ಮೇ.4ರಿಂದ ರಾಜ್ಯದಲ್ಲಿ ಎಂಎಸ್‌ಐಎಲ್, ವೈನ್ ಶಾಪ್ ಮೂಲಕ ಮದ್ಯ ಮಾರಾಟ: ಅಬಕಾರಿ ಇಲಾಖೆಯಿಂದ ಅಧಿಕೃತ ಆದೇಶ

0
89

ನ್ಯೂಸ್ ಕನ್ನಡ ವರದಿ: ರಾಜ್ಯ ಅಬಕಾರಿ ಇಲಾಖೆಯಿಂದ ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ, ಎಂ ಎಸ್ ಐ ಎಲ್ ಹಾಗೂ ವೈನ್ ಶಾಪ್ ಮೂಲಕ ಎಲ್ಲಾ ಜಿಲ್ಲೆಗಳಲ್ಲಿಯೂ ಮದ್ಯ ಮಾರಾಟಕ್ಕೆ ಅನುಮತಿ ನೀಡಿ ಸುತ್ತೋಲೆ ಹೊರಡಿಸಿದೆ.

ಈ ಕುರಿತಂತೆ ರಾಜ್ಯ ಅಬಕಾರಿ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮದ್ಯ ಮಾರಾಟವನ್ನು ಎಂ ಎಸ್ ಐ ಎಲ್ ಹಾಗೂ ವೈನ್ ಶಾಪ್ ಮೂಲಕ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಬೆಳಿಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆಯ ವರೆಗೆ ಮಾತ್ರವೇ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ.

ಆದ್ರೇ… ಮದ್ಯ ಮಾರಾಟದ ವೇಳೆ ಕೇಂದ್ರ ಗೃಹ ಸಚಿವಾಲಯ ಸೂಚಿಸಿದಂತೆ ಮಾರ್ಗ ಸೂಚಿ ಅನುಸರಿಸೋದು ಕಡ್ಡಾಯವಾಗಿದೆ. ಅಲ್ಲದೇ ಸಾಮಾಜಿಕ ಅಂತರ, ಮುಖಕ್ಕೆ ಮಾಸ್ಕ್ ಧರಿಸಿ ಪಾರ್ಸಲ್ ಮೂಲಕ ಮದ್ಯ ಖರೀದಿಸಬೇಕಿದೆ. ಆದರೆ ಕಂಟೈನ್ಮೆಂಟ್ ಜೋನ್ ಇರುವ ಯಾವುದೇ ಪ್ರದೇಶದಲ್ಲಿ ಮದ್ಯ ಸಿಗುವುದಿಲ್ಲ ಎಂದು ಸ್ಪಷ್ಟ ಪಡಿದ್ದಾರೆ.

ಮದ್ಯ ಮಾರಾಟಕ್ಕೆ ವಿಧಿಸಿರುವ ಷರತ್ತುಗಳು

  1. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಜಿಲ್ಲಾಡಳಿತ, ಸ್ಥಳೀಯ ಸಂಸ್ಥೆಗಳು ಘೋಷಿಸಿರುವ ಕಂಟೈನ್ಮೆಂಟ್ ಝೋನ್ ಗಳಲ್ಲಿ ಯಾವುದೇ ಮದ್ಯ ಮಾರಾಟ ಸನ್ನದ್ದು ಕಾರ್ಯನಿರ್ವಹಿಸುವಂತಿಲ್ಲ
  2. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಜಿಲ್ಲಾಡಳಿತ, ಸ್ಥಳೀಯ ಸಂಸ್ಥೆಗಳು ಘೋಷಿಸಿರುವ ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಇನ್ನುಳಿದ ಸ್ಥಳಗಳಲ್ಲಿ ಮಾತ್ರವೇ ಸಿಎಲ್-2 ಮತ್ತು ಸಿಎಲ್ 11-ಸಿ( ಎಂ ಎಸ್ ಐ ಎಲ್ ಮದ್ಯ ಮಳಿಗೆಗಳು) ಗಳನ್ನು ತೆರೆದು ಮದ್ಯ ಮಾರಾಟ ಮಾಡಲು ಹಾಗೂ ಕೆ ಎಸ್ ಬಿ ಸಿ ಎಲ್ ಡಿಪೋಗಳು ಮಾತ್ರ ಕಾರ್ಯನಿರ್ವಹಿಸಲು ಅನುಮತಿಸಿದೆ.
  3. ಹೀಗೆ ಕಾರ್ಯ ನಿರ್ವಹಿಸುವ ಸನ್ನದ್ದುಗಳು ಆದೇಶಿತ ಅವಧಿಯಲ್ಲಿ ಬೆಳಿಗ್ಗೆ 9ರಿಂದ ಸಂಜೆ 7 ಗಂಟೆಯವರೆಗೆ ಮಾತ್ರ ಕಾರ್ಯನಿರ್ವಹಿಸುವುದು
  4. ಕೇವಲ 5 ಜನರು ಮಾತ್ರ ಗ್ರಾಹಕರು ಇರುವಂತೆ ಹಾಗೂ ಅವರುಗಳು ಸಾಮಾಜಿಕ ಅಂತರವಾದ 6 ಅಡಿಗಳಿಗೆ ಕಡಿಮೆ ಇಲ್ಲದಂತೆ ಕಾಪಾಡಿಕೊಳ್ಳುವುದು
  5. ಮದ್ಯ ಮಾರಾಟ ಮಾಡುವ ಸನ್ನದಿನಲ್ಲಿನ ನೌಕರರು ಹಾಗೂ ಮದ್ಯ ಖರೀದಿಗೆ ಬರುವ ಗ್ರಾಹಕರು ಮಾಸ್ಕ್ ಗಳನ್ನು ಹಾಕಿಕೊಳ್ಳುವುದನ್ನು ಕಡ್ಡಾಯಪಡಿಸಿಕೊಂಡು ಸನ್ನದು ಸ್ಥಳದಲ್ಲಿ ಸ್ಯಾನಿಟೈಸರ್ ಗಳ ಬಳಸುವುದು
  6. ಕೇವಲ ಸ್ಟಾಂಡ್ ಅಲೋನ್ ಸಿಎಂಲ್-2 ಹಾಗೂ ಸಿಎಲ್ 11-ಸಿ ಸನ್ನದುಗಳನ್ನು ಮಾತ್ರವೇ ಕಾರ್ಯನಿರ್ವಹಿಸುವುದು. ಮಾಲ್ ಗಳು ಹಾಗೂ ಸೂಪರ್ ಮಾರ್ಕೆಟ್ ಗಳಲ್ಲಿ ಸದರಿ ಸನ್ನದುಗಳು ಇದ್ದಲ್ಲಿ ಈ ಅನುಮತಿ ಅನ್ವಯವಾಗುವುದಿಲ್ಲ
  7. ಈ ಮೇಲಿನ ನಿಯಮ ಪಾಲಿಸುವುದು. ಈ ಆದೇಶವನ್ನು ಉಲ್ಲಂಘಿಸಿದರೇ ಸನ್ನದುಗಳನ್ನು ಅಮಾನತ್ತು, ರದ್ದು ಪಡಿಸಲು ಕ್ರಮ ಜರುಗಿಸುವುದು

LEAVE A REPLY

Please enter your comment!
Please enter your name here