Thursday August 3 2017

Follow on us:

Contact Us

ಎರ್ಮಾಳು: ಎಂಟು ವರ್ಷಗಳಿಂದ ಹಡೀಲು ಬಿದ್ದಿದ್ದ ಗದ್ದೆಗಳು ಮತ್ತೆ ಹಸುರಾಗಿದೆ

ನ್ಯೂಸ್ ಕನ್ನಡ ಉಡುಪಿ (03.08.2017):

ವಿಶೇಷ ವರದಿ : ಶಫೀ ಉಚ್ಚಿಲ

ಎಂಟು ವರ್ಷಗಳಿಂದ ಹಡೀಲು ಬಿದ್ದಿದ್ದ ಮೂರು ಎಕರೆ ಗದ್ದೆ ಮತ್ತೆ ಹಸುರಾಗಿಸಿ ಕಂಗೊಳಿಸುತ್ತಿವೆ. ಉಚ್ಚಿಲ ಬಡಾಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಪಾರಂಪರಿಕ ಕೃಷಿಕ ವಸಂತ ಶೆಟ್ಟಿ ನೈಮಾಡಿ ಅವರ ಸಹಕಾರ ಮತ್ತು ಮಾರ್ಗದರ್ಶನದೊಂದಿಗೆ ಮಂಗಳೂರಿನ ಹೋಟೇಲು ವುಡ್ಲ್ಯಾಂಡ್ಸ್ ಇದರ ಮಾಲಕರ ಮೂಲ ಮನೆಯಾದ ಎರ್ಮಾಳು ಅಪ್ಪಣ್ಣ ಭಟ್ ಮನೆಯಲ್ಲಿನ ಕೃಷಿ ಚಟುವಟಿಕೆಯಿಂದಾಗಿ 3 ಎಕರೆಯಷ್ಟು ಹಡೀಲು ಗದ್ದೆಯು ಪುನಶ್ಚೇತನಗೊಳ್ಳುತ್ತಿದೆ.

ಉಡುಪಿ ಜಿಲ್ಲೆಯ ಎರ್ಮಾಳು ನೈಮಾಡಿಯಲ್ಲಿ ಕಳೆದ ಸುಮಾರು 8 ವರ್ಷಗಳಿಂದ ಹಡೀಲು ಬಿದ್ದಿದ್ದ ಈ ಕೃಷಿಯ ಹೊಯಿಗೆಮಾರು ಗದ್ದೆಯಲ್ಲಿ ಇದೀಗ ಕೃಷಿ ಗದ್ದೆಗೆ ಕಾಯಕಲ್ಪ ನೀಡುವ ಸದುದ್ದೇಶದಿಂದ ಯಾಂತ್ರೀಕೃತ ಉಳುಮೆಯಿಂದ ಗದ್ದೆಯನ್ನು ಹದಮಾಡಿಕೊಂಡು ಸುಮಾರು 30ರಷ್ಟು ಉತ್ತರ ಕರ್ನಾಟಕದ ಗಂಗಾವತಿಯ ಕೃಷಿ ನಾಟಿಯ ಮಹಿಳಾ ಕೂಲಿ ಕಾರ್ಮಿಕರನ್ನು ಬಳಸಿಕೊಂಡು ಗದ್ದೆಗಿಳಿಯುವ ಮುನ್ನ ಗದ್ದೆಯಲ್ಲಿ ದೇವರಿಗೆ ಪೂಜೆಯನ್ನು ಸಲ್ಲಿಸಿ ಕೃಷಿ ನಾಟಿ ಪ್ರಾರಂಭಿಸಿರುತ್ತಾರೆ.

3 ಎಕರೆಯಷ್ಟು ಹಡೀಲು ಬಿದ್ದಿರುವ 3 ಗದ್ದೆಯನ್ನು ಲೀಲಾವತಿ ಭಟ್ ಅವರು ಈ ಬಾರಿಯ ಕೃಷಿ ಚಟುವಟಿಕೆಯನ್ನು ಪ್ರಾರಂಭಿಸಿದ್ದು ಕಜೆಜಯ ಭತ್ತದ ಸಸಿ(ನೇಜಿ)ಯ ನಾಟಿಯಲ್ಲಿ ತೊಡಗಿದ್ದಾರೆ. ಮತ್ತೆ ಕೃಷಿ ಚಟುವಟಿಕೆ ನಡೆಯುವ ಮೂಲಕ ಕೃಷಿ ಗದ್ದೆ ಇದೀಗ ಹಸುರಾಗಿಸಿ ಕಂಗೊಳಿಸುತ್ತಿದೆ. ಪ್ರಸ್ತುತ ಕೃಷಿಯಿಂದ ಸ್ವತಃ ರೈತರೇ ವಿಮುಖರಾಗಿ ಕೆಲವೆಡೆ ಗದ್ದೆಗೆ ಮಣ್ಣು ತುಂಬಿಸಿ ಮಾರಾಟ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿ ಕೃಷಿ ಗದ್ದೆಯನ್ನೇ ವಿನಾಶದಂಚಿಗೆ ತಳ್ಳುತ್ತಿರುವ ಉದಾಹರಣೆಗಳು ಕಣ್ಣಮುಂದಿದ್ದರೆ, ಆಪ್ಪಣ್ಣ ಭಟ್ ಮನೆಯಲ್ಲಿನ ಲೀಲಾವತಿ ಭಟ್, ಪ್ರಸಾದ್ ಭಟ್, ನಾರಾಯಣ ಭಟ್ ಮತ್ತಿತರರು ಈ ಕೃಷಿ ಚಟುವಟಿಕೆ ಪುನರಾರಂಭಗೊಳಿಸಿರುವುದು ಇತರರಿಗೂ ಮಾದರಿಯಾಗಿದ್ದಾರೆ.

ನೆರೆಯ ನೀರಿನಿಂದಾಗಿ ಕೃಷಿ ಕಾರ್ಯವು ಹಾಳಾಗುತ್ತಿತ್ತು. ನಂತರದ ದಿನಗಳಲ್ಲಿ ಕೃಷಿ ಕೂಲಿಯಾಳುಗಳ ಸಮಸ್ಯೆ ತಲೆದೋರಿತ್ತು. ಇದೀಗ ಮಳೆಯ ನೆರೆಯ ನೀರು ಹಾದುಹೋಗಲು ವ್ಯವಸ್ಥೆ ಕಲ್ಪಿಸಿರುವುದರಿಂದ ಕೃಷಿಯನ್ನು ನಡೆಸಲಾಗುತ್ತಿದೆ ಎಂದು ಮಂಗಳೂರಿನ ಹೋಟೇಲು ವುಡ್ಲ್ಯಾಂಡ್ಸ್ ಇದರ ಮಾಲಕರ ಮೂಲ ಮನೆಯವರಾದ ಲೀಲಾವತಿ ಭಟ್ ಹೇಳುತ್ತಾರೆ. ಧನಿ ಒಕ್ಕಲು ಬಾಂಧವ್ಯ ಹೊಂದಿದ್ದ ನಮಗೆ ಇದು ಮಾಲಕರ ಮನೆ. ಮನೆತನದ ಹಿರಿಯರ ನೆನಪಿಗಾಗಿ ಹಡೀಲು ಗದ್ದೆಗಳನ್ನು ಪುನಶ್ಚೇತನಗೊಳಿಸುವಲ್ಲಿ ಆಸಕ್ತಿಯನ್ನು ವಹಿಸಿರುತ್ತೇನೆ. ಮನೆಮಂದಿಯ ಸಹಕಾರದಿಂದ ಹಡೀಲು ಗದ್ದೆಯನ್ನು ಕೃಷಿ ಗದ್ದೆಯಾಗಿ ಪರಿವರ್ತಿಸುವಲ್ಲಿ ಯಶಸ್ಸು, ಸಂತೃಪ್ತತೆ ಇದೆ ಎಂದು ಕೃಷಿ ಪುನಶ್ಚೇತನಕ್ಕೆ ಮಾರ್ಗದರ್ಶಕರಾಗಿರುವ ಉಚ್ಚಿಲ ಬಡಾಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪಾರಂಪರಿಕ ಕೃಷಿಕರಾದ ವಸಂತ ಶೆಟ್ಟಿ ನೈಮಾಡಿ ಸಂತೋಷ ವ್ಯಕ್ತಪಡಿಸಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಅದಾನಿ ಯುಪಿಸಿಎಲ್: ಮುದರಂಗಡಿಯಲ್ಲಿ ರೂ.1.55 ಕೋಟಿ ವೆಚ್ಚದ ಕಾಮಗಾರಿಗಳ ಅನುಮೋದನೆ

ಮುಂದಿನ ಸುದ್ದಿ »

ಗ್ರಾಮೀಣ ಕ್ರೀಡೆಗಳಿಂದಾಗಿ ಯುವಪೀಳಿಗೆ ಗದ್ದೆ ಕಡೆಗೆ ಮುಖಮಾಡುವಂತಾಗಿದೆ : ಸುರೇಶ್ ಶೆಟ್ಟಿ ಗುರ್ಮೆ

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×