ಪಾಕಿಸ್ತಾನಿ ಬಸ್ ಡ್ರೈವರ್ ಮಗ ಬ್ರಿಟನ್ನಿನ ಪ್ರಧಾನಿ ಹುದ್ದೆಯ ರೇಸ್’ನಲ್ಲಿ!

0
242

ನ್ಯೂಸ್ ಕನ್ನಡ ವರದಿ (28-5-2019): ಪಾಕಿಸ್ತಾನ ಮೂಲದ ಬಸ್ ಡ್ರೈವರ್ ರ ಮಗನಾದ, ಸಾಜಿದ್ ಜಾವಿದ್ ಯು.ಕೆ. ಪ್ರಧಾನಿ ರೇಸಿನಲ್ಲಿ ಅಭ್ಯರ್ಥಿಯಾಗಿದ್ದಾರೆ. ಸಾಧಾರಣ ಹಿನ್ನೆಲೆಯ ವ್ಯಕ್ತಿ ಕೂಡಾ ಉನ್ನತ ಸ್ಥಾನಕ್ಕೆ ಏರುವ ಉದಾಹರಣೆ ಇದಾಗಿದೆ. ಸದ್ಯಕ್ಕೆ 49 ವರ್ಷದ ಜಾವಿದ್ ಪ್ರಸಕ್ತ ಪ್ರಧಾನಿ ತೆರೆಸಾ ಮೇ ಅವರ ಸರಕಾರದಲ್ಲಿ ಗೃಹ ಕಾರ್ಯದರ್ಶಿಯಾಗಿದ್ದರು. ಅದಕ್ಕೂ ಮುನ್ನ ಸಾಂಸ್ಕೃತಿಕ ಕಾರ್ಯದರ್ಶಿ ಹುದ್ದೆ ನಿಭಾಯಿಸಿದ್ದರು.

2009ರಲ್ಲಿ ಅವರು ರಾಜಕಾರಣಕ್ಕೆ ಪ್ರವೇಶಿಸಿದರು. ಯು.ಕೆ.ನಲ್ಲಿ ಕನ್ಸರ್ವೆಟಿವ್ ಪಕ್ಷದಲ್ಲಿ ರಾಜಕೀಯ ಧಾಪು ಕಾಲಿಟ್ಟರು. ಸೋಮವಾರದಂದು ತಮ್ಮ ಪಕ್ಷದ ನಾಯಕ ಸ್ಥಾನಕ್ಕೆ ಹಾಗೂ ಸಾಜಿದ್ ಜಾವಿದ್ ರ ಅಭ್ಯರ್ಥಿತನವನ್ನು ಪ್ರಧಾನಿ ಹುದ್ದೆಗೆ ಘೋಷಿಸಲಾಯಿತು. ಇತರ ಎಂಟು ಅಭ್ಯರ್ಥಿಗಳು ಈ ರೇಸ್ ನಲ್ಲಿ ಇದ್ದಾರೆ. ಪ್ರಧಾನಿ ರೇಸ್’ನಲ್ಲಿ ಬೋರಿಸ್ ಜಾನ್ಸನ್ ಅವರು ಮುಂದಿದ್ದು, ಜಾವಿದ್ ಬೋರಿಸ್’ಗೆ ತೀವ್ರ ಪೈಪೋಟಿ ನೀಡಲಿದ್ದಾರೆ. ಇವರನ್ನು ಹೊರತುಪಡಿಸಿ ಇತರ ಏಳು ಆಕಾಂಕ್ಷಿಗಳು ಇದ್ದಾರೆ. ಮೊದಲ ಸುತ್ತಿನಲ್ಲಿ ಮುನ್ನೂರಾ ಹದಿಮೂರು ಕನ್ಸರ್ವೆಟಿವ್ ಸಂಸದರು ಅಭ್ಯರ್ಥಿಗಳಿಗೆ ಮತ ಹಾಕುತ್ತಾರೆ. ಅತಿ ಹೆಚ್ಚು ಮತ ಪಡೆದ ಇಬ್ಬರು ಕಣದಲ್ಲಿ ಉಳಿಯುತ್ತಾರೆ. ಅ ನಂತರ ಇಬ್ಬರ ಪೈಕಿ ಒಬ್ಬರನ್ನು ಒಂದೂಕಾಲು ಲಕ್ಷ ಪಕ್ಷದ ಸದಸ್ಯರ ಮತದಾನದಲ್ಲಿ ಆಯ್ಕೆ ಆಗುತ್ತಾರೆ. ಈ ಪ್ರಕ್ರಿಯೆಯು ಮುಂದಿನ ಪ್ರಧಾನಿ ಆಯ್ಕೆಯಾಗುವ ಜುಲೈ ತನಕ ನಡೆಯಬಹುದು. ಪ್ರಸಕ್ತ ಪ್ರಧಾನಿಯಾದ ತೆರೆಸಾ ಮೇ ಅವರು ಜೂನ್ 7ರಂದು ತಮ್ಮ ಪದವಿಗೆ ರಾಜೀನಾಮೆ ನೀಡುವುದರಿಂದ ಹೊಸ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

LEAVE A REPLY

Please enter your comment!
Please enter your name here