ರಾಮಮಂದಿರಕ್ಕಾಗಿ ಚಿನ್ನದ ಇಟ್ಟಿಗೆ ನೀಡುತ್ತೇನೆ: ಮೊಘಲ್ ವಂಶಸ್ಥ ಹಬೀಬುದ್ದೀನ್ ಟ್ಯೂಸಿ

0
1364

ನ್ಯೂಸ್ ಕನ್ನಡ ವರದಿ (19-8-2019): ಅಯೋಧ್ಯಾ ರಾಮಮಂದಿರ ವಿವಾದವು ಸುಪ್ರೀಂ ಕೋರ್ಟ್ ನಲ್ಲಿ ದಿನನಿತ್ಯ ಹಿಯರಿಂಗ್ ಮಾಡುತ್ತಾ ಇದ್ದು ಎಲ್ಲರ ಗಮನ ಅದರ ಕಡೆ ತಿರುಗಿದೆ. ಈ ಮಧ್ಯೆ ಕಡೆಯ ಮೊಘಲ್ ದೊರೆ ಬಹದ್ದೂರ್ ಷಾ ಜಾಫರ್ ಅವರ ವಂಶಸ್ಥರಾಗಿರುವ ರಾಜಕುಮಾರ ಹಬೀಬುದ್ದೀನ್ ಟ್ಯೂಸಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವುದಾದರೆ ತಾವು ಚಿನ್ನದ ಇಟ್ಟಿಗೆಯನ್ನು ದಾನ ಮಾಡಲು ಸಿದ್ದವಿರುವುದಾಗಿ ಹೇಳಿಕೊಂಡಿದ್ದಾರೆ. ಅಯೋಧ್ಯೆಗೆ ಮೂರು ಬಾರಿ ಭೇಟಿ ನೀಡಿರುವ ಅವರು, ತಾತ್ಕಾಲಿಕ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಕಳೆದ ವರ್ಷ ತಮ್ಮ ಭೇಟಿಯ ವೇಳೆ ದೇವಾಲಯಕ್ಕಾಗಿ ಭೂಮಿ ನೀಡುವ ವಾಗ್ದಾನ ಮಾಡಿದ್ದರು. ಅಲ್ಲದೆ ರಾಮ ಮಂದಿರವನ್ನು ನಾಶಪಡಿಸಿದಕ್ಕಾಗಿ ಅವರು ಹಿಂದೂ ಸಮುದಾಯದ ಕ್ಷಮೆ ಯಾಚಿಸಿತ್ತೇನೆ ಎಂದಿದ್ದರು.

ಹಬೀಬುದ್ದೀನ್ ಅವರು ಮೊಘಲ್ ದೊರೆಯ ಆರನೇ ತಲೆಮಾರಿನವರಾಗಿದ್ದು ಈಗ ಹೈದರಾಬಾದ್‌ನಲ್ಲಿ ವಾಸವಾಗಿದ್ದಾರೆ. 1529 ರಲ್ಲಿ ಬಾಬರಿ ಮಸೀದಿಯನ್ನು ನಿರ್ಮಿಸಿದ ಮೊದಲ ಮೊಘಲ್ ಚಕ್ರವರ್ತಿ ಬಾಬರ್ ಅವರ ವಂಶಸ್ಥನಾಗಿರುವ ನಾನು ಅಯೋಧ್ಯೆ ಬಾಬರಿ ಮಸೀದಿಯ ಜಾಗಕ್ಕೆ ನಿಜವಾದ ಹಕ್ಕುದಾರನಾಗಿದ್ದೇನೆ. ಹಾಗಾಗಿ ಭೂಮಿಯನ್ನು ನನಗೆ ಹಸ್ತಾಂತರಿಸಬೇಕೆಂದು ಇದೇ ವೇಳೆ ಅವರು ಬೇಡಿಕೆ ಇಟ್ಟಿದ್ದಾರೆ. ಸುಪ್ರೀಂ ಕೋರ್ಟ್ ಬಾಬರಿ ಮಸೀದಿ ಜಾಗವನ್ನು ನನಗೆ ಹಸ್ತಾಂತರಿಸಿದರೆ ಬಾಬರಿ ಮಸೀದಿ ಇರುವ ಜಾಗದಲ್ಲಿ ರಾಮಮಂದಿರ ನಿರ್ಮಾಣ ಮಾಡಲು ನಾನು ಇಡೀ ಜಾಗವನ್ನೇ ದಾನ ನೀಡುತ್ತೇನೆ, ಜತೆಗೆ ದೇವಾಲಯ ನಿರ್ಮಾಣಕ್ಕೆ ಚಿನ್ನದ ಇಟ್ಟಿಗೆಗಳನ್ನು ಸಹ ನೀಡುತ್ತೇನೆ ಎಂದು ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here