ವಿಶ್ವಕಪ್ ನಲ್ಲಿ ಭಾರತ ತಂಡದ ಮೊದಲ ಪಂದ್ಯ 6 ದಿನ ತಡವಾಗಲು ನಿಜವಾದ ಕಾರಣವೇನು ಗೊತ್ತೇ?

0
1540

ನ್ಯೂಸ್ ಕನ್ನಡ ವರದಿ: ಭಾರತೀಯ ಕ್ರಿಕೆಟ್ ತಂಡದ ಆಡಳಿತ ಮತ್ತು ನಿರ್ವಹಣೆ ಮಾಡುವ ಬಿಸಿಸಿಐ ವಿಶ್ವ ಕ್ರಿಕೆಟ್ ಅತ್ಯಂತ ಶ್ರೀಮಂತ ಕ್ರಿಕೆಟ್ ಬೋರ್ಡ್, ವಿಶ್ವ ಕಪ್ ವೇಳಾಪಟ್ಟಿಯಲ್ಲಿ ಭಾರತೀಯ ಪಂದ್ಯವನ್ನು ತಮಗೆ ಬೇಕಾದ ದಿನಾಂಕದಂದು ನಿಗದಿ ಪಡಿಸುವಂತಹ ತಾಕತ್ತು ಹೊಂದಿದೆ. ಆದರೂ ಈ ಬಾರಿ ಪ್ರತಿಯೊಬ್ಬ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿರುವ ಪ್ರಶ್ನೆ ಏನೆಂದರೆ, ವಿಶ್ವಕಪ್ ನಲ್ಲಿ ಭಾರತದ ಮೊದಲ ಪಂದ್ಯವೇಕೆ ಆರು ದಿನ ತಡವಾಗಿ ಆರಂಭವಾಗುತ್ತಿದೆ? ಎಂಬುದಾಗಿದೆ.

 

ಪಾಕಿಸ್ತಾನವು ಎರಡೆರಡು ಪಂದ್ಯಗಳು ಆಡಿಯಾಯಿತು, ಅವರಿಗೆ ಅಷ್ಟು ಮಹತ್ವ ನೀಡಿದೆ, ಭಾರತಕ್ಕೆ ಯಾಕಿಲ್ಲ, ದಕ್ಷಿಣ ಆಫ್ರಿಕಾ ಈಗಾಗಲೇ ಎರಡು ಪಂದ್ಯ ಆಡಿ, ಭಾರತ ವಿರುದ್ಧದ ಪಂದ್ಯ ದಕ್ಷಿಣ ಆಫ್ರಿಕಾದ ಮೂರನೇ ಪಂದ್ಯ, ಹಾಗಾಗಿ ಹಲವಾರು ಪ್ರಶ್ನೆಗಳು ಎದ್ದಿದ್ದವು, ಸಾಮಾಜಿಕ ಜಾಲತಾಣದಲ್ಲಿಯೂ ಈ ಕುರಿತು ಬಿಸಿಬಿಸಿ ಚರ್ಚೆಯೂ ಆಗಿತ್ತು.

ಇದೀಗ ಏಕೆ ಭಾರತದ ಮೊದಲ ಪಂದ್ಯ ತಡವಾಗಿ ಆರಂಭವಾಗಿದೆ ಎಂಬುವುದರ ಹಿಂದಿರುವ ಕಾರಣ ಹೊರಬಿದ್ದಿದೆ, ಭಾರತದಲ್ಲಿ ಐಪಿಎಲ್ ನಲ್ಲಿ ನಡೆದ ಮ್ಯಾಚ್ ಫಿಕ್ಸಿಂಗ್ ತರುವಾಯ ಬಿಸಿಸಿಐ ಆಡಳಿತ ಮಂಡಳಿಯ ನಿಯಂತ್ರಣದ ಮೇಲೆ ಸುಪ್ರೀಂಕೋರ್ಟ್ ನೇರವಾಗಿ ಹಸ್ತಕ್ಷೇಪ ಮಾಡಿ ತನ್ನ ನಿಯಂತ್ರಣಲ್ಲಿ ಹಲವಾರು ಹೊಸ ನಿಯಮಗಳನ್ನು ಜಾರಿಗೆ ತಂದಿತ್ತು.

ಜಸ್ಟೀಸ್ ಮುಕುಲ್ ಮಧ್ಗುಲ್ ಹಾಗೂ ಜಸ್ಟೀಸ್ ಲೋಧಾ ಬಿಸಿಸಿಐ ಆಡಳಿತ ಮಂಡಳಿಯಲ್ಲಿ ಭೃಷ್ಟಾಚಾರ ನಿಯಂತ್ರಣ ತರಲು ಅಧ್ಯಯನ ನಡೆಸಿ ಎರಡು ವರದಿಯನ್ನು ಜಾರಿಗೆ ತಂದಿತ್ತು, ಜಸ್ಟೀಸ್ ಲೋಧಾ ವರದಿಯಂತೆ ಯಾವುದೇ ಕ್ರೀಡಾ ಸರಣಿ ಮುಗಿದ ನಂತರ ಇನ್ನೊಂದು ಸರಣಿಯ ನಡುವೆ ಭಾರತೀಯ ಆಟಗಾರರಿಗೆ ಕನಿಷ್ಠ 15 ದಿನಗಳ ವಿಶ್ರಾಂತಿ ನೀಡಲೇಬೇಕು ಎಂದು ತಿಳಿಸಿದೆ. ಆ 15 ದಿನಗಳಲ್ಲಿ ಆಟಗಾರರ ಮೇಲೂ ಭೃಷ್ಟಾಚಾರ ನಿಗ್ರಹ ತಂಡವೂ ನಿಗಾ ಇಡಲೂ ಸಹಕಾರಿ ಎಂದು ವರದಿ ಮಾಡಿತ್ತು.

ಇದೇ ಕಾರಣಕ್ಕಾಗಿ ಐಪಿಎಲ್ ಪಂದ್ಯಾಕೂಟ ಮುಗಿಸಿ ವಿಶ್ವಕಪ್ ಆಡಲು ಹೊರಟ ಭಾರತ ತಂಡಕ್ಕೆ 15ದಿನಗಳ ವಿಶ್ರಾಂತಿ ಬೇಕೆಂದು ಬಿಸಿಸಿಐ ಕೋರಿಕೆಯಂತೆ ವಿಶ್ವಕಪ್ ನಲ್ಲಿ ಭಾರತದ ಆರಂಭಿಕ ಪಂದ್ಯ ತಡವಾಗಲು ಕಾರಣ.

LEAVE A REPLY

Please enter your comment!
Please enter your name here