ಸೌದಿ ಅರೆಬಿಯಾ ಅಭಾದಲ್ಲಿ ಮೃತಪಟ್ಟ ವ್ಯಕ್ತಿಯ ಧಫನ ಕಾರ್ಯ ನಿರ್ವಹಿಸಿದ ಇಂಡಿಯನ್ ಸೋಶಿಯಲ್ ಫೋರಮ್

0
23

ನ್ಯೂಸ್ ಕನ್ನಡ ವರದಿ ಸೌದಿ ಅರೇಬಿಯಾ: ದಿನಾಂಕ (21/7/2020)ರಂದು ಸೌದಿ ಅರೇಬಿಯಾದ ಅಶೀರ್ ಪ್ರಾಂತ್ಯದ ಅಭಾ ಖಮೀಶ್ ಮುಶಾಯತ್ ನಲ್ಲಿ ದುಡಿಯುತ್ತಿದ್ದ ಮಂಗಳೂರು ಉಳ್ಳಾಲ ನಿವಾಸಿ ಅಬ್ದುಲ್ ಅಝೀಝ್ ಉಳ್ಳಾಲ ಎಂಬವರು ಹೃಧಯಾಘಾತದಿಂದ ನಿಧನ ಹೊಂದಿದ್ದರು. ಮೃತರು ಪತ್ನಿ, ಮಗು (ಮಹಮ್ಮದ್ ಅಫ್ಲ) 2 ವರ್ಷ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೃತದೇಹದ ಧಫನ ಕಾರ್ಯವನ್ನು ನೆರವೇರಿಸುವ ನಿಟ್ಟಿನಲ್ಲಿ ಮೃತರ ಕುಂಟುಂಬಸ್ಥರು ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ಚಾಪ್ಟರ್ ಕಮೀಸ್ ಮುಶಾಯ್ತ್ ಘಟಕದ ಅಧ್ಯಕ್ಷರೂ ಮತ್ತು ಭಾರತೀಯ ರಾಯಭಾರಿ ಕಚೇರಿ ಜೆದ್ದ ಇದರ ಸಿ ಸಿ ಡಬ್ಲ್ಯೂ ಸದಸ್ಯರೂ ಆಗಿರುವ ಹನೀಫ್ ಮಂಜೇಶ್ವರವರಿಗೆ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿದ್ದರು.

ಕುಟುಂಬಸ್ಥರ ಮನವಿಗೆ ಸ್ಪಂದಿಸಿದ ಹನೀಫ್ ಮಂಜೇಶ್ವರ ನೇತೃತ್ವದ ತಂಡ ಮೃತದೇಹ ದಫನ ಕಾರ್ಯದ ಪ್ರಕ್ರಿಯೆ ನಡೆಸಲು ಕಾರ್ಯಪ್ರವೃತ್ತರಾಯಿತು.ಈ ತಂಡದಲ್ಲಿದ್ದ ಇಂಡಿಯನ್ ಸೋಷಿಯಲ್ ಫಾರಂ ಸದಸ್ಯರು ಹಾಗು ನೌಷಾದ್ ಏರ್ ಅರೇಬಿಯಾ ಇವರ ಸತತ ಪ್ರಯತ್ನದಲ್ಲಿ, ಸೌದಿ ಅರೇಬಿಯಾದ ಕಾನೂನಿನಂತೆ ದಫನಕ್ಕಾಗಿ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿ ದಫನ ಕಾರ್ಯವು ಕಡತಗಳು ಇವರ ಬಳಿಗೆ ಬಂದ ನಂತರದ ಕೇವಲ ಎಂಟು ದಿವಸಗಳ ಒಳಗೆ ನಡೆಸಲು ಸಹಾಯಿಯಾದರು.

ದಿನಾಂಕ 28/07/2020 ಮಂಗಳವಾರ ಅಸರಿ ನಮಾಝಿನ ಬಳಿಕ ಸರತ್ ಅಬಿದಾ ದಫನ ಭೂಮಿಯಲ್ಲಿ ಜನಾಝ ನಮಾಜ್ ನೆರವೇರಿಸಲಾಯಿತು, ನಂತರ ಅಲ್ಲಿನ ಧಫನ ಭೂಮಿಯಲ್ಲಿ ನಡೆದ ದಫನ ಕಾರ್ಯದಲ್ಲಿ ಹನೀಫ್ ಮಂಜೇಶ್ವರ ಅಧ್ಯಕ್ಷರು ಇಂಡಿಯನ್ ಸೋಷಿಯಲ್ ಫಾರಂ, ನೌಶಾದ್ ಉಳ್ಳಾಲ, ಇಂಡಿಯನ್ ಸೋಷಿಯಲ್ ಫಾರಂನ ಸದಸ್ಯರು, ಮೃತರ ಭಾವ ಅಬ್ದುಲ್ಲಾ ಹಾಗೂ ಕುಟುಂಭಸ್ಥರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here