ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯಾಟಕ್ಕೆ ಭಾರತೀಯ ತಂಡ ಪ್ರಕಟ!

0
478

ನ್ಯೂಸ್ ಕನ್ನಡ ವರದಿ: (11.10.18) ಮೊನ್ನೆ ತಾನೇ ವೆಸ್ಟ್ ಇಂಡೀಸ್ ವಿರುದ್ಧದ ಪ್ರಥಮ ಟೆಸ್ಟ್ ಕ್ರಿಕೆಟ್ ಪಂದ್ಯಾಟದಲ್ಲಿ ಭಾರತೀಯ ತಂಡವು ವೆಸ್ಟ್ ಇಂಡೀಸ್ ತಂಡವನ್ನು ಹೀನಾಯವಾಗಿ ಸೋಲಿಸಿತ್ತು. ಈ ಸರಣಿಗೆ ಉದಯೋನ್ಮುಖ ಆಟಗಾರ ಮಯಾಂಕ್ ಅಗರ್ವಾಲ್ ಪಾದಾರ್ಪಣೆಗೈದಿದ್ದು, ಆದರೆ ಅವರಿಗೆ ಎರಡನೇ ಪಂದ್ಯದಲ್ಲೂ ಪಾದಾರ್ಪಣೆಗೆ ಅವಕಾಶ ದೊರಕಿಲ್ಲ. ಸದ್ಯ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಾಟಕ್ಕೆ ಕೂಡಾ ಮೊದಲ ತಂಡವನ್ನೇ ಬಿಸಿಸಿಐ ಉಳಿಸಿಕೊಂಡಿದೆ. ಯಾವುದೇ ಕ್ರಮಾಂಕದಲ್ಲೂ ಬದಲಾವಣೆ ಮಾಡಿಲ್ಲ.

ರಾಜ್​ಕೋಟ್​ನಲ್ಲಿ ತಮ್ಮ ಪದಾರ್ಪಣೆ ಪಂದ್ಯದಲ್ಲೇ ಭರ್ಜರಿ ಶತಕ ಗಳಿಸಿ ಮಿಂಚಿದ್ದ ಪೃಥ್ವಿ ಷಾ ಎರಡನೇ ಟೆಸ್ಟ್​ಗೂ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಅನುಭವಿ ಕೆ.ಎಲ್​. ರಾಹುಲ್​ ಅವರನ್ನು ಆರಂಭಿಕರಾಗಿ ಉಳಿಸಿಕೊಳ್ಳಲಾಗಿದೆ. ಮಧ್ಯಮ ಕ್ರಮಾಂಕದಲ್ಲೂ ಯಾವುದೇ ಬದಲಾವಣೆ ಮಾಡದಿರುವ ಹಿನ್ನೆಲೆಯಲ್ಲಿ ಆರಂಭಿಕ ಆಟಗಾರ ಮಯಾಂಕ್​ಗೆ ಅವಕಾಶ ಸಿಕ್ಕಿಲ್ಲ.

ತಂಡ: ವಿರಾಟ್​ ಕೊಹ್ಲಿ (ನಾಯಕ), ಕೆ.ಎಲ್​. ರಾಹುಲ್​, ಪೃಥ್ವಿ ಷಾ, ಚೇತೇಶ್ವರ ಪೂಜಾರಾ, ಅಜಿಂಕ್ಯ ರಹಾನೆ, ರಿಷಭ್​ ಪಂತ್​, ರವೀಂದ್ರ ಜಡೇಜಾ, ಆರ್​. ಅಶ್ವಿನ್​, ಕುಲದೀಪ್​ ಯಾದವ್​, ಉಮೇಶ್​ ಯಾದವ್​, ಮೊಹಮ್ಮದ್​ ಶಮಿ, ಶಾರ್ದುಲ್​ ಠಾಕೂರ್​.

LEAVE A REPLY

Please enter your comment!
Please enter your name here