ಮೋದಿ ಪ್ರತಿಜ್ಞಾ ವಿಧಿ ಸ್ವೀಕರಿಸುತ್ತಿದ್ದಂತೆಯೇ ಬಿಜೆಪಿ ವೆಬ್ ಸೈಟ್ ನಲ್ಲಿ ಬೀಫ್ ಫ್ರೈ ಮಾರಾಟ!

0
1863

ನ್ಯೂಸ್ ಕನ್ನಡ ವರದಿ: (31.05.19) ಈ ಹಿಂದೆ ಭಾರತೀಯ ಜನತಾ ಪಕ್ಷದ ಅಧಿಕೃತ ವೆಬ್ ಸೈಟ್ ಅನ್ನು ಹ್ಯಾಕ್ ಮಾಡಲಾಗಿತ್ತು. ಅದರಲ್ಲಿ ನರೇಂದ್ರ ಮೋದಿಯನ್ನು ಹಾಗೂ ಬಿಜೆಪಿಯನ್ನು ಗೇಲಿ ಮಾಡುವಂತಹ ಟ್ರೋಲ್ ಗಳನ್ನು ಪ್ರಕಟಿಸಲಾಗಿತ್ತು. ಇದೀಗ ಮತ್ತೊಮ್ಮೆ ದೆಹಲಿ ಬಿಜೆಪಿಯ ಅಧಿಕೃತ ವೆಬ್ ಸೈಟ್ ಹ್ಯಾಕ್ ಆಗಿದೆ ಎಂದು ತಿಳಿದು ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಪ್ರತಿಜ್ಞಾ ವಿಧಿ ಸ್ವೀಕರಿಸುವ ಸಂದರ್ಭದಲ್ಲೇ ವೆಬ್ ಸೈಟ್ ಹ್ಯಾಕ್ ಮಾಡಲಾಗಿದೆ. ಮಾತ್ರವಲ್ಲದೇ ವೆಬ್ ಸೈಟ್ ನಾದ್ಯಂತ ಬೀಫ್ ಚಿತ್ರಗಳು ಹಾಗೂ ವಿವಿಧ ಖಾದ್ಯಗಳ ಹೆಸರನ್ನು ಸೇರಿಸಲಾಗಿದೆ.

ಪ್ರಮುಖ ಕ್ಯಾಟಗರಿಗಳು ಇರುವ ಸ್ಥಳದಲ್ಲಿ ಎಲ್ಲವನ್ನೂ ಬೀಫ್ ಎಂದು ಮಾರ್ಪಾಡು ಮಾಡಲಾಗಿದೆ. ಬೀಫ್ ಖಾದ್ಯಗಳನ್ನು ಮಾರುವ ಅಪ್ಲಿಕೇಶನ್ ರೀತಿಯಲ್ಲಿ ಮಾರ್ಪಾಡು ಮಾಡಲಾಗಿದೆ. ಮಾತ್ರವಲ್ಲದೇ ಬೀಫ್ ಕರಿ, ಬೀಫ್ ಫ್ರೈ, ಸೌತ್ ಇಂಡಿಯಾ ಬೀಫ್ ಫ್ರೈ ಮುಂತಾದ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಬೀಫ್ ಖಾದ್ಯದ ಫೋಟೊವನ್ನು ಕೂಡಾ ಪ್ರಕಟಿಸಿದ್ದು, ಅದರೊಂದಿಗೆ ಹ್ಯಾಕ್ ಮಾಡಿದವರ ಹೆಸರು ಕೂಡಾ ಹಾಕಲಾಗಿದೆ. ಶ್ಯಾಡೋ ವೈಪರ್ ಎಂಬ ಹ್ಯಾಕರ್ ಈ ವೆಬ್ ಸೈಟ್ ಅನ್ನು ಹ್ಯಾಕ್ ಮಾಡಿದ್ದಾಗಿ ಅದರಲ್ಲೇ ಬರೆಯಲಾಗಿದೆ. ಸದ್ತ ಹ್ಯಾಕರ್ ಕುರಿತಾದಂತೆ ಮಾಹಿತಿ ಕಲೆ ಹಾಕುತ್ತಿದ್ದಾರೆಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here