ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆದ ನಿರ್ಮಲಾ ಸೀತಾರಾಮನ್! ಸುದ್ದಿ ಓದಿ

0
2226

ನ್ಯೂಸ್ ಕನ್ನಡ ವರದಿ: ದೇಶದಲ್ಲಿ ಆಟೋಮೊಬೈಲ್ ಉದ್ಯಮ ಕುಸಿತಕ್ಕೆ ಯುವ ಪೀಳಿಗೆಯ ಜನರು ಓಲಾ, ಊಬರ್ ನಂತಹಾ ಟಾಕ್ಸಿ ಸರ್ವಿಸ್ ಹಾಗೂ ಮೆಟ್ರೋ ಬಳಕೆ ಮಾಡುತ್ತಿರುವುದು ಕಾರಣ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾ ಪಟ್ಟೆ ಸದ್ದು ಮಾಡುತ್ತಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮಲ್​ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಆಟೋಮೊಬೈಲ್​ ಕ್ಷೇತ್ರದಲ್ಲಿ ಆರ್ಥಿಕ ಕುಸಿತ ಉಂಟಾಗಲು ಪ್ರಮುಖ ಕಾರಣ ಇಂದಿನ ಯುವಪೀಳಿಗೆಯ ಮನಸ್ಥಿತಿ ಎಂದು ಹೇಳಿದ್ದರು. ಅವರ ಈ ಹೇಳಿಕೆ ಈಗ ಕಾಂಗ್ರೆಸ್ ಟೀಕೆಯ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗುತ್ತಿದೆ.ಜನರು ಸ್ವಂತ ವಾಹನ ಕೊಂಡುಕೊಂಡು ಇಎಂಐ ಕಟ್ಟುವ ಬದಲು ಓಲಾ, ಉಬರ್​ ಕ್ಯಾಬ್​ಗಳ ಸೇವೆ ಪಡೆಯುತ್ತಿದ್ದಾರೆ. ಹೀಗಾಗಿ ಆಟೋಮೊಬೈಲ್​ ಉದ್ಯಮದಲ್ಲಿ ಕುಸಿತ ಉಂಟಾಗಿದೆ. ಲಕ್ಷಾಂತರ ಉದ್ಯೋಗ ಕಡಿತಕ್ಕೂ ಕಾರಣವಾಗಿರುವ ಆಟೋಮೊಬೈಲ್ ಕ್ಷೇತ್ರದ ಪರಿಸ್ಥಿತಿ ಸುಧಾರಿಸಲು ಕೇಂದ್ರ ಸರ್ಕಾರ ಕಾರ್ಯ ನಿರತವಾಗಿದೆ ಎಂದು ಸೀತಾರಾಮನ್ ಅವರು ತಿಳಿಸಿದ್ದರು.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್​ ಆಗಿದೆ. #SayItLikeNirmala ಮತ್ತು #BoycottMillennials ಎಂಬ ಹ್ಯಾಷ್​ಟ್ಯಾಗ್‌ ಮೂಲಕ ಸ್ಟೇಟಸ್, ಕಾಮೆಂಟ್ ಮಾಡುತ್ತಿದ್ದಾರೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆಯನ್ನು ಹಲವು ಟ್ವಿಟರಿಗರು ಭಿನ್ನವಾಗಿ ವ್ಯಂಗ್ಯದ ಮೂಲಕ ತರಾಟೆಗೆ ತೆಗೆದುಕೊಂಡರೆ, ಇನ್ನು ಕೆಲವರು ಸಮರ್ಥನೆ ಮಾಡಿದ್ದಾರೆ.

https://twitter.com/RiaRevealed/status/1171763235214655489?s=19

LEAVE A REPLY

Please enter your comment!
Please enter your name here