ಉಮ್ರಾ ಯಾತ್ರೆಯ ಹಣವನ್ನು ‘ನಂಡೆ ಪೆಂಙಳ್’ ಅಭಿಯಾನಕ್ಕೆ ನೀಡಿದ ಝಕರಿಯ ಜೋಕಟ್ಟೆ

0
15

ನ್ಯೂಸ್ ಕನ್ನಡ ವರದಿ ಮಂಗಳೂರು: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಾರಥ್ಯದಲ್ಲಿ ನಡೆಯುವ ‘ನಂಡೆ ಪೆಂಙಳ್’ ಅಭಿಯಾನಕ್ಕೆ ಸೌದಿ ಅರೇಬಿಯಾದ ಪ್ರತಿಷ್ಠಿತ ಕಂಪೆನಿ ಅಲ್ ಮುಝೈನ್ ಇದರ ಮಾಲಕರಾದ ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ ಝಕರಿಯ ಜೋಕಟ್ಟೆ ಅವರು ಉಮ್ರಾ ಯಾತ್ರೆಯ ಹಣವನ್ನು ‘ನಂಡೆ ಪೆಂಙಳ್’ ಸಮಿತಿಗೆ ನೀಡಿದರು.

ಈ ಬಾರಿ ಹಜ್ ಮತ್ತು ಉಮ್ರಾ ಯಾತ್ರೆ ಮಾಡಲಾಗದ ಯಾತ್ರಿಕರು ಈ ಸಂದರ್ಭದಲ್ಲಿ ಹಜ್ ಮತ್ತು ಉಮ್ರಾ ಯಾತ್ರೆಗೆ ಕೂಡಿಟ್ಟ ಮೊತ್ತವನ್ನು ಇಂತಹ ಅಸಾಹಯಕರ ಕಣ್ಣೀರೊರೆಸುವ ಯೋಜನೆಗಾಗಿ ವಿನಿಯೋಗಿಸಿದರೆ ಅದಕ್ಕೆ ಸಿಗುವ ಪ್ರತಿಫಲ ಉಮ್ರಾ ನಿರ್ವಹಿಸಿದ್ದಕ್ಕಿಂತ ಕಡಿಮೆಯದ್ದಂತೂ ಆಗಲಾರದು ಎಂದು ‘ನಂಡೆ ಪೆಂಙಳ್’ ಸಮಿತಿ ಅದ್ಯಕ್ಷರಾದ ನೌಷದ್ ಹಾಜಿ ಸೂರಲ್ಪಾಡಿ ಹೇಳಿದರು.

ಅಲ್ ಮುಝೈನ್ ಇದರ ನಿರ್ದೇಶಕರಾದ ಹಸನ್ ಝಾಹಿದ್, ನಂಡೆ ಪೆಂಙಳ್ ಸಮಿತಿ ಅದ್ಯಕ್ಷರಾದ ನೌಷದ್ ಹಾಜಿ ಸೂರಲ್ಪಾಡಿ, ಟಿ.ಆರ್.ಎಫ್ ಸ್ಥಾಪಕಾಧ್ಯಕ್ಷರಾದ ಅಬ್ದುಲ್ ರವೂಫ್ ಪುತ್ತಿಗೆ, ಮಾಸುನ್ ಟೈಲ್ಸ್ ಇದರ ಮಾಲಕರಾದ ಮುನೀರ್ ಅಹಮದ್, ಅಲ್ತಾಫ್, ರಿಯಾಝ್ ಅಹಮದ್ ಕಣ್ಣೂರು, ಇಮ್ರಾನ್ ಅಡ್ಡೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here