ಕರ್ನಾಟಕದಾದ್ಯಂತ ಟ್ವಿಟ್ಟರ್ ನಲ್ಲಿ ಅರೆಸ್ಟ್ ಶೋಭಾ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ನಂಬರ್ ಒನ್!

0
457

ನ್ಯೂಸ್ ಕನ್ನಡ ವರದಿ: (11.05.2020): ಟ್ವಿಟ್ಟರ್ ಸೇರಿದಂತೆ ಹಲವಾರು ಸಾಮಾಜಿಕ ತಾಣದಲ್ಲಿ ಹಾಗೂ ದೃಶ್ಯ ಮಾಧ್ಯಮಗಳಿಗೆ ನಿಡುವ ಸಂದರ್ಶನದಲ್ಲಿ ಇಸ್ಲಾಮೋಫೋಬಿಯಾ ಬಿತ್ತರಿಸುವ ಹಾಗೂ ಕೋಮುದ್ವೇಷ ಕಾರುವ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಸದ್ಯ ಟ್ವಿಟ್ಟರ್ ವಾರ್ ಪ್ರಾರಂಭವಾಗಿದೆ. ಹಲವಾರು ಕೇಸುಗಳನ್ನು ಜಡಿಸಿಕೊಂಡಿದ್ದರೂ ಕೂಡಾ ಇದೀಗ ಶೋಭಾ ಕರಂದ್ಲಾಜೆ ತಮ್ಮ ಹಳೆಯ ಚಾಳಿಯನ್ನು ಮುಂದುವರಿಸಿ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಮತದಾನದಲ್ಲಿ ವಿಜಯಿಯಾದ ಬಳಿಕ ಕ್ಷೇತ್ರದ ಕಡೆಗೆ ಕಣ್ಣೆತ್ತಿಯೂ ನೋಡದ ಶೋಭಾ ಕರಂದ್ಲಾಜೆ ಸದ್ಯ ಉಡುಪಿ ಜಿಲ್ಲೆಯಾದ್ಯಂತ ಯಾವುದೇ ಅಭಿವೃದ್ಧಿ ಕಾರ್ಯಗಳಿಗೂ ಮಣೆ ಹಾಕುತ್ತಿಲ್ಲ. ಆದರೆ ವಿವಾದಾತ್ಮಕ ಹೇಳಿಕೆಗಳಿಗೆ ಕುಮ್ಮಕ್ಕು ನೀಡುತ್ತಾ ಸಮಾಜದಾದ್ಯಂತ ಕೋಮುದ್ವೇಷ ಬಿತ್ತರಿಸುತ್ತಿರುವ ಶೋಭಾ ಕರಂದ್ಲಾಜೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

https://twitter.com/MediaTSI/status/1259812749217013760
https://twitter.com/abuayza/status/1259778997623414785

https://twitter.com/greenarrow5566/status/1259798873272442886

LEAVE A REPLY

Please enter your comment!
Please enter your name here