Saturday January 23 2016

Follow on us:

Contact Us
  631

ಉಡುಪಿ: ನವೀಕರಣಗೊಂಡ ಮಲ್ಪೆ ರಸ್ತೆಯಲ್ಲಿ ಮತ್ತೆ ಹೆಡೆಯೆತ್ತಿದ ‘ಸಂಕಷ್ಟ’

ನ್ಯೂಸ್ ಕನ್ನಡ ವಿಶೇಷ ವರದಿ:

ಉಡುಪಿ: ಮಲ್ಪೆ ಬೀಚ್ ರಸ್ತೆಯು ನವೀಕರಣಗೊಂಡು ಅಲ್ಪದಿನಗಳಲ್ಲೇ ಸಮಸ್ಯೆಗಳು ಮತ್ತೆ ಆರಂಭವಾಗಿದ್ದು, ‘ಹೋದೆಯಾ ಪಿಶಾಚಿ ಎಂದರೆ ಬಂದೆಯಾ ಗವಾಕ್ಷಿ’ ಎನ್ನುವ ಪರಿಸ್ಥಿತಿ ಇದೀಗ ನಿರ್ಮಾಣವಾಗಿದೆ.

ಮಲ್ಪೆ ರಸ್ತೆ ಹದಗೆಟ್ಟಿರುವ ಬಗ್ಗೆ ಸಾರ್ವಜನಿಕ ಹಿತಾಸಕ್ತಿಯಿಂದ  ನ್ಯೂಸ್ ಕನ್ನಡ ನಿರಂತರ ವರದಿ ಮಾಡಿದ್ದು, ಈ ಬಗ್ಗೆ ಸಾರ್ವಜನಿಕರೂ ಪ್ರಸಂಶೆ ವ್ಯಕ್ತಪಡಿಸಿದ್ದರು. ವರದಿಯ ಬಳಿಕ ಎಚ್ಚೆತ್ತುಕೊಂಡ ಸರಕಾರ ರಸ್ತೆ ದುರಸ್ತಿ ಕಾರ್ಯಕ್ಕೆ ಮನಸ್ಸು ಮಾಡಿತ್ತು. ಇದೀಗ ನವೀಕರಣಗೊಂಡ ರಸ್ತೆ ಮತ್ತೆ ಯಮನ ಪ್ರತಿನಿಧಿಯಂತೆ ಜೀವ ಬಲಿಗಾಗಿ ಕಾದು ಕುಳಿತಿದ್ದು, ಸಾರ್ವಜನಿಕರು ಈ ರಸ್ತೆಯಲ್ಲಿ ಅಂಗೈಯಲ್ಲಿ ಜೀವ ಹಿಡಿದು ಸಂಚರಿಸುವಂತಾಗಿದೆ.

 ರಸ್ತೆ ಬದಿ ಕೇಬಲ್ ಗುಂಡಿ!

ಅಂಗೈ ಅಗಲದ ರಸ್ತೆ ಇದ್ದರೆ ಅದರ ಬದಿಯಲ್ಲೇ ಕೇಬಲ್ ಅಳವಡಿಸುವವರು ಹೊಂಡ ತೆಗೆದಿದ್ದು, ಅಪೂರ್ಣವಾಗಿ ಕೆಲಸ ನಿರ್ವಹಿಸಿದ್ದಾರೆ. ಇದೀಗ ಗುಂಡಿ ತೆಗೆದು ಮುಚ್ಚಲ್ಪಟ್ಟ ಸ್ಥಳದಲ್ಲಿನ ಮಣ್ಣು ಜಗ್ಗಿ ಶಾಶ್ವತ ಹೊಂಡವಾಗಿ ಮಾರ್ಪಟ್ಟಿದೆ. ಈ ರಸ್ತೆಯಲ್ಲಿ ವೇಗವಾಗಿ ಸಂಚರಿಸುವ ವಾಹನಗಳು ಏಕಾಏಕಿ ಹೊಂಡದಲ್ಲಿ ಸಿಲುಕಿ ಜನರು ಅಪಾಯಕ್ಕೀಡಾಗುವ ಸಾಧ್ಯತೆಗಳಿವೆ.

udupi 1

udupi 2

udupi 3ಕೆಲವೆಡೆಗಳಲ್ಲಿ ನೀರಿನ ಪೈಪ್ ಒಡೆದು ಕೇಬಲ್ ದುರಸ್ತಿಗಾಗಿ ತೆಗೆದಿರುವ ಹೊಂಡಗಳಲ್ಲಿ ತುಂಬಿದ್ದು, ಕೆಸರು ಮಯವಾಗಿದೆ. ರಾತ್ರಿ ವೇಳೆ ಪ್ರಯಾಣಿಸುವವರು ಗಮನಿಸದೇ ವಾಹನ ಚಲಾಯಿಸಿದ್ದಲ್ಲಿ ಅಪಾಯಕ್ಕೆ ತುತ್ತಾಗುತ್ತಾರೆ.

ಈಗಾಗಲೇ ಹಲವರು ಈ ರೀತಿಯ ಅಪಾಯಕ್ಕೆ ಸಿಲುಕಿದ್ದು, ಸ್ಪಲ್ಪದರಲ್ಲೇ ಪಾರಾಗಿದ್ದಾರೆ. ಹೊಂಡಗಳನ್ನು ತಪ್ಪಿಸಲು ಪ್ರಯತ್ನಿಸಿ ಎದುರಿನಿಂದ ಬರುವ ವಾಹನಗಳಿಗೆ ಢಿಕ್ಕಿ ಹೊಡೆದ ಘಟನೆಗಳು ನಡೆದಿವೆ.

ರಸ್ತೆ ಬದಿಯಲ್ಲಿ ಅಪಾಯಕಾರಿ ಮರಗಳು

ಮಲ್ಪೆ ಕಿರಿದಾದ ರಸ್ತೆ ಬದಿಯಲ್ಲಿರುವ ಮರಗಳ ರೆಂಬೆಗಳು ರಸ್ತೆಗೆ ಚಾಚಿಕೊಂಡಿದ್ದು, ಇದಕ್ಕೆ ತಾಗಿಕೊಂಡೇ ವಾಹನಗಳು ಸಂಚರಿಸುತ್ತಿವೆ. ಬಸ್ ಗಳಲ್ಲಿ ಕಿಟಕಿ ಪಕ್ಕ ಕುಳಿತುಕೊಂಡು ಪ್ರಯಾಣಿಸುವವರಿಗೆ ತಾಗುವಂತಹ ಘಟನೆಗಳು ಸಂಭವಿಸ ಬಹುದು. ಈ ಬಗ್ಗೆ ಹಲವು ಸಮಯಗಳಿಂದ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದರೂ ಸಂಬಂಧ ಪಟ್ಟವರು ಕ್ರಮಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕರಾವಳಿ ಜಂಕ್ಷನ್ ನಲ್ಲಿ ಚಾಪೆ ಹಾಕುವ ಬಸ್ ಗಳು

ಕರಾವಳಿ ಜಂಕ್ಷನ್ ನಲ್ಲಿ ಮಲ್ಪೆಗೆ ತೆರಳುವ ಬಸ್ ಗಳು ಅನಗತ್ಯವಾಗಿ ನಿಲ್ಲಿಸಿ ಬೇರೆ ವಾಹನಗಳಿಗೆ ಸಂಚರಿಸಲು ಅಡ್ಡಿಪಡಿಸುತ್ತಿವೆ. ಇದರ ಸಮೀಪವಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ರಸ್ತೆ ಸಂಚಾರ ಬದಲಾವಣೆ ಮಾಡಲಾಗಿದೆ. ಕರಾವಳಿ ಜಂಕ್ಷನ್ ನಿಂದ ಆರಂಭವಾಗುವ ಟ್ರಾಫಿಕ್ ಜಾಮ್ ರಸ್ತೆಯುದ್ದಕ್ಕೂ ವ್ಯಾಪಿಸುತ್ತಿದೆ. ಈ ಬಗ್ಗೆ ಇತರ ವಾಹನ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದು, ಚಾಪೆ ಹಾಕುವ ಬಸ್ ಗಳ ವಿರುದ್ಧ ಜಿಲ್ಲಾಡಳಿತ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

udupi 4ಮೀನಿನ ಲಾರಿಗಳದ್ದು ಮತ್ತೊಂದು ಸಮಸ್ಯೆ

ಮಲ್ಪೆಯಿಂದ ಮೀನು ಸಾಗಾಟ ಮಾಡುವ ಲಾರಿಗಳು ಮೀನಿನ ನೀರನ್ನು ರಸ್ತೆಗೆ ಬಿಡುತ್ತಿದ್ದು, ಇದು ದ್ವಿಚಕ್ರ ವಾಹನ ಚಾಲಕರಿಗೆ ತೊಂದರೆಯನ್ನುಂಟು ಮಾಡುತ್ತಿದ್ದು, ವೇಗವಾಗಿ ಸಂಚರಿಸುತ್ತಿರುವ ವೇಳೆ ಬೇಕ್ ಹಾಕಿದ್ದಲ್ಲಿ ಬೈಕ್ ನ ಟಯರ್ ಗಳು ಸ್ಲಿಪ್ ಆಗಿ ಮಗುಚಿ ಬಿದ್ದು ಅಪಾಯಕ್ಕೆ ತುತ್ತಾಗುವ ಸಾಧ್ಯತೆಗಳಿವೆ. ಈ ರಸ್ತೆಯಲ್ಲಿ ಸಂಚರಿಸುವ ಹಲವು ಸವಾರರು ಈ ಬಗ್ಗೆ ದೂರುತ್ತಿದ್ದು, ತಮ್ಮ ಅಳಲನ್ನು ಹೇಳಿಕೊಂಡಿದ್ದಾರೆ.

ಒಟ್ಟಿನಲ್ಲಿ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಮಲ್ಪೆ ಬೀಚ್ ರಸ್ತೆಯು ಇಷ್ಟೊಂದು ಅವ್ಯವಸ್ಥೆಯಿಂದ ಕೂಡಿರುವುದು ಜಿಲ್ಲಾಡಳಿತಕ್ಕೆ ಮುಜುಗರ ತರುವ ವಿಷಯವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು, ಸ್ಥಳೀಯ ಶಾಸಕರು ಖುದ್ದಾಗಿ ಕ್ರಮಕೈಗೊಳ್ಳುವುದು ಅಗತ್ಯವಾಗಿದೆ. ಇಲ್ಲವೇ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಂದ ನಡೆಯುವ ಪ್ರತಿಭಟನೆಯನ್ನು ಎದುರಿಸಲು ಸಜ್ಜಾಗಬೇಕಿದೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

nkmqgkp

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಉಡುಪಿ: ಕಾರವಾರವನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಹೇಳಿಕೆ ವಿರುದ್ಧ ಕ.ರ.ವೇ ಪ್ರತಿಭಟನೆ

ಮುಂದಿನ ಸುದ್ದಿ »

ಉಡುಪಿ: ಬೈಕ್ ಸವಾರನ ಜೀವ ಉಳಿಸಿದ ಸಿದ್ದರಾಮಯ್ಯ

ಸಿನೆಮಾ

 • ಮದುವೆಯಾಗಲಿದ್ದಾರೆ ಲೂಸ್ ಮಾದ ಯೋಗೀಶ್

  May 23, 2017

  ಬೆಂಗಳೂರು: ಸ್ಯಾಂಡಲ್‍ವುಡ್‍ನ ಲೂಸ್ ಮಾದ ಖ್ಯಾತಿಯ ಯೋಗೀಶ್ ಗೃಹಸ್ಥಾಶ್ರಮಕ್ಕೆ ಸೇರಲು ಸಜ್ಜಾಗಿದ್ದಾರೆ. ಬಾಲ್ಯದಗೆಳತಿ, ಬಹುರಾಷ್ಟ್ರಿಯ ಕಂಪನಿಯ ಉದ್ಯೋಗಿ ಸಾಹಿತ್ಯ ಅರಸ್ ಅವರೊಂದಿಗೆ ಯೋಗೀಶ್ ಸಪ್ತಪದಿ ತುಳಿಯಲಿದ್ದಾರೆ. ಸಾಹಿತ್ಯ ಅರಸ್ ಯೋಗಿ 2 ವರ್ಷದಿಂದ ಲವ್ ಮಾಡುತ್ತಿದ್ದು, ಸದ್ಯದಲ್ಲೇ ...

  Read More
 • ಮಕ್ಕಳಿಗಾಗಿ ಮತ್ತೆ ಒಂದಾದ ಹೃತಿಕ್ ರೋಶನ್-ಸೂಸೇನ್

  May 23, 2017

  ನ್ಯೂಸ್ ಕನ್ನಡ-(23.5.17):ಬಾಲಿವುಡ್‌ನ ಸ್ನೇಹಪರ ದಂಪತಿ ಎಂದೇ ಗುರುತಿಸಿಕೊಂಡಿದ್ದ ಹೃತಿಕ್‌ ರೋಷನ್ ಮತ್ತು ಸೂಸೇನ್ ಖಾನ್ ಅವರು ವೈವಾಹಿಕ ವಿಚ್ಛೇದನ ಪಡೆದಾಗ ಎಲ್ಲರೂ ನಿಬ್ಬೆರಗಾಗಿದ್ದರು. ಸೂಸೇನ್ ಅಂತೂ ಪತಿಯ ಬಗ್ಗೆ ಖಾರವಾಗಿ ಮಾತನಾಡಿದ್ದರು. ಆದರೆ ವಿಚ್ಛೇದನ ಪಡೆದ ಮೇಲೂ ...

  Read More
 • ಸೀರಿಯಲ್ ಗಳಲ್ಲಿ ಅವಕಾಶ ಸಿಗದೇ ಪೈಂಟರ್ ಆದ ಖ್ಯಾತ ನಟ!

  May 22, 2017

  ನ್ಯೂಸ್ ಕನ್ನಡ ವರದಿ-(22.5.17)ಇಸ್ಲಾಮಾಬಾದ್: ಪಾಕ್ ನಟ ಶಾಹಿದ್ ನಸೀಬ್  ಕೆಲಸವಿಲ್ಲದೆ ಗೋಡೆಗೆ ಬಣ್ಣಬಳಿಯುವ ಕೆಲಸ ಮಾಡುತ್ತಿದ್ದಾರೆ. ಹಲವಾರು ಟಿವಿ ಸೀರಿಯಲ್‍ಗಳಲ್ಲಿ ನಟಿಸಿರುವ ಪ್ರತಿಭಾಂತ ನಟ ಈತ. ಈಗ ಒಂದು ಹೊತ್ತಿನ ಕೂಲಿಗಾಗಿ ಗೋಡೆಗೆ ಪೈಂಟ್ ಬಳಿಯುತ್ತಿದ್ದಾರೆ. ದುಲ್ಲಾರಿ, ...

  Read More
 • 80ರ ಹರೆಯದ ವೃದ್ಧೆಯ ಪಾತ್ರದಲ್ಲಿ ನಟಿಸಲಿರುವ ಕಂಗನಾ ರಣಾವತ್!

  May 20, 2017

  ನ್ಯೂಸ್ ಕನ್ನಡ ವರದಿ-(20.5.17): ನಟಿ ಕಂಗನಾ ಅವರು ತಮ್ಮ ಸ್ವಂತ ನಿರ್ದೇಶನದ “ತೇಜು” ಸಿನೆಮಾದಲ್ಲಿ ವೃದ್ಧೆ ಮಹಿಳೆಯ ಪಾತ್ರ ನಿರ್ವಹಿಸುವುದಾಗಿ ಘೋಷಿಸಿದ್ದಾರೆ. “ನನ್ನ ಮೊದಲ ನಿರ್ದೇಶನದ ‘ತೆಜು’ ಚಿತ್ರದಲ್ಲಿ ನಾನು 80 ವರ್ಷ ವಯಸ್ಸಿನ ಮಹಿಳೆ ಪಾತ್ರವಹಿಸುತ್ತೇನೆ. ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×