40 ವರ್ಷ ತುಂಬಿದ ಬಳಿಕ ಮಹಿಳೆ ಆಕರ್ಷಕವಾಗಿ ಕಾಣಲು ಕಾರಣವೇನು?

0
828

ನ್ಯೂಸ್ ಕನ್ನಡ ವರದಿ(10-2-2019)ವಿದ್ಯಾಬಾಲನ್ ತನ್ನ ವಿಶೇಷ ನಟನೆಯಿಂದ ಪ್ರಸಿದ್ಧಿಗೆ ಬಂದವರು. ಮಾದಕ ಸೌಂದರ್ಯದ ಈಕೆ ಆಯ್ದ ಚಿತ್ರಗಳಲ್ಲಿ ಮಾತ್ರ ನಟಿಸುತ್ತಿದ್ದು, ಪಾತ್ರಕ್ಕೆ ಜೀವ ತುಂಬುವುದರಲ್ಲಿ ಎಂದೂ ಸೋತವರಲ್ಲ. ಡರ್ಟಿ ಸಿನಿಮಾದಲ್ಲಿ ಸಿಲ್ಮ್ ಸ್ಮಿತಾ ಪಾತ್ರದಲ್ಲಿ ಬೋಲ್ಡ್ ಆಗಿ ಪ್ರಸಿದ್ಧಿಗೆ ಬಂದ ವಿದ್ಯಾಬಾಲನ್ “ತುಮಾರೆ ಸುಲು” ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಲವು ಚಿತ್ರಗಳಲ್ಲಿ ನಾನಾ ರೀತಿಯಲ್ಲಿ ಕಾಣಿಸಿಕೊಂಡಿರುವ ವಿದ್ಯಾಬಾಲನ್, ಮಹಿಳಾ ಕೇಂದ್ರಿತ ಪಾತ್ರದಿಂದಾಗಿ ಬಾಲಿವುಡ್ ನಲ್ಲಿ ಟೀಕೆಗಳ ಹೊರತಾಗಿಯೂ ತನ್ನದೇ ಆದ ಛಾಪು ಮೂಡಿಸಿದವರು. ನಲ್ವತ್ತರ ಹರೆಯಕ್ಕೆ ಕಾಲಿಡುತ್ತಿರುವ ವಿದ್ಯಾ ಆತ್ಮವಿಶ್ವಾಸದ ಮಾತುಗಳ ಮೂಲಕ ಮಹಿಳೆಯೊಳಗೆ ಸುಪ್ತವಾಗಿರುವ ಸ್ವಾಭಾವವೊಂದನ್ನು ಪರಿಚಯಿಸಿದ್ದಾರೆ.

ನಲ್ವತ್ತರ ನಂತರ ಹೆಣ್ಣುಮಕ್ಖಳಿಗೆ ಸಿನಿಮಾದಲ್ಲಿ ಅವಕಾಶ ಕಡಿಮೆಯಾಗುತ್ತಾ ಬರುವುದಲ್ಲದೆ ತಮ್ಮ ಗ್ಲಾಮರ್, ಕುಟುಂಬ, ಸಂಸಾರ, ಗಂಡ, ಮಕ್ಕಳು ಅಂತ ತ್ಯಜಿಸುವ ಕಾರಣದಿಂದಲೊ ಏನೋ ಮತ್ತೆ ನಟನಾ ಕ್ಷೇತ್ರದಿಂದ ದೂರವಾಗ್ತಾರೆ.ಮಹಿಳೆಯರು 40 ವರ್ಷ ತುಂಬಿದ ನಂತರ ಹಾಟ್ ಹಾಗೂ ನಾಟಿಯಾಗಿ ಕಾಣುತ್ತಾರೆ. ಸಾಮಾನ್ಯವಾಗಿ ಲಜ್ಜೆಯನ್ನು ಹೊಂದಿರಬೇಕು, ಸಂಕೋಚದಿಂದಿರಬೇಕು ಮತ್ತು ಲೈಂಗಿಕತೆಯನ್ನು ಸುಖಿಸಬಾರದು ಎಂದು ಕಲಿತಿರುತ್ತೇವೆ. ಆದರೆ, ವಯಸ್ಸಾದಂತೆ ಮಹಿಳೆಯರು ಹೆಚ್ಚು ಸ್ಥಿತ ಪ್ರಜ್ಞರಾಗುತ್ತರಾರೆ. ಏಕೆಂದರೆ, ಆಗ ಅವರು ಬೇರೆಯವರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ, ಕೇವಲ ತಮ್ಮ ಬಗ್ಗೆಯಷ್ಟೇ ಯೋಚಿಸಿರುತ್ತಾರೆ. ಇದರಿಂದ ಹೆಚ್ಚು ಖುಷಿಯಾಗಿರುತ್ತಾರೆ ಎಂದು ಮಹಿಳೆಯರ ಸ್ವಭಾವದ ಬಗೆಗೆ ವಿದ್ಯಾಬಾಲನ್ ನಿಯತಕಾಲಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಪ್ರಸಿದ್ಧ ಗಣಿತಶಾಸ್ತ್ರಜ್ಞರಾದ ಶಂಕುತಲಾ ಬಯೋಪಿಕ್ ನಲ್ಲಿ ವಿದ್ಯಾಬಾಲನ್ ನಟಿಸುತ್ತಿದ್ದು. ಈ ಚಿತ್ರದಲ್ಲಿ ಸನ್ಯಾ ಮಲ್ದೋತ್ರಾ ಆಕೆಯ ಮಗಳಾಗಿ ನಟಿಸಲಿದ್ದಾರೆ ಎಂಬುದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here