ನಿನ್ನೆ ನಿರ್ಮಲಾ, ಇಂದು ಗೋಯೆಲ್, ಮೋದಿ ಸರ್ಕಾರದ ಸಚಿವರಿಗೆ ನೆಟ್ಟಿಗರಿಂದ ಫುಲ್ ಕ್ಲಾಸ್! ಸುದ್ದಿ ಓದಿ

0
1653

ನ್ಯೂಸ್ ಕನ್ನಡ ವರದಿ: ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಚಿವರು ದಿನಕ್ಕೊಬ್ಬರಂತೆ ಯಡವಟ್ಟು ಹೇಳಿಕೆ ಕೊಡ್ತಿದ್ದಾರೆ. ನಿನ್ನೆಯಷ್ಟೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಶತಮಾನದ ಯುವ ಪೀಳಿಗೆ ತಮ್ಮ ಪ್ರಯಾಣಕ್ಕೆ ಓಲಾ ಹಾಗೂ ಉಬರ್​ ಕ್ಯಾಬ್​ಗಳನ್ನ ಬಳಸುತ್ತಿರೋದೆ ಆಟೋಮೊಬೈಲ್ ಕ್ಷೇತ್ರ ನೆಲಕಚ್ಚಲು ಕಾರಣ ಅಂತಾ ಹೇಳಿದ್ದರು. ಈ ಹೇಳಿಕೆಯನ್ನು ನೆಟ್ಟಿಗರು ಮನಬಂದಂತೆ ಟ್ರೋಲ್ ಮಾಡಿದ್ದರು. ಇದೀಗ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ತಮ್ಮ ಅಸಂಬದ್ಧ ಹೇಳಿಕೆಯಿಂದ ಟ್ರೋಲಿಗರ ಕೇಂದ್ರಬಿಂದುವಾಗಿದ್ದಾರೆ.

ಪಿಯೂಷ್ ಗೋಯಲ್ ಹೇಳಿದ್ದೇನು..?
ಕಾರ್ಯಕ್ರಮವೊಂದರ ಸುದ್ದಿಗೋಷ್ಠಿಯಲ್ಲಿ ಪಿಯೂಷ್ ಗೋಯಲ್ ಮಾತನಾಡುವ ವೇಳೆ ಭೂಮಿಗಿರುವ ಗುರುತ್ವಾಕರ್ಷಣ ಬಲ ಕಂಡು ಹಿಡಿಯಲು ಐನ್​ಸ್ಟೀನ್​ಗೆ ಎಂದಿಗೂ ಗಣಿತ ಸಹಾಯ ಮಾಡಿಲ್ಲ ಅಂತಾ ಹೇಳಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸುವುದಕ್ಕೆ ಸಂಬಂಧಪಟ್ಟಂತೆ ಗೋಯಲ್ ಮಾತನಾಡ್ತಿದ್ದರು.

ಈ ವೇಳೆ ನೀವು ಜಿಡಿಪಿ ಬಗ್ಗೆ ಟಿವಿಯಲ್ಲಿ ನೋಡುತ್ತಿರುವ ಲೆಕ್ಕಾಚಾರದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸಲು ಶೇಕಡಾ 12ರಷ್ಟು ಜಿಡಿಪಿ ಪ್ರಗತಿಯಾಗಬೇಕಿದೆ. ನಾವೀಗ ಸದ್ಯಕ್ಕೆ 6ರಿಂದ 7ರಷ್ಟು ಪ್ರಗತಿ ಹೊಂದಿದ್ದೇವೆ. ನೀವು ಈ ಗಣಿತದ ಬಗ್ಗೆ ಹೆಚ್ಚು ಚಿಂತಿಸಬೇಡಿ, ಈ ಗಣಿತ ಗುರುತ್ವಾಕರ್ಷಣ ಬಲ ಕಂಡು ಹಿಡಿಯಲು ಐನ್​ಸ್ಟೀನ್​ಗೂ ಸಹಾಯ ಮಾಡಿರಲಿಲ್ಲ ಅಂತಾ ಹೇಳಿದ್ದರು.

‘ಹಾಗಾದ್ರೆ ನ್ಯೂಟನ್ ಕಂಡು ಹಿಡಿದಿದ್ದೇನು..?’
ಸದ್ಯ ಈ ಹೇಳಿಕೆ ನೆಟ್ಟಿಗರನ್ನು ಫುಲ್ ಆಕ್ಟೀವ್ ಆಗುವಂತೆ ಮಾಡಿದೆ. ನಮಗೆಲ್ಲಾ ಗೊತ್ತಿರವಂತೆ ಗುರುತ್ವಾಕರ್ಷಣ ಬಲ ಕಂಡು ಹಿಡಿದಿದ್ದು ಸರ್ ಐಸಾಕ್ ನ್ಯೂಟನ್. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಪಿಯೂಷ್ ಗೋಯಲ್​ಗೆ ನೆಟ್ಟಿಗರು ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಐನ್​ಸ್ಟೀನ್ ಗುರುತ್ವಾಕರ್ಷಣ ಬಲ ಕಂಡು ಹಿಡಿದಿದ್ದಾರೆ ಅನ್ನೋದಾದ್ರೆ, ನ್ಯೂಟನ್ ಕಂಡು ಹಿಡಿದಿದ್ದೇನು ಅಂತಾ ಟ್ವೀಟಿಗರು ಪ್ರಶ್ನೆ ಮಾಡ್ತಿದ್ದಾರೆ. ಇದೇ ರೀತಿ ಅನೇಕ ರೀತಿಯ ಮೀಮ್ಸ್​ ಮೂಲಕ ಪಿಯೂಷ್ ಗೋಯಲ್ ಹೇಳಿಕೆ ಬಗ್ಗೆ ಕಿಡಿಕಾರುತ್ತಿದ್ದಾರೆ.

Source: NewsfirstKannada

LEAVE A REPLY

Please enter your comment!
Please enter your name here