ಹಿಂದಿ ಹಾರ್ಟ್ ಸಿಟಿ ಉತ್ತರಪ್ರದೇಶದಲ್ಲೇ 8 ಲಕ್ಷ ವಿಧ್ಯಾರ್ಥಿಗಳು ಹಿಂದಿಯಲ್ಲೇ ಫೇಲ್.!

0
26

ನ್ಯೂಸ್ ಕನ್ನಡ ವರದಿ: ಹಿಂದಿ ಹಾರ್ಟ್‌ಲ್ಯಾಂಡ್ ಎಂದು ಕರೆಯಲ್ಪಡುವ ಉತ್ತರಪ್ರದೇಶದಲ್ಲಿ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಹಿಂದಿಯಲ್ಲೇ ಫೇಲ್ ಆಗಿದ್ದಾರೆ.

ಪ್ರೌಢ ಹಾಗೂ ಮಾಧ್ಯಮಿಕ ಶಾಲೆಯ ರಾಜ್ಯ ಮಟ್ಟದ ಪರೀಕ್ಷೆಯಲ್ಲಿ ಸುಮಾರು 55 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಮಾಧ್ಯಮಿಕ ಶಾಲೆ ಪರೀಕ್ಷೆಯಲ್ಲಿ ಸುಮಾರು 2 ಲಕ್ಷ 70 ಸಾವಿರ ಹಾಗೂ ಪ್ರೌಢಶಾಲೆಗಳಲ್ಲಿ 5 ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.

ಇದಲ್ಲದೆ ಸುಮಾರು 2.39 ಲಕ್ಷ ವಿದ್ಯಾರ್ಥಿಗಳು ಹಿಂದಿ ಪರೀಕ್ಷೆಗೆ ಹಾಜರಾಗೇ ಇಲ್ಲ.ಹಿಂದಿ ಮಾತೃಭಾಷೆ ಹೊಂದಿರುವ ರಾಜ್ಯದಲ್ಲೇ ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಶಿಕ್ಷಣ ತಜ್ಞರ ಆಕ್ರೋಶಕ್ಕೆ ಕಾರಣವಾಗಿದೆ.

ಶಿಕ್ಷಕರು ಹಾಗೂ ಸರ್ಕಾರದ ನಿರ್ಲಕ್ಷ್ಯದಿಂದಲೇ ಈ ಫಲಿತಾಂಶ ಬಂದಿದೆ ಎಂದು ಶಿಕ್ಷಣ ತಜ್ಞರು ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here