ಟ್ವಿಟ್ಟರ್’ನಾದ್ಯಂತ ಸದ್ದು ಮಾಡುತ್ತಿರುವ ಪ್ರಧಾನಿ ಮೋದಿ-ಕಾರ್ತಿಕ್ ಆರ್ಯನ್ `ಜಬ್ ವಿ ಮೆಟ್’ ಟ್ವೀಟ್‍!

0
200

ನ್ಯೂಸ್ ಕನ್ನಡ ವರದಿ(22-1-2019): ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಅವರು ಪ್ರಧಾನಿ ನರೇಂದ್ರ ಮೋದಿ ಜೊತೆಗಿದ್ದ ಹಿಮ್ಮುಖ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಈ ಪೋಸ್ಟ್’ಗೆ ಮೋದಿ ಅವರು ಕೊಟ್ಟ ಪ್ರತಿಕ್ರಿಯೆ ಟ್ವಿಟ್ಟರ್’ನಲ್ಲಿ ವೈರಲ್ ಆಗಿದೆ.

ಬಾಲಿವುಡ್ ನಟ ಕಾರ್ತಿಕ್ ಆರ್ಯನ್, ನಿರ್ಮಾಪಕ ಕರಣ್ ಜೊಹರ್, ಇಮ್ತಿಯಾಜ್ ಅಲಿ ಹಾಗೂ ದಿನೇಶ್ ವಿಜಯ್ ಎಲ್ಲ ಸೇರಿ ಪ್ರಧಾನಿ ಮೋದಿಯವರು ಹಿಮ್ಮುಖವಾಗಿ ನಿಂತಿರುವಾಗ ಹಿಂಬದಿಯಿಂದ ಸೆಲ್ಫಿ ಕ್ಲಿಕ್ಕಿಸಿದ್ದಾರೆ. ಬಳಿಕ ಆ ಫೋಟೋವನ್ನು ಕಾರ್ತಿಕ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿ ಪ್ರಧಾನಿ ಅವರೊಂದಿಗೆ ಹಿಮ್ಮುಖ ಚಿತ್ರ ಅಂತ “Losers’ backfie with the Honorable PM”ಅಂತ ಕ್ಯಾಪ್ಷನ್ ನೀಡಿ ಟ್ವೀಟ್ ಮಾಡಿದ್ದರು.

ಈ ಟ್ವೀಟ್’ಗೆ ಪ್ರತಿಕ್ರಿಯಿಸಿದ ಪ್ರಧಾನಿ ಅವರು “ನೀವು ಲೂಸರ್ಸ್ ಅಲ್ಲ ರಾಕ್‍ಸ್ಟಾರ್ಸ್! ಈ ಬಾರಿ ಸೆಲ್ಫಿ ತೆಗೆದುಕೊಳ್ಳಲು ಆಗಲಿಲ್ಲ, ಆದ್ರೆ ಮತ್ತೊಮ್ಮೆ ಭೇಟಿಯಾದಾಗ ಸೆಲ್ಫಿ ತೆಗೆಸಿಕೊಳ್ಳೊಣ” (Not losers but Rockstars! No selfie Jab We Met but there will always be another occasion) ಅಂತ ರೀ-ಟ್ವೀಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here