ಟ್ರೆಂಡಿಂಗ್ ಆಗಲು ಸರತಿ ಸಾಲಿನಲ್ಲಿ ಬಾಲಿವುಡ್ ನಟಿಯರು; ‘ಡರ್ಟಿ ಪಿಕ್ಚರ್’ ಖ್ಯಾತಿ ವಿದ್ಯಾ ಬಾಲನ್ ಫೋಟೊ ವೈರಲ್!

0
1540

ನ್ಯೂಸ್ ಕನ್ನಡ ವರದಿ (12-6-2019): ಪ್ರಿಯಾಂಕಾ ಚೋಪ್ರಾ, ಕರೀನಾ ಕಪೂರ್ ಟ್ರೆಂಡಿಂಗ್ ಆದ ಬಳಿಕ ಈಗ ‘ಡರ್ಟಿ ಪಿಕ್ಚರ್’ ಖ್ಯಾತಿಯ ವಿದ್ಯಾ ಬಾಲನ್ ಅವರು ತಮ್ಮ ಇನ್ಸ್ಟಾಗ್ರಾಮ್’ನಲ್ಲಿ ಶೇರ್ ಮಾಡಿರುವ ಫೋಟೊಗಳು ವೈರಲ್ ಆಗಿವೆ. ವಿದ್ಯಾ ತಮ್ಮ ಸ್ನೇಹಿತರ ಜತೆ ರಜೆಯ ಮಜಾವನ್ನು ಬಾಲಿಯಲ್ಲಿ ಕಳೆಯುತ್ತಿದ್ದು ಕಡಲ ಕಿನಾರೆಯ ಚಿತ್ರಗಳು ವೈರಲ್ ಆಗುತ್ತಾ ಇದೆ.

ಕಡಲ ಕಿನಾರೆಯಲ್ಲಿ ಎಂಜಾಯ್ ಮಾಡ್ತಿರುವ ಫೋಟೋಗಳನ್ನು ಹಾಕಿ, ತಮ್ಮ ಸ್ನೇಹಿತರನ್ನು ಟ್ಯಾಗ್ ಮಾಡಿ ಒಳ್ಳೆಯ ಕ್ಯಾಂಡಿಡ್ ಫೋಟೋಗಳಿಗೆ ಧನ್ಯವಾದ. ಐ ಲವ್ ಮೈ ಡ್ರೆಸ್ ಎಂದು ಬರೆದು ವಿದ್ಯಾ ಪೋಸ್ಟ್ ಮಾಡಿದ್ದಾರೆ. ವಿದ್ಯಾ ಅವರ ಪರದೆ ಹೊರಗಿನ ಬೋಲ್ಡ್ ಲುಕ್‍ಗೆ ಅಭಿಮಾನಿಗಳು ಮರುಳಾಗಿದ್ದಾರೆ.

ಬಾಲಿವುಡ್‍ನ ಅನೇಕ ಕಲಾವಿದರು ವಿದ್ಯಾ ಫೋಟೋಗೆ ಪ್ರತಿಕ್ರಿಯೆ ನೀಡಿದ್ದಾರೆ. ಸೋನಾಕ್ಷಿ ಸಿನ್ಹಾ ಪ್ರತಿಕ್ರಿಯಿಸಿ `ನನ್ನನ್ನು ಯಾಕೆ ನಿಮ್ಮ ಜೊತೆ ಕರೆದುಕೊಂದು ಹೋಗಿಲ್ಲಾ’ ಎಂದು ಪ್ರಶ್ನಿಸಿದರೆ, ಪ್ರಿಯಾಂಕ ಚೋಪ್ರಾ `ಸ್ಟನ್ನರ್’ ಎಂದು, ಏಕ್ತಾ ಕಪೂರ್ `ಗಾರ್ಜಿಯಸ್’ ಎಂದು ಕಮೆಂಟ್ ಮಾಡಿದ್ದಾರೆ. ಅಲ್ಲದೆ ವಿದ್ಯಾ ಅವರು ಈ ಫೋಟೋಗಳನ್ನು ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ 1 ಲಕ್ಷಕ್ಕಿಂತಲೂ ಹೆಚ್ಚು ಲೈಕ್ಸ್ ಸಿಕ್ಕಿದೆ.

LEAVE A REPLY

Please enter your comment!
Please enter your name here