ವಿಶ್ವಕಪ್ ಪಂದ್ಯ; ಭಾರತ, ಪಾಕಿಸ್ತಾನ ಹಣಾಹಣಿ, ಭಾರತದ ಗೆಲುವಿಗೆ ವಾರಣಾಸಿಯಲ್ಲಿ ವಿಶೇಷ ಆರತಿ!

0
142

ನ್ಯೂಸ್ ಕನ್ನಡ ವರದಿ (16-6-2019): ಕ್ರಿಕೆಟ್​ ವಿಶ್ವಕಪ್​ನಲ್ಲಿ ಇಂದು (ಭಾನುವಾರ) ಭಾರತ ಮತ್ತು ಪಾಕಿಸ್ತಾನದ ನಡುವೆ ಪಂದ್ಯ ನಡೆಯಲಿದೆ. ಇಂದು ವಿಶ್ವತಂದೆಯರ ದಿನಾಚರಣೆ, ತಂದೆಯೊಡನೆ ಸೆಣಸಾಡುತ್ತಿರುವ ಪಾಕಿಸ್ತಾನ ಎಂದೆಲ್ಲಾ ಮೀಮ್’ಗಳು ಹರಿದಾಡುತ್ತಾ ಇದೆ. ಸಾಮಾಜಿಕ ಜಾಲತಾಣಗಳು ಈ ಮೀಮ್ ಗಳಲ್ಲಿ ತುಂಬಿ ಹೋಗಿದೆ. ಈ ಪಂದ್ಯವನ್ನು ವೀಕ್ಷಿಸಲು ಜಗತ್ತಿನಾದ್ಯಂತ ಇರುವ ಕ್ರಿಕೆಟ್​ ಪ್ರೇಮಿಗಳು ಟಿವಿಗಳ ಮುಂದೆ ಪ್ರತಿಷ್ಠಾಪನೆಗೊಳ್ಳಲಿದ್ದಾರೆ.

ಭಾರತೀಯ ತಂಡದ ಗೆಲುವಿಗೆ ಹಾರೈಸಿ ಭಾರತದಾದ್ಯಂತ ವಿಶೇಷ ಪೂಜೆ, ಹವನ, ಹೋಮಗಳನ್ನು ಮಾಡಲಾಗುತ್ತಿದೆ. ವಾರಾಣಸಿಯಲ್ಲೂ ಕೂಡ ಇದು ಭರ್ಜರಿಯಾಗಿಯೇ ಸಾಗಿದೆ.ವಾರಾಣಸಿಯ ಜನರು ಭಾರತ ಕ್ರಿಕೆಟ್​ ತಂಡದ ಗೆಲುವಿಗಾಗಿ ಹಾರೈಸಿ ವಿಶೇಷ ಗಾಂಗಾರತಿ ನೆರವೇರಿಸಿದರು. ಭಾರತದ ತ್ರಿವರ್ಣ ಧ್ವಜದ ಜತೆಗೆ ತಂಡದ ಆಟಗಾರರ ಭಾವಚಿತ್ರವಿರುವ ಬ್ಯಾನರ್​ ಹಿಡಿದು, ಗಂಗಾ ನದಿಯಲ್ಲಿ ಎದೆಮಟ್ಟದ ನೀರಿನಲ್ಲಿ ನಿಂತು ವಿಶೇಷ ಆರತಿ ನೆರವೇರಿಸಿದರು. ಈ ಫೋಟೊಗಳು ಸಾಮಾಜಿಕ ಜಾಲತಾಣದಾದ್ಯಂತ ತಿರುಗುತ್ತಾ ಇದೆ.

LEAVE A REPLY

Please enter your comment!
Please enter your name here