter your name here