24 ರ ನಂತರ ಬಿಜೆಪಿ ಶಾಸಕರೇ ಕಾಂಗ್ರೆಸ್ ಸೇರಲಿದ್ದಾರೆ: ವೇಣುಗೋಪಾಲ್ ಸ್ಫೋಟಕ ಹೇಳಿಕೆ!

0
210

ಕಲಬುರಗಿ: ಸೋಮವಾರ ಕಲಬುರ್ಗಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಮಾತನಾಡಿ, ಮೇ 23ರ ನಂತರ ಕೆಲ ಬಿಜೆಪಿ ಶಾಸಕರು ಕಾಂಗ್ರೆಸ್ ಗೆ ಬರಲಿದ್ದಾರೆ. ಬಿಜೆಪಿ ಅವರು ನಿರೀಕ್ಷಿಸಿದಂತೆ ಕಾಂಗ್ರೆಸ್ಸಿನ ಯಾವ ಶಾಸಕರು ಕೂಡ ಬಿಜೆಪಿಗೆ ಹೋಗುವುದಿಲ್ಲ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಮೈತ್ರಿ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ನಾವು ಐದು ವರ್ಷ ಆಡಳಿತ ಪೂರ್ಣಗೊಳಿಸಲಿದ್ದೇವೆ . ಬಿಜೆಪಿಯವರು ನಿರೀಕ್ಷಿಸಿದಂತೆ ಯಾವ ಕಾರ್ಯವೂ ನಡೆಯುವುದಿಲ್ಲ ನಮ್ಮ ಶಾಸಕರು ಕಾಂಗ್ರೆಸ್ ನಿಂದ ಬಿಜೆಪಿಗೆ ಹೋಗುವ ಯಾವುದೇ ಮಾತಿಲ್ಲ ಎಂದು ವೇಣುಗೋಪಾಲ್ ಸ್ಪಷ್ಟ ಪಡಿಸಿದರು.

ಮೇ 23ರ ಬಳಿಕವೂ ಸರ್ಕಾರ ಮುಂದುವರಿಯಲಿದೆ. ಮೈತ್ರಿ ಸರಕಾರದಲ್ಲಿ ಏನು ಭಿನ್ನಾಭಿಪ್ರಾಯವಿಲ್ಲ ಸಣ್ಣಪುಟ್ಟ ತೊಂದರೆಗಳನ್ನು ನಾವು ನಮ್ಮೊಳಗೆ ಬಗೆಹರಿಸುತ್ತೇವೆ . ಆದರೆ ಕೇಂದ್ರದಲ್ಲಿ ಮತ್ತೆ ಮೋದಿ ಸರ್ಕಾರ ಬರಲು ಸಾಧ್ಯವಿಲ್ಲ ಎಂದು ನುಡಿದರು .

ಶಿವಲ್ಲಿ ನಿಧನದಿಂದಾಗಿ ಕುಂದಗೋಳದಲ್ಲಿ ಚುನಾವಣೆ ಅನಿವಾರ್ಯವಾಗಿದೆ, ಚಿಂಚೋಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ರಾಜಿನಾಮೆಯಿಂದಾಗಿ ಉಪಚುನಾವಣೆ ನಡೆಯುವುದು ಅನಿವಾರ್ಯವಾಗಿರಲಿಲ್ಲ. ಉಮೇಶ್ ಜಾದವ್ ಗೆ ಸಿಎಂ ರಾಜಕೀಯ ಕಾರ್ಯದರ್ಶಿ ಸೇರಿದಂತೆ ಹಲವು ಹುದ್ದೆಗಳನ್ನು ನೀಡಲಾಗಿತ್ತು ಎಂದು ವೇಣುಗೋಪಾಲ್ ರವರು ಜಾದವ್ ವಿರುದ್ಧ ಸಮಾಧಾನ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here