ನೆರೆ ಸಂತ್ರಸ್ತರಿಗಿಲ್ಲದ ಹಣ ಜಾಹೀರಾತಿಗೆ ಹೇಗೆ ಬಂತು? ಯಡ್ಡಿ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ

0
1039

ನ್ಯೂಸ್ ಕನ್ನಡ ವರದಿ: ನೆನ್ನೆ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ಕೋರಿದ ಅಧಿಕಾರಿಗಳಿಗೆ “ನೋಟ್ ಪ್ರಿಂಟ್ ಮಾಡುವ ಯಂತ್ರವಿಲ್ಲ ಎಂದು” ಬೇಜವಾಬ್ದಾರಿತನದ ಉತ್ತರಿಸಿದ ಯಡಿಯೂರಪ್ಪ ವಿರುದ್ಧ ಇಂದು ಪ್ರಿಯಾಂಕ್ ಖರ್ಗೆ ಟ್ವಿಟ್ಟರ್ ನಲ್ಲಿ ವಾಗ್ದಾಳಿ ಮಾಡಿದ್ದಾರೆ.

ನಿಮ್ಮ ಬಳಿ ಪ್ರವಾಹ ಸಂತ್ರಸ್ತರಿಗೆ ನೀಡಲು ಹಣವಿಲ್ಲ. ಆದರೆ ಸರ್ಕಾರದ ಮೂರು ವಾರಗಳ ಸಾಧನೆಯನ್ನು ಸಂಭ್ರಮಿಸಿಸ, ಜಾಹೀರಾತು ನೀಡಲು ಹಣವಿದೆಯೇ?” ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಾಲೆಳೆದಿದ್ದಾರೆ.

ರಾಜ್ಯದಲ್ಲಿ ಪ್ರವಾಹ ಉಂಟಾಗಿ, ಜನಜೀವನ ಅಸ್ತವ್ಯಸ್ಥವಾಗಿರುವ ಕಾರಣ ಈ ಬಾರಿ ಸ್ವಾತಂತ್ರ್ಯೋತ್ಸವವನ್ನು ಸರಳವಾಗಿ ಆಚರಿಸಲಾಗುವುದು ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿತ್ತು. ಈ ಕುರಿತು ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ ಪ್ರಿಯಾಂಕ್ ಖರ್ಗೆ.

LEAVE A REPLY

Please enter your comment!
Please enter your name here