Saturday August 20 2016

Follow on us:

Contact Us
padubidri
  7929

ನ್ಯೂಸ್ ಕನ್ನಡ ವರದಿಯ ಎಫೆಕ್ಟ್; ಮಾನವೀಯತೆ ಮೆರೆದ ಪಡುಬಿದ್ರಿ ಪೊಲೀಸರು

ನ್ಯೂಸ್ ಕನ್ನಡ ವರದಿ : “ಕುಟುಂಬಸ್ಥರಿದ್ದೂ ಕೂಡಾ ಅನಾಥರಾಗಿರುವ ವ್ಯಕ್ತಿಗೆ ಉಚ್ಚಿಲ ಸೇವಾ ಸಮಿತಿಯ ಯುವಕರಿಂದ ನೆರವು” ಎಂಬ ನ್ಯೂಸ್ ಕನ್ನಡದ ಇತ್ತೀಚಿಗಿನ ವರದಿಗೆ ಪಡುಬಿದ್ರಿ ಪೊಲೀಸರು ಸ್ಪಂದಿಸಿ ಮಾನವೀಯತೆ ಮರೆದಿದ್ದಾರೆ.

ಪಡುಬಿದ್ರಿ ಪೊಲೀಸರ ಸಹಾಯದಿಂದ ರಸ್ತೆಯಲ್ಲಿ ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ಥನೊರ್ವರನ್ನು ಕುಟುಂಬಸ್ತರೊಂದಿಗೆ ಕಳಿಸಿಕೊಟ್ಟ ವಿಶೇಷ ಘಟನೆ ಉಚ್ಚಿಲದಲ್ಲಿ ನಡೆದಿದೆ. ಹಲವಾರು ವರ್ಷಗಳಿಂದ ಮಾನಸಿಕ ಅಸ್ವಸ್ಥನಾಗಿ ಉಚ್ಚಿಲ ಪರಿಸರದಲ್ಲಿ ತಿರುಗಾಡುತ್ತಿದ್ದ ಮೂಲತ ಉಚ್ಚಿಲದವರೇ ಆದ ಹಸೀಂ ಎಂಬವರನ್ನು ಕಡೆಗೂ ಪಡುಬಿದ್ರಿ ಪೊಲೀಸರ ಸಹಾಯದಿಂದ ಅವರ ಸಹೋದರರೊಂದಿಗೆ ಕಳುಹಿಸಿ ಕೊಡಲಾಯಿತು.

padubidri 2
ಎಂಟು ವರ್ಷಗಳ ಹಿಂದೆ ದೃಷ್ಟಿ ಮಣಿ ಮಾರಾಟ ಮಾಡುತ್ತಿದ್ದ ಇವರು ಅನಾರೋಗ್ಯದಿಂದ ಮಾನಸಿಕ ಅಸ್ವಸ್ಥನಾಗಿ ಮನೆಯಿಂದ ಹೊರಬಂದು ಮರಳಿ ಮನೆಕಡೆ ಹೋಗದೆ ಸುಮಾರು ಎಂಟು ವರ್ಷಗಳಿಂದ ರಸ್ತೆಯ ಬದಿಯಲ್ಲಿ ತಿರುಗಾಡುತ್ತಿದ್ದ ಇವರು ಮೊದಮೊದಲು ಉಚ್ಚಿಲದ ಉರ್ದು ಶಾಲೆಯೊಂದರಲ್ಲಿ ರಾತ್ರಿ ಹೊತ್ತು ಮಲಗುತ್ತಿದ್ದರು. ನಂತರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಮಸೀದಿಯ ಹಳೆಯ ಕೊಠಡಿಯ ಹೊರಗೆ ರಾತ್ರಿ ಕಾಲ ಕಳೆಯುತ್ತಿದ್ದರು. ಮಸೀದಿಗೆ ನಮಾಝಿಗೆ ಆಗಮಿಸುವವರು ನೀಡಿದ ಹಣದಿಂದ ದಿನ ಕಳೆಯುತ್ತಿದ್ದರು. ಸಂಬಂಧಿಕರು ಹತ್ತಿರದಲ್ಲೇ ಇದ್ದರೂ ಕೂಡ ಇದುವರೆಗೆ ಯಾರೂ ಕೂಡ ಇಣುಕಿ ನೋಡಲು ಬಂದವರಲ್ಲ. ವಿಶೇಷವೆಂದರೆ ಅದೇ ಮಸೀದಿಗೆ ನಮಾಝಿಗೆ ಬಂದರೂ ಇವರ ಬಗ್ಗೆ ಗಮನ ಹರಿಸಿದ್ದು ಇಲ್ಲ. ಕೆಲವೊಮ್ಮೆ ರಾತ್ರಿಹೊತ್ತು ಹೆದ್ದಾರಿ ಮಧ್ಯೆಯೇ ನಡೆದುಕೊಂಡು ಹೋಗುತ್ತಿದ್ದು ಎಷ್ಟೋ ಬಾರಿ ವಾಹನ ಅಪಘಾತದಿಂದ ಪಾರಾಗಿದ್ದಾರೆ.

ಈ ಬಗ್ಗೆ ಗಂಭೀರವಾಗಿ ಪರಿಗಣಿಸಿದ ಸಾರ್ವಜನಿಕರು ಪೊಲೀಸರಿಗೆ ತಿಳಿಸಿದ್ದಾರೆ. ಪಡುಬಿದ್ರಿ ಠಾಣಾಧಿಕಾರಿ ಅಜ್ಮತ್ ಅಲಿಯವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎ.ಎಸೈ ಕಮಲಾಕ್ಷ ಹಾಗೂ ವಿಲ್ಪೆಡ್ ಡಿಸೋಝ ಇವರು ಮಸೀದಿಯ ಆಡಳಿತ ಕಮಿಟಿ ಮತ್ತು ಹಾಸಿಂ ರವರ ಸಂಬಂಧಿಕರನ್ನು ಕರೆಸಿ ಮಾತುಕತೆ ನಡೆಸಿ ಅವರೊಂದಿಗೆ ಕಳುಹಿಸಿ ಕೊಡುವಲ್ಲಿ ಯಶಸ್ವಿಯಾದರು. ಈ ಸಂದರ್ಭದಲ್ಲಿ ಮಸೀದಿ ಕಮಿಟಿ ಮುಖಂಡರಾದ ಸಲೀಂ ಉಚ್ಚಿಲ, ಇಬಾದುಲ್ಲಾ, ಮುಝಪ್ಪರ್,ಮತ್ತು ಸೇವಾ ಸಮಿತಿಯ ಸದಸ್ಯರಾದ ಶಫೀ ಉಚ್ಚಿಲ, ಇಸ್ಮಾಯಿಲ್ ಉಮ್ಮರ್, ಸಂಶೀರ್ ಎರ್ಮಾಳು, ಹನೀಫ್ ಮೂಳೂರು, ಉಪಸ್ಥಿತರಿದ್ದರು.

ಸಂಸ್ಥೆಯ ಯುವಕರಿಂದ ನೆರವು:

ಹಲವು ದಿನಗಳಿಂದ ತೀರ ಅನಾರೋಗ್ಯ ಪೀಡಿತರಾಗಿ ಕೊಠಡಿಯಲ್ಲಿ ಬಿದ್ದಿದ್ದ ಇವರನ್ನು ಮಸೀದಿಯ ಗುರುಗಳಿಂದ ತಿಳಿದ ಉಚ್ಚಿಲ ಸೇವಾ ಸಂಸ್ಥೆಯ ಯುವಕರು ಅವರಿಗೆ ಅನ್ನ ನೀರು ನೀಡಿ ಆರೈಕೆ ಮಾಡುತ್ತಿದ್ದರು.ಬಳಿಕ ಅವರನ್ನು ಕೆ.ಪಿ.ಸಿ.ಸಿ ಇದರ ಕಾರ್ಯದರ್ಶಿ ಎಂ.ಎ.ಗಪೂರು ಮೂಳೂರು ಇವರ ಸಹಾಯದಿಂದ ಸೇವಾ ಸಂಸ್ಥೆಯ ಸದಸ್ಯರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿಸಿದ್ದರು.ಈ ಕುರಿತು “ನ್ಯೂಸ್ ಕನ್ನಡದಲ್ಲಿ” ಸುದ್ದಿಯಾಗಿತ್ತು. ಈ ಸುದ್ದಿಯನ್ನು ಓದಿದ ಹಾಸಿಂರವರ ಸಂಬಂಧಿಕರು ಆಸ್ಪತ್ರೆಯ ಖರ್ಚು ವೆಚ್ಚವನ್ನು ನೀಡುವುದಾಗಿ ಹೇಳಿ ಪೊಳ್ಳು ಭರವಸೆ ನೀಡಿದ್ದಾರೆ ಎಂದು ಯುವಕರಿಂದ ಆರೋಪ ಕೇಳಿ ಬರುತ್ತಿತ್ತು.

ಇದನ್ನೂ ಓದಿ:

ಕುಟುಂಬಸ್ಥರಿದ್ದೂ ಕೂಡಾ ಅನಾಥರಾಗಿರುವ ವ್ಯಕ್ತಿಗೆ ಉಚ್ಚಿಲ ಸೇವಾ ಸಮಿತಿಯ ಯುವಕರಿಂದ ನೆರವು

http://www.newskannada.in/?p=99859

padubidri 3

nkmqseu

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಕಳ್ಳನನ್ನು ಬೆನ್ನಟ್ಟಿದ ಪೇದೆಯನ್ನು ಗುಂಡಿಕ್ಕಿ ಹತ್ಯೆ

ಮುಂದಿನ ಸುದ್ದಿ »

ಅಮಾಯಕರನ್ನು ಗುರಿಯಾಗಿಸುವುದರ ಬದಲು ನಮ್ಮೊಂದಿಗೆ ಸೆಣಸಾಡಿ: ಗೋರಕ್ಷಕರಿಗೆ ಪಿ.ಎಫ್.ಐ ಸವಾಲು

ಸಿನೆಮಾ

 • 1404997240_kamal-hasan-2

  ತಮಿಳಿನ ಬಿಗ್‌ಬಾಸ್‌ಗೆ ಕಮಲ್‌ ಹಾಸನ್‌ ಸಾರಥ್ಯ

  April 24, 2017

  ನ್ಯೂಸ್ ಕನ್ನಡ-(24.4.17): ಬಿಗ್‌ಬಾಸ್‌ ರಿಯಾಲಿಟಿ ಷೋನ ತಮಿಳು ಆವೃತ್ತಿಯನ್ನು ನಡೆಸಿಕೊಡಲು ನಟ ಕಮಲ್‌ ಹಾಸನ್‌ ಒಪ್ಪಿಕೊಂಡಿದ್ದಾರೆ. ‘ದಿ ಕ್ವಿಂಟ್‌’ ಸುದ್ದಿತಾಣಕ್ಕೆ ನೀಡಿರುವ ಸಂದರ್ಶನದಲ್ಲಿ ಕಮಲ್‌ ಈ ವಿಷಯ ಬಹಿರಂಗಪಡಿಸಿದ್ದಾರೆ. ‘ಈವರೆಗೆ ನಾನು ಕಲಾವಿದನಾಗಿ ಜನರನ್ನು ರಂಜಿಸಲು ಬೇರೆ ಬೇರೆ ರೀತಿಯಲ್ಲಿ ಪ್ರಯತ್ನಿಸಿದ್ದೇನೆ. ಆದರೆ, ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×