Sunday March 13 2016

Follow on us:

Contact Us

ಮಳೆಗಾಲಕ್ಕೆ ಇನ್ನೆರಡೇ ತಿಂಗಳು-ವಾರಾಹಿ ಯೋಜನೆ ನನೆಗುದಿಗೆ

ನ್ಯೂಸ್ ಕನ್ನಡ ವರದಿ-ಕುಂದಾಪುರ: ಇನ್ನೇನು ಮಳೆಗಾಲಕ್ಕೆ ಎರಡೇ ತಿಂಗಳುಗಳು ಬಾಕಿ ಉಳಿದಿವೆ. ಆದರೆ ಇದುವರೆಗೆ ಯಾವುದೇ ಇಲಾಖೆಗಳು ಮಳೆಗಾಲದ ಪೂರ್ವ ತಯಾರಿಗೆ ಸಿದ್ಧವಾಗಿಲ್ಲ. ಇದೆಲ್ಲಕ್ಕಿಂತಲೂ ಮುಖ್ಯವಾಗಿ ವಾರಾಹಿ ಕಾಲುವೆಗಳ ದುರಸ್ತಿಯತ್ತ ಮನ ಮಾಡದ ವಾರಾಹಿ ಇಲಾಖೆ ಮುಂದಿನ ಮಳೆಗಾಲದಲ್ಲಿ ರೈತರ ಕಷ್ಟಕ್ಕೆ ತನ್ನದೇ ಆದ ಕೊಡುಗೆ ನೀಡುವುದರಲ್ಲಿ ಯಾವುದೇ ಅನುಮಾನಗಳು ಕಾಣಿಸುತ್ತಿಲ್ಲ ಎನ್ನುವ ಆತಂಕ ಕಾಲುವೆಗಳ ಪಕ್ಕದ ಕೃಷಿಕರನ್ನು ಕಾಡತೊಡಗಿದೆ.

vrahi nk3

vrahi nk4

vrahi nk5

vrahi nk6

ಕಳೆದ ವರ್ಷದ ಮಳೆಗಾಲದಲ್ಲಿ ವಾರಾಹಿ ಕಾಲುವೆಯ 23ನೇ ಕಿಲೋಮೀಟರ್ ನಲ್ಲಿ ಬಾಸಬೈಲ್ ಇಂತಹುದೇ ಒಂದು ಘಟನೆ ನಡೆದಿದ್ದು, ಇದುವರೆಗೆ ಇದರ ಪರಿಹಾರಕ್ಕೆ ಇಲಾಖೆಯಾಗಲೀ ಸರ್ಕಾರವಾಗಲೀ ಮನಸ್ಸು ಮಾಡಿಲ್ಲ. ಈ ಪ್ರದೇಶದಲ್ಲಿ ಸುಮಾರು 125 ಮೀಟರ್ ದೂರದವರೆಗೆ ಕಾಲುವೆಗೆ ರಿವಿಟ್ ಮೆಂಟ್ ಕಟ್ಟದೇ ಇರುವುದರಿಂದ ಮೇಲಿಂದ ಜೇಡಿ ಮಣ್ಣು ಕುಸಿದ ಪರಿಣಾಮ ಕಾಲುವೆ ಒಡೆದು ಕೆಳಗಿನ ಸುಮಾರು ಎಂಬತ್ತು ಎಕ್ರೆಗೂ ಹೆಚ್ಚು ಅಡಿಕೆ ಹಾಗೂ ಭತ್ತದ ಗದ್ದೆಗಳೂ ಅಕ್ಷರಶಃ ಹಾನಿಗೀಡಾಗಿದ್ದವು. ತೋಟದ ಮಧ್ಯದಲ್ಲಿದ್ದ ಕೆರೆ ಹಾಗೂ ಬಾವಿಗಳು ಪಂಪ್ ಸೆಟ್ ಸಮೇತ ಜೇಡಿ ಮಣ್ಣಿನಲ್ಲಿ ಮುಚ್ಚಿ ಹೋಗಿದ್ದವು. ಆದರೆ ಇದರುವೆರೆಗೆ ಕಂದಾಯ ಇಲಾಖೆ ಎಕ್ರೆಗೆ 2 ಸಾವಿರ ರೂಪಾಯಿಗಳ ಪರಿಹಾರ ಧನದಂತೆ ಭತ್ತದ ಗದ್ದೆಗೆ ನೀಡಿದ್ದು ಬಿಟ್ಟರೆ ಯಾವುದೇ ಪರಿಹಾರವೂ ರೈತರನ್ನು ತಲುಪಿಲ್ಲ. ಅಡಿಕೆ ಹಾನಿಯ ಬಗ್ಗೆ ಇಲಾಖೆಯಾಗಲಿ ವಾರಾಹಿ ಅಧಿಕಾರಿಗಳಲ್ಲಿ ಕೇವಲ ಭರವಸೆ ನೀಡಿದ್ದು ಬಿಟ್ಟರೆ ಮುಖ್ಯಮಂತ್ರಿಗಳಿಂದ ಉದ್ಘಾಟನೆ ನಡೆದ ಮೇಲೆ ಯಾವ ಅಧಿಕಾರಿಗಳೂ ಇತ್ತ ಕಡೆ ತಲೆ ಹಾಕಿ ಮಲಗಿಲ್ಲ. ಅಲ್ಲದೇ ಸುಮಾರು ಒಂದೂವರೆ ಎಕ್ರೆಯಷ್ಟು ಪಟ್ಟಾ ಭೂಮಿಯನ್ನು ವಾರಾಹಿ ಯೋಜನೆಗೆ ಬಳಸಿಕೊಂಡಿದ್ದು, ಭೂಮಿಯ ಪರಿಹಾರ ಧನಕ್ಕಾಗಿ ಇಲ್ಲಿಯ ರೈತರು ವಾರಾಹಿ ಕಚೇರಿಗೆ ನೂರಾರು ಬಾರಿ ಓಡಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

vrahi nk

vrahi nk1

vrahi nk2

ಮತ್ತದೇ ಸಮಸ್ಯೆ: ಕಳೆದ ಮಳೆಗಾಲದಲ್ಲಿ ಒಡೆದು ಹೊದ ನಾಲೆಯನ್ನು ಅದೇ ಜೇಡಿ ಮಣ್ಣಿನಿಂದ ಮುಚ್ಚಿದ ನಾಟಕ ಮಾಡಿದ ವಾರಾಹಿ ಇಲಾಖೆ ಇದುವರೆಗೆ ಅದನ್ನು ದುರಸ್ತಿ ಮಾಡುವುದಾಗಲೀ, ರಿವಿಟ್ ಮೆಂಟ್ ಹಾಕುವುದನ್ನಾಗಲೀ ಮಾಡಿಲ್ಲ. ಆದರೆ ಕಾಲುವೆಯಲ್ಲಿ ನೀರು ಬಿಡಲಾಗಿದ್ದು, 24ನೇ ಕಿ.ಮೀ. ನಲ್ಲಿ ಕಾಲುವೆ ಏರು ಪ್ರದೇಶವಾಗಿರುವುದರಿಂದ ಮುಂದಿನ ಮಳೆಗಾಲದಲ್ಲಿ ಈ ಭಾಗದಲ್ಲಿ ನೀರು ತುಂಬಿಕೊಳ್ಳುವುದು ಖಚಿತ. ಜೊತೆಗೆ ಮತ್ತೆ ಪುನಃ ರಿವಿಟ್ ಮೆಂಟ್ ಮಾಡದ ಜಾಗದಲ್ಲಿ ಶೇಡ ಮಣ್ಣು ಕುಸಿದು ಮತ್ತೆ ಪುನಃ ಇಲ್ಲಿಯ ಸುಮಾರು ನಲವತ್ತೈದು ಕೃಷಿ ಕುಟುಂಬದ ಭತ್ತದ ಹಾಗೂ ಅಡಿಕೆ ತೋಟಕ್ಕೆ ನುಗ್ಗುವುದು ಖಂಡಿತ ಎನ್ನುತ್ತಾರೆ ಇಲ್ಲಿಯ ಕೃಷಿಕರು.

ಒಟ್ಟಾರೆಯಾಗಿ ಬಾಸಬೈಲು ಕೃಷಿ ಕುಟುಂಬ ಮುಂದಿನ ಎರಡು ತಿಂಗಳಲ್ಲಿ ಸಂಬಂಧಪಟ್ಟ ಇಲಾಖೆ ಅಥವಾ ಸರ್ಕಾರ ವಾರಾಹಿ ಕಾಲುವೆಗೆ ರಿವಿಟ್ ಮೆಂಟ್ ಅಳವಡಿಸಲು ಮನಸ್ಸು ಮಾಡದೇ ಇದ್ದರೆ ಸಂಪೂರ್ಣ ನಾಶವಾಗುವ ಸಾಧ್ಯತೆಗಳಿದ್ದು, ಶಾಸಕರು, ಜನಪ್ರತಿನಿಧಿಗಳು ಇಲಾಖೆಗೆ ಒತ್ತಾಯ ಹೇರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ಕೂರುತ್ತೇವೆ. ಅಲ್ಲಿಯೂ ನ್ಯಾಯ ಸಿಕ್ಕದೇ ಇದ್ದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ನಮ್ಮ ಮುಮದಿರುವ ದಾರಿ ಎನ್ನುತ್ತಾರೆ ಬಾಸಬೈಲು ಕೃಷಿಕರು.

nkjmkgkp

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಉಡುಪಿ: ವಕ್ಷರಕ್ಷ- ವಿಶ್ವರಕ್ಷ ಯೋಜನೆಯ ಜಾಗೃತಿ ಸಮಾವೇಶ

ಮುಂದಿನ ಸುದ್ದಿ »

ದೇವಲ್ಕುಂದ ಮೀನು ಸಂಸ್ಕರಣಾ ಘಟಕ ನಿರ್ಮಾಣ ವಿರುದ್ಧ ಜಯಕರ್ನಾಟಕ ಪ್ರತಿಭಟನೆಗೆ ಸಿದ್ಧತೆ

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×