ತನಗೆ ಸಿಕ್ಕ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪುಟಾಣಿ ಅಭಿಮಾನಿಗೆ ನೀಡಿದ ವಾರ್ನರ್!

0
1067

ನ್ಯೂಸ್ ಕನ್ನಡ ವರದಿ : ಟಾಂಟಾನ್‌ನಲ್ಲಿ ನಡೆದ ಪಂದ್ಯದಲ್ಲಿ 111 ಎಸೆತಗಳಲ್ಲಿ 107 ರನ್ ಗಳಿಸಿದ ಡೇವಿಡ್ ವಾರ್ನರ್, ಆಸ್ಟ್ರೇಲಿಯಾದ ಗೆಲುವಿಗೆ ಕಾರಣರಾಗಿದ್ದರು. ಹೀಗಾಗಿ ಪಂದ್ಯಶ್ರೇಷ್ಠ ಗೌರವ ಅವರಿಗೆ ಅನಾಯಾಸವಾಗಿ ಒಲಿದಿತ್ತು. ಪಂದ್ಯ ಶ್ರೇಷ್ಠ ಪ್ರಶಸ್ತಿಯ ಟ್ರೋಫಿ ಪಡೆದುಕೊಂಡ ಬಳಿಕ ಅವರು ಅಭಿಮಾನಿಗಳ ಸಾಲಿನತ್ತ ತೆರಳಿದ್ದರು. ಅಲ್ಲಿ ಅಭಿಮಾನಿಗಳು ನೀಡುತ್ತಿದ್ದ ವಸ್ತುಗಳ ಮೇಲೆ ಹಸ್ತಾಕ್ಷರ ಹಾಕುತ್ತಿದ್ದರು.

ಪಂದ್ಯದ ಸಂದರ್ಭದಲ್ಲಿ ಬಿಡುವಿನ ವೇಳೆ ಅಥವಾ ಪಂದ್ಯ ಮುಗಿದ ಬಳಿಕ ಆಟಗಾರರು ಗ್ಯಾಲರಿಯಲ್ಲಿ ಕುಳಿತು ಕೈಚಾಚುವ ಅಭಿಮಾನಿಗಳಿಗೆ ಹಸ್ತಾಕ್ಷರ ಹಾಕುವುದು ಸಾಮಾನ್ಯ. ಆದರೆ, ವಾರ್ನರ್ ತಮಗೆ ದೊರೆತ ಪಂದ್ಯಶ್ರೇಷ್ಠ ಟ್ರೋಫಿಯನ್ನೇ ಅಭಿಮಾನಿಯ ಕೈಗೆ ಕೊಟ್ಟಿದ್ದು ವಿಶೇಷ. ಇದಕ್ಕೆ ಪ್ರತಿಕ್ರಿಯಿಸಿದ ‘ವಾರ್ನರ್ ನನಗೆ ಟ್ರೋಫಿ ಕೊಟ್ಟಿದ್ದು ತುಂಬಾ ಖುಷಿಯಾಗುತ್ತಿದೆ. ನಾವು ಸಂತಸದಿಂದ ಬಾವುಟ ಹಾರಿಸುತ್ತಿದ್ದೆವಷ್ಟೇ. ಅವರು ನಮ್ಮ ಬಳಿ ಬಂದು ಅದನ್ನು ಕೊಟ್ಟರು. ನನಗೆ ಅವರೆಂದರೆ ನಿಜವಾಗಿಯೂ ಬಹಳ ಇಷ್ಟ’ ಎಂದು ಪುಟಾಣಿ ಹೇಳಿಕೊಂಡಿದ್ದಾನೆ.

ಆಸ್ಟ್ರೇಲಿಯಾದ ಹಳದಿ ಜೆರ್ಸಿ ತೊಟ್ಟಿದ್ದ ತಮ್ಮ ಪುಟಾಣಿ ಅಭಿಮಾನಿಯೊಬ್ಬನನ್ನು ಕಂಡ ವಾರ್ನರ್, ತಮ್ಮ ಕೈಯಲ್ಲಿದ್ದ ಪಂದ್ಯಶ್ರೇಷ್ಠ ಟ್ರೋಫಿಯ ಪೆಟ್ಟಿಗೆ ಮೇಲೆ ತಮ್ಮ ಸಹಿ ಹಾಕಿ ಪುಟಾಣಿ ಪೋರನ ಕೈಗಿತ್ತರು. ವಾರ್ನರ್ ಅವರ ಈ ನಡೆ ಕಂಡು ನೆರೆದಿದ್ದ ಅಭಿಮಾನಿಗಳು ಪುಳಕಿತರಾದರು.

LEAVE A REPLY

Please enter your comment!
Please enter your name here