Saturday May 6 2017

Follow on us:

Contact Us

ಮಹಿಳೆಯರ ಮುಖದ ಮೇಲಿರುವ ಅಸ್ವಾಭಾವಿಕ ಕೂದಲುಗಳಿಗೆ ಸುಲಭ ಪರಿಹಾರ

ನ್ಯೂಸ್ ಕನ್ನಡ ಸ್ಪೆಷಲ್: ಮಹಿಳೆಯರ ಮುಖದ ಮೇಲೆ ಅಸ್ವಾಭಾವಿಕವಾಗಿ ಬೆಳೆಯುವ ಕೂದಲುಗಳಿಂದಾಗಿ ತುಂಬಾ ಮುಜುಗರವುಂಟಾಗುತ್ತಿರುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ತಮ್ಮ ಮುಖ, ಗಲ್ಲ ಕಿವಿಗಳ ಮೇಲೆ ಹಾಗೂ ಮೀಸೆಯಿಂದಾಗಿ ಚಿಂತೆಗೀಡಾಗುತ್ತಾರೆ.

ಇದಕ್ಕಾಗಿ ಅದೆಷ್ಟು ಹಣ ಖರ್ಚು ಮಾಡಲೂ ಸಿದ್ಧರಿರುತ್ತಾರೆ. ಸಾವಿರಾರು ರೂಪಾಯಿಗಳನ್ನು ಬ್ಯೂಟಿ ಪಾರ್ಲರ್ ಗೆ ವ್ಯಯಿಸುತ್ತಾರೆ. ತಿಂಗಳಿಗೆರಡು ಸಲ ಫೇಶಿಯಲ್, ಬ್ಲೀಚಿಂಗ್ ಮಾಡಿಸಿ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುತ್ತಾರೆ. ಆದರೆ ಮುಖದ ಮೇಲೆ ಕೂದಲು ಮತ್ತೆ ಬರುತ್ತದೆ. ಶ್ರಿಮಂತರು ಲೇಸರ್ ಹೈರ್ ರಿಮೂವಲ್ ಮಾಡಿಸುತ್ತಾರೆ.
ಇಲ್ಲಿದೆ ನಿಮಗಾಗಿ ಸುಲಭ ಪರಿಹಾರ.

ಬೇಕಾದ ಸಮಾಗ್ರಿ:

ಎರಡು ಚಮಚ ಕಡಲೆ ಹಿಟ್ಟು
ಒಂದು ಚಮಚ ಹರಶಿನ ಹುಡಿ
ಹಾಗೂ ಅಗತ್ಯಕ್ಕೆ ತಕ್ಕಂತೆ ಹಾಲು ಅಥವಾ ಮೊಸರು.

ವಿಧಾನ:

ಕಡಲೆ ಹಿಟ್ಟು, ಹರಶಿನ ಹುಡಿ ಹಾಗೂ ಮೊಸರಿನ ಮಿಶ್ರಣ ಮಾಡಿ ಚೆನ್ನಾಗಿ ಕಲಸಿ. ನಂತರ ಕೂದಲುಗಳು ಬೆಳೆದಿರುವ ಭಾಗಕ್ಕೆ ಹಚ್ಚಿ 20 ನಿಮಿಷ ಅಥವ ಒಣಗುವಷ್ಟು ಕಾಲ ಬಿಡಿ. ಒಣಗಿದ ಬಳಿಕ ಶುದ್ಧ ಹತ್ತಿಯಿಂದ ಆ ಭಾಗವನ್ನು ನಯವಾಗಿ ಉಜ್ಜಿರಿ ಅಥವಾ ಉಗುರು ಬೆಚ್ಚಗಿನ ನೀರಿನಲ್ಲಿ ಒದ್ದೆ ಮಾಡಿ ಹಿಂಡಿದ ಬಟ್ಟೆಯಿಂದ ಒರೆಸಿರಿ.

ಸೂಚನೆ: ಈ ಪ್ರಯೋಗದ ನಂತರ ಆ ಭಾಗದ ಚರ್ಮವು ಕೆಂಪು ಬಣ್ಣಕ್ಕೆ ತಿರುಗುತ್ತದೆ ಆದರೆ ನಿಧಾನವಾಗಿ ತನ್ನ ನಿಜ ಬಣ್ಣಕ್ಕೆ ಹೊಂದಿಕೊಳ್ಳುತ್ತದೆ.
ಈ ರೀತಿಯಾಗಿ ವಾರದಲ್ಲಿ 3-4 ಬಾರಿ ಒಂದು ತಿಂಗಳ ಕಾಲ ಬಳಸಿ ಅಸ್ವಾಭಾವಿಕ ಕೂದಲುಗಳಿಂದ ಮುಕ್ತಿ ಪಡೆಯಿರಿ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಇನ್ನು ಮುಂದೆ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಚುನಾವಣೆ ಸ್ಪರ್ಧಿಸುವಂತಿಲ್ಲ !!

ಮುಂದಿನ ಸುದ್ದಿ »

ನನ್ನ ಸರ್ಕಾರ ತಿಲಕ ಮತ್ತು ಟೊಪ್ಪಿ ನಡುವೆ ತಾರತಮ್ಯ ಮಾಡಲ್ಲ: ಯೋಗಿ ಆದಿತ್ಯನಾಥ್

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×