ರುದ್ರರೂಪ ತಳೆಯುತ್ತಿರುವ ‘ವಾಯು’ ಚಂಡಮಾರುತ; ಗುಜರಾತ್’ನಲ್ಲಿ 3 ಲಕ್ಷ ಮಂದಿ ಸ್ಥಳಾಂತರ!

0
450

ನ್ಯೂಸ್ ಕನ್ನಡ ವರದಿ (13-6-2019): ‘ವಾಯು’ ಚಂಡಮಾರುತದ ಭೀತಿಗೆ ಗುಜರಾತ್‌ನಲ್ಲಿ 3 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದು ವರದಿ ಲಭ್ಯವಾಗಿದೆ. ಇಂದು ಗುಜರಾತ್‌ಗೆ ವಾಯು ಚಂಡಮಾರುತ ಪ್ರವೇಶಿಸಲಿದ್ದು, ಈಗಾಗಲೇ ಎಲ್ಲ ರೀತಿಯ ತಯಾರಿ ನಡೆದಿದೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಹಳ್ಳಿಗಳನ್ನು ಖಾಲಿ ಮಾಡಿಲಾಗಿದೆ ಎಂದು ತಿಳಿದುಬಂದಿದೆ.

ಚಂಡಮಾರುತವನ್ನು ಎದುರಿಸಲು ರಾಷ್ಟ್ರೀಯ ವಿಕೋಪ ನಿರ್ವಹಣಾ ಪಡೆಯು 36 ತಂಡಗಳನ್ನು ನಿಯೋಜಿಸಿದೆ. ಇನ್ನೂ 11 ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಎಸ್‌ಡಿಆರ್‌ಎಫ್‌ನ 9, ಎಸ್‌ಆರ್‌ಪಿಯ 14 ತಂಡಗಳು ಹಾಗೂ ನೌಕಾಪಡೆಯ 300 ಕಮಾಂಡೋಗಳನ್ನು ನಿಯೋಜಿಸಲಾಗಿದೆ. ಗುಜರಾತ್‌ನಲ್ಲಿ ಈಗಾಗಲೇ ರೆಡ್‌ ಅಲರ್ಟ್‌ ಘೋಸಿಲಾಗಿದ್ದು, ಗೃಹ ಮಂತ್ರಿ ಅಮಿತ್ ಶಾ ಅವರು ಚಂಡಮಾರುತದ ಬಗ್ಗೆ ಸಭೆಯನ್ನೂ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here