ಗುಜರಾತ್; ಪಥ ಬದಲಿಸಿದ ‘ವಾಯು’ ಚಂಡಮಾರುತ, ಭಾರೀ ಮಳೆ ಸಾಧ್ಯತೆ

0
1697

ನ್ಯೂಸ್ ಕನ್ನಡ ವರದಿ (13-6-2019): ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಉಂಟಾದ ‘ವಾಯು’ ಚಂಡಮಾರುತ, ಗುಜರಾತ್ ನಲ್ಲಿ ವ್ಯಾಪಕ ಆತಂಕಕ್ಕೆ ಕಾರಣವಾಗಿತ್ತು. ಈಗ ರಾತ್ರೋ ರಾತ್ರಿ ತನ್ನ ಪಥ ಬದಲಿಸಿದ್ದು, ಗುಜರಾತ್ ಕರಾವಳಿಯಕ್ಕ ಧಾವಿಸುತ್ತಿದ್ದ ಚಂಡಮಾರುತ ಇದೀಗ ಸಮುದ್ರದತ್ತ ತಿರುಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಆದರೂ ಗುಜರಾತ್ ಕರಾವಳಿ ಪ್ರದೇಶಗಳ ಮೇಲೆ ಇದರ ಪ್ರಭಾವವಿದ್ದು, ಗುಜರಾತ್ ಕರಾವಳಿಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಪ್ರಸ್ತುತ ವೆರವಲ್ ನ ಜಲೇಶ್ವರ್ ನಲ್ಲಿ ಭಾರಿ ಗಾಳಿ ಸಹಿತ ಮಳೆಯಾಗುತ್ತಿದ್ದು, ವಾಯು ಚಂಡಮಾರುತ ಪೋರ್ ಬಂದರ್ ಮತ್ತು ಮಹುವಾ ಬೀಚ್ ಗಳ ನಡುವೆ ಹಾದುಹೋಗಲಿದೆ ಎನ್ನಲಾಗಿದೆ. ಹಲವು ಪ್ರದೇಶದಲ್ಲಿ ಬಿರುಗಾಳಿ ಸಹಿತ ಮಳೆಯಾಗುತ್ತಿದೆ. ಇಲ್ಲಿ ಪ್ರತೀ ಗಂಟೆಗೆ 155-165 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ವಾಯು ಚಂಡಮಾರುತ ಹಾದುಹೋಗುವ ಸಂದರ್ಭದಲ್ಲಿ ಇದರ ವೇಗ ಪ್ರತೀ ಗಂಟೆಗೆ 180 ಕಿಮೀ ದಾಟಲಿದೆ ಎನ್ನಲಾಗಿದೆ. ಹೀಗಾಗಿ ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳು ಏಳುತ್ತಿದ್ದು, ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಕರ್ನಾಟಕ, ಮಹಾರಾಷ್ಟ್ರದಲ್ಲೂ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

LEAVE A REPLY

Please enter your comment!
Please enter your name here