Thursday January 5 2017

Follow on us:

Contact Us

ತೆರೆಗೆ ಬರಲು ಸಿದ್ಧವಾಗಿದೆ ಮತ್ತೊಂದು ತುಳು ಚಿತ್ರ ‘ರಂಗ್‍ ರಂಗ್‍ ದ ದಿಬ್ಬಣ’

ನ್ಯೂಸ್ ಕನ್ನಡ ವರದಿ (28-12-16): ಉಡುಪಿ: ತುಳುಭಾಷೆಯಲ್ಲಿ ಕರಾವಳಿಯ ಪ್ರತಿಭಾವಂತ ಯುವಕರೇ ನಿರ್ಮಿಸುತ್ತಿರುವ ಒಂದು ಉತ್ತಮ ಕಮರ್ಷಿಯಲ್ ಚಿತ್ರ ರಂಗ್ ರಂಗ್‍ ದ ದಿಬ್ಬಣ ಈಗಾಗಲೇ ಸೆಟ್ಟೇರಿದ್ದು, ಬೆಂಗಳೂರಿನಲ್ಲಿ ಎಡಿಟಿಂಗ್ ಡಬ್ಬಿಂಗ್ ಮುಗಿಸಿ ಬೆಳ್ಳಿ ತೆರೆಗೆ ಬರಲು ಭರದ ಸಿದ್ಧತೆ ನಡೆಸುತ್ತಿದೆ.

ವಿಭಿನ್ನ ಕಥಾಹಂದರ ಮತ್ತು ಟೈಟಲ್ ಹೊಂದಿರುವ ರಂಗ್ ರಂಗ್‍ ದ ದಿಬ್ಬಣ ತುಳು ಚಿತ್ರ ಕನ್ನಡ ಚಿತ್ರರಂಗದಲ್ಲಿ ದುಡಿಯುತ್ತಿರುವ ತುಳುನಾಡಿನ ಯುವಕರೇ ಸೇರಿ ಅದ್ದೂರಿಯಾಗಿ ನಿರ್ಮಿಸುತ್ತಿರುವ ಚಿತ್ರ. ಫೆಬ್ರುವರಿ ತಿಂಗಳಲ್ಲಿ ಕರ್ನಾಟಕದಾದ್ಯಂತ ರಂಗ್ ರಂಗ್‍ ದ ದಿಬ್ಬಣ ತುಳು ಚಿತ್ರಪ್ರೇಮಿಗಳನ್ನು ರಂಜಿಸಲಿದೆ. ಸಂಪೂರ್ಣ ಕರಾವಳಿಯಲ್ಲಿ ಚಿತ್ರೀಕರಣಗೊಂಡು ಬೆಂಗಳೂರಿನ ತಾಂತ್ರಿಕ ಕಲಾವಿದರ ಕೈಚಳಕದೊಂದಿಗೆ ಅದ್ದೂರಿಯಾಗಿ ನಿರ್ಮಾಣಗೊಂಡಿರುವ ಈ ಚಿತ್ರ, ನವಿರಾದ ಹಾಸ್ಯವನ್ನು ಹೊಂದಿದೆ. ಕಾಲೇಜು ಹುಡುಗರು ಪ್ರೀತಿ ಪ್ರೇಮದ ಬಲೆಗೆ ಬಿದ್ದು, ಆ ಬಳಿಕ ನಡೆಯುವ ಅವಾಂತರಗಳನ್ನು ಬಿಚ್ಚಿಡುವ ತುಳುನಾಡಿನ ಅಪ್ಪಟ ತುಳು ಮಣ್ಣಿನ ಅಪರೂಪದ ಪ್ರೇಮ ಕಥೆಯೇ ರಂಗ್ ರಂಗ್‍ ದ ದಿಬ್ಬಣ.

ಒಟ್ಟು ಆರು ಹಾಡುಗಳಿರುವ ಈ ಚಿತ್ರವನ್ನು ಸಂಪೂರ್ಣ ಸಂಗೀತಮಯ, ಸಾಂಸಾರಿಕ ಚಿತ್ರವಾಗಿ ನಿರ್ಮಾಣ ಮಾಡಲಾಗಿದೆ. ಕಡಲಮಗೆ ಚಿತ್ರಕ್ಕೆ ಚಿತ್ರಕಥೆ ಬರೆದಿರುವ ನಿರ್ದೇಶಕ ಎಸ್.ನಾರಾಯಣ್ ಗರಡಿಯಲ್ಲಿ ಪಳಗಿರುವ ಯುವ ನಿರ್ದೇಶಕ ಕೃಷ್ಣಪ್ರಸಾದ್ ಉಪ್ಪಿನಕೋಟೆ ಅವರು ಕತೆ ಚಿತ್ರಕತೆ ಬರೆದು ನಿರ್ದೇಶಿಸಿರುವ ಈ ಚಿತ್ರ ಕ್ಲಾಸ್ ಚಿತ್ರವಾಗಿ ಮೂಡಿಬಂದಿದೆ ಎಂಬುವುದು ಚಿತ್ರದ ನಿರ್ಮಾಪಕ ಬೆಂಗಳೂರಿನ ಯುವ ಉದ್ಯಮಿ ಶರತ್ ಕೋಟ್ಯಾನ್ ಅವರ ಅಭಿಪ್ರಾಯವಾಗಿದೆ.

ತುಳುಚಿತ್ರದಲ್ಲಿ ಹಾಸ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವ ನಿಟ್ಟಿನಲ್ಲಿ ಚಿತ್ರದುದ್ದಕ್ಕೂ ಸಾಕಷ್ಟು ಹಾಸ್ಯ ಸನ್ನಿವೇಶಗಳನ್ನು ಅಳವಡಿಸಲಾಗಿದೆ. ತುಳುನಾಡಿನ ಹಾಸ್ಯ ನಟರಾದ ದಿನೇಶ್ ಅತ್ತಾವರ, ಉಮೇಶ್ ಮಿಜಾರ್, ರಾಘವೇಂದ್ರ ರೈ, ರಂಜನ್ ಬೋಳೂರು, ಆರ್‍ ಜೆ ರೂಪೇಶ್, ರಘು ಪಾಂಡೇಶ್ವರ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ. ಈ ಚಿತ್ರದ ಮೂಲಕ ನಾಯಕ ನಟರಾಗಿ ರವಿರಾಜ್ ಶೆಟ್ಟಿ, ಪ್ರಶಾಂತ್ ಸಾಮಗ, ನಾಯಕಿಯರಾಗಿ ಸ್ವಾತಿ ಬಂಗೇರ, ಸಂಹಿತಾ ಶಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಲಾಗುತ್ತಿದೆ.

ರಂಗ್‍ ರಂಗ್‍ ದ ದಿಬ್ಬಣ ಚಿತ್ರದಲ್ಲೂ ಆರು ಇಂಪಾದ ಹಾಡುಗಳನ್ನು ಖ್ಯಾತ ಗಾಯಕರ ಕಂಠಸಿರಿಯಿಂದ ಹಾಡಿಸಲಾಗಿದೆ. ಬಾಲಿವುಡ್ ಸಿಂಗರ್ ಉದಿತ್ ನಾರಾಯಣ್, ಜಾವೇದ್ ಅಲಿ, ಪ್ರಿಯಾ ಹಿಮೇಶ್, ವಿನುತ ಕಾರ್ತಿಕ್, ಅನುರಾಧ ಭಟ್, ಪ್ರತಿಮಾ ಭಟ್ ಹಾಡಿರುವ ಗೀತೆಗಳಲ್ಲಿ ತುಳುನಾಡಿನ ಅಪ್ಪಟ ಸಾಹಿತ್ಯದ ಕಂಪು ಅಡಗಿದೆ. ಜಾವೇದ್ ಅಲಿ ಹಾಡಿರುವ ‘ಪಚ್ಚೆ ಕುರಲ್‍ ದ ಪಜ್ಜಿ ಕಮ್ಮೆನ’ ಈಗಾಗಲೇ ಹಿಟ್ ಹಾಡುಗಳ ಸಾಲಿಗೆ ಸೇರಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಕೃಷ್ಣಪ್ರಸಾದ್ ಉಪ್ಪಿನಕೋಟೆ.

ವಾರಿನ್ ಕಂಬೈನ್ಸ್ ರವರ ಪ್ರಥಮ ಚಿತ್ರವಾದ ರಂಗ್ ರಂಗ್‍ ದ ದಿಬ್ಬಣಕ್ಕೆ ಚೆಲುವಿನ ಚಿತ್ತಾರ ಚಿತ್ರದ ಛಾಯಾಗ್ರಾಹಕ ರೇಣುಕುಮಾರ್ ಅವರ ಛಾಯಾಗ್ರಹಣವಿದೆ. ಕಡಲ ಮಗೆ ಚಿತ್ರದ ಸಂಗೀತ ನಿರ್ದೇಶಕ ಎ.ಪಿ.ಚಂದ್ರಕಾಂತ್ ಸಂಗೀತ ನೀಡಿದ್ದಾರೆ. ಸುಧೀರ್ ಅತ್ತಾವರ್, ವಿಜಯಕುಮಾರ್ ಕೊಡಿಯಾಲ್‍ಬೈಲ್, ಸಲೀಂ ಪುತ್ತೂರು ಸಾಹಿತ್ಯ ಬರೆದಿದ್ದಾರೆ.

ಮಾಸ ಮಾದ ಅವರು ಸಾಹಸ ನಿರ್ದೇಶಕರಾಗಿದ್ದು, ರಂಜೀತ್ ಸುವರ್ಣ, ಕಿಶೋರ್ ಮೂಡಬಿದ್ರಿ ಸಹನಿರ್ದೇಶಕರಾಗಿದ್ದಾರೆ. ಅಕುಲ್ ನೃತ್ಯ ನಿರ್ದೇಶಕರಾಗಿದ್ದಾರೆ. ಮಧು ಸುರತ್ಕಲ್ ಸಂಭಾಷಣೆ ಬರೆದಿದ್ದಾರೆ. ಶ್ರೀನಿವಾಸ್ ಬಾಬು ಸಂಕಲನ, ಕಲೆ ಕೇಶವ ಸುವರ್ಣ ಹರೀಶ್ ಪ್ರಸಾಧನವಿದೆ. ಸತೀಶ್ ಬ್ರಹ್ಮಾವರ, ರಾಜೇಶ್ ಕುಡ್ಲ ನಿರ್ವಹಣೆ ಮಾಡಿದ್ದಾರೆ.

nkhap

 

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ವೇಶ್ಯವಾಟಿಕೆ ಅಡ್ಡೆ ಮೇಲೆ ಪೊಲೀಸ್ ದಾಳಿ

ಮುಂದಿನ ಸುದ್ದಿ »

ಅನಾರೋಗ್ಯ ಪೀಡಿತೆಗೆ ತಕ್ಷಣ ಸ್ಪಂದಿಸಿದ ಜಿಲ್ಲಾಡಳಿತ: 24 ಗಂಟೆಯೊಳಗೆ ಆಧಾರ್ ನೋಂದಣಿ

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×