ಆಧಾರ್‌,ಮತದಾರರ ಗುರುತಿನ ಚೀಟಿ ಲಿಂಕ್‌ ಕಡ್ಡಾಯ!: ಶೀಘ್ರದಲ್ಲೇ ಜಾರಿ?

0
47

ನ್ಯೂಸ್ ಕನ್ನಡ ವರದಿ: ಪ್ಯಾನ್ ಕಾರ್ಡ್, ರೇಷನ್ ಕಾರ್ಡ್ ಆಯ್ತು ಬ್ಯಾಂಕ್ ಖಾತೆಗಳಿಗೂ ಆಧಾರ್ ಜೋಡಣೆ ಕಡ್ಡಾಯ ನಿಯಮ ಜಾರಿಗೆ ತಂದಾಯಿತು. ಇದೀಗ ಮತದಾರರ ಗುರುತಿನ ಚೀಟಿಗೂ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯವಾಗಲಿದೆಯಂತೆ. ಶೀಘ್ರದಲ್ಲೇ ಈ ಕಡ್ಡಾಯ ನಿಯಮ ಜಾರಿಗೆ ಬರಲಿದೆ. ಈ ಸಂಬಂಧ ಚುನಾವಣಾ ಆಯೋಗ ಈ ಹಿಂದೆ ಇರಿಸಿದ್ದ ಬೇಡಿಕೆಗೆ ಕೇಂದ್ರ ಕಾನೂನು ಸಚಿವಾಲಯ ಗ್ರೀನ್‌ ಸಿಗ್ನಲ್‌ ನೀಡಿದೆ.

ಆಧಾರ್‌ ದತ್ತಾಂಶ ಸಂಗ್ರಹಿಸುವ ಅಧಿಕಾರವನ್ನು ಚುನಾವಣಾ ಆಯೋಗಕ್ಕೆ ನೀಡಲು ಅಗತ್ಯವಿರುವ ಕಾನೂನು ತಿದ್ದುಪಡಿಗೆ ಕೇಂದ್ರ ಕಾನೂನು ಸಚಿವಾಲಯ ಮುಂದಾಗಿದೆ. ಈ ಸಂಬಂಧ ಕ್ಯಾಬಿನೆಟ್‌ ಟಿಪ್ಪಣಿಯನ್ನು ಸಿದ್ಧಪಡಿಸುತ್ತಿದೆ. ಬಳಿಕ ಪ್ರಸ್ತಾವಕ್ಕೆ ಸಚಿವ ಸಂಪುಟ ಸಭೆಯ ಅನುಮೋದನೆ ಪಡೆದು, ಜ.31ರಿಂದ ಆರಂಭವಾಗಲಿರುವ ಬಜೆಟ್‌ ಅಧಿವೇಶನದಲ್ಲಿ ವಿಧೇಯಕ ರೂಪದಲ್ಲಿ ಅದನ್ನು ಸಂಸತ್ತಿನಲ್ಲಿ ಮಂಡಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.

ಇನ್ನು ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಕಾರ್ಡ್ ಜೋಡಣೆ ಮಾಡುವುದರಿಂದ ಮತದಾರ ಪಟ್ಟಿಯಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಹೆಸರು ನೋಂದಣಿ ಮಾಡಿಕೊಳ್ಳುವವರಿಗೆ ತಡೆಯಾಗಲಿದೆ. ಹೆಸರು, ಜನ್ಮ ದಿನಾಂಕ ಮುಂತಾದ ಮಾಹಿತಿ ದೋಷಗಳನ್ನು ತಡೆಯುವುದು, ಎರಡೆರಡು ಕ್ಷೇತ್ರದಲ್ಲಿ ಮತದಾರ ಚೀಟಿ ಪಡೆಯುವುದನ್ನು ತಪ್ಪಿಸುವುದು, ಮತದಾನ ಅಕ್ರಮಗಳಿಗೆ ಕಡಿವಾಣ ಹಾಕುವುದು ಸೇರಿದಂತೆ ಇತರೇ ಅಕ್ರಮಗಳ ತಡೆಗೆ ಚುನಾವಣಾ ಆಯೋಗ ಈ ಕ್ರಮಕ್ಕೆ ಮುಂದಾಗಿದೆ.

LEAVE A REPLY

Please enter your comment!
Please enter your name here