ಉತ್ತರ ಪ್ರದೇಶ: ಆ್ಯಂಬುಲೆನ್ಸ್ ಇಲ್ಲದೆ ತಾಯಿಯ ಆಕ್ಸಿಜನ್ ಸಿಲಿಂಡರ್ ಹೊತ್ತು ನಡೆದ ಮಗ

0
578

ನ್ಯೂಸ್ ಕನ್ನಡ ವರದಿ(07-04-2018): ಜನರ ಮೂಲಭೂತ ಸೌಕರ್ಯದ ಕೊರತೆಯ ಕಾರಣದಿಂದಾಗಿ ದಿನಕ್ಕೊಂದು ಪ್ರಕರಣ ಬೆಳಕಿಗೆ ಬರುತ್ತಿರುವ ಉತ್ತರ ಪ್ರದೇಶದಲ್ಲಿ ಇನ್ನೊಂದು ಘಟನೆ ವರದಿಯಾಗಿದ್ದು, ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್ ಬಾರದ ಕಾರಣ ನಿರ್ವಾಹವಿಲ್ಲದೆ ಮಗ ತನ್ನ ತಾಯಿಯ ಆಕ್ಸಿಜನ್ ಸಿಲಿಂಡರನ್ನು ಹೆಗಲ ಮೇಲೆ ಹೊತ್ತೊಯ್ದ ಘಟನೆಯು ಉತ್ತರ ಪ್ರದೇಶದ ರುನಕ್ತಾ ಎಂಬಲ್ಲಿ ವರದಿಯಾಗಿದೆ.

ಆಸ್ಪತ್ರೆಯ ಬಳಿ ಆ್ಯಂಬುಲೆನ್ಸ್ ಗಾಗಿ ತಾಯಿ ಹಾಗೂ ಮಗ ಬಹಳಷ್ಟು ಸಮಯ ಕಾದಿದ್ದಾರೆ. ಆದರೆ ಆ್ಯಂಬುಲೆನ್ಸ್ ಬಾರದ ಕಾರಣ ಆಕ್ಸಿಜನ್ ಸಿಲಿಂಡರ್ ನ್ನು ಹೆಗಲ ಮೇಲೆ ಹೊತ್ತುಕೊಂಡು, ಅದಕ ಪೈಪ್ ನ್ನು ಕೈಯಲ್ಲಿ ಹಿಡಿದು ತಾಯಿ ಹಾಗೂ ಮಗ ಮುಂದಕ್ಕೆ ಸಾಗಿದ್ದಾರೆಂದು ತಿಳಿದುಬಂದಿದೆ.

ನಾವು ಆಂಬ್ಯುಲೆನ್ಸ್ ನೀಡಲು ನಿರಾರಿಸಿಲ್ಲ. ಅ್ಯಂಬುಲೆನ್ಸ್ ಕೊಡುವಷ್ಟರಲ್ಲಿ ಅವರು ಸಿಲಂಡರ್ ಹೊತ್ತು ಹೊರ ನಡೆದಿದ್ದಾರೆ. ಆ ಸಮಯದಲ್ಲಿ ಸ್ಥಳದಲ್ಲಿದ್ದ ಕೆಲವು ಮಾಧ್ಯಮಗಳು ಫೋಟೋಕ್ಲಿಕ್ಕಿಸಿದೆ. ಆಸ್ಪತ್ರೆಯ ಸಿಬ್ಬಂದಿಗಳು ತಪ್ಪಿತಸ್ಥರೆಂದು ಕಂಡು ಬಂದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದಿರುವ ಆಗ್ರಾ ಮೆಡಿಕಲ್ ಕಾಲೇಜು ಆಸ್ಪತ್ರೆಯ ಅಧಿಕಾರಿಗಳು ಆಸ್ಪತ್ರೆಯ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ.

LEAVE A REPLY

Please enter your comment!
Please enter your name here