ನ್ಯೂಸ್ ಕನ್ನಡ ವರದಿ(07-04-2018): ನ್ಯಾಯಬೆಲೆ ಅಂಗಡಿಯಾತ ತನಗೆ ಕಡಿಮೆ ರೇಷನ್ ನೀಡಿದ್ದನ್ನು ಪ್ರಶ್ನಿಸಿದ 75 ವರ್ಷ ಪ್ರಾಯದ ಮಹಿಳೆಯೋರ್ವಳ ಮೇಲೆ ಅಂಗಡಿ ಮಾಲಕ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪರಿಣಾಮ ಮಹಿಳೆ ಸಾವನ್ನಪ್ಪಿದ ಘಟನೆ ಮುಝಫರ್ ನಗರದಿಂದ ವರದಿಯಾಗಿದೆ.
ಆಸಿ ಎನ್ನುವ ಮಹಿಳೆ ತನ್ನ ತಿಂಗಳ ರೇಷನ್ ತರುವ ಸಲುವಾಗಿ ಸಮೀಪದ ನ್ಯಾಯಬೆಲೆ ಅಂಗಡಿಗೆ ಹೋಗಿದ್ದಳು. ನ್ಯಾಯಬೆಲೆ ಅಂಗಡಿಯಾತ ಆಕೆಗೆ ಲೆಕ್ಕಕ್ಕಿಂತ ಕಡಿಮೆ ರೇಷನ್ ಕೊಟ್ಟಿದ್ದು, ಅದರ ಕಾರಣವನ್ನು ಕೇಳಿ ಪ್ರತಿಭಟಿಸಿದ್ದಕ್ಕಾಗಿ ಮಹಿಳೆಗೆ ಯದ್ವಾತದ್ವಾ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾದ ಕೆಲವೇ ಕ್ಷಣಗಳಲ್ಲಿ ಆಕೆ ಸಾವನ್ನಪ್ಪಿದಳು ಎಂದು ಪೋಲಿಸರು ತಿಳಿಸಿದ್ದಾರೆ.
ಕಳೆದ ಶುಕ್ರವಾರ ಈ ಘಟನೆ ನಡೆದಿದ್ದು, ಘಟನೆಯ ನಂತರ ಸ್ಥಳದಲ್ಲಿ ಉಧ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಮಹಿಳೆಯ ಹೆಣವನ್ನು ಪೋಲಿಸರಿಗೆ ಬಿಟ್ಟುಕೊಡದೆ ಗ್ರಾಮಸ್ಥರು ಕೆಲಕಾಲ ಪ್ರತಿಭಟಿಸಿದರು.
ಪೋಲಿಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ. ನ್ಯಾಯ ಬೆಲೆ ಅಂಗಡಿ ಮಾಲಕ ನಸೀಮ್ ಹಾಗೂ ಆತನೊಂದಿಗೆ ಹಲ್ಲೆಗೆ ಸಹಕರಿಸಿದ ಶಮೀಮ್ ಹಾಗೂ ಜಾನು ಅವರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಭುರಾ ವೃತ್ತ ನಿರೀಕ್ಷಕ ರಿಝ್ವಾನ್ ಹೇಳಿದ್ದಾರೆ.