ಕೊರೊನ ಎಫೆಕ್ಟ್: ದೇಶಾದ್ಯಂತ ಆಗಸ್ಟ್ 12ರವರೆಗೆ ಎಲ್ಲಾ ರೈಲು ಸಂಚಾರವು ರದ್ದು

0
70

ನ್ಯೂಸ್ ಕನ್ನಡ ವರದಿ: ದೇಶದಾದ್ಯಂತ ಕೊರೋನಾ ವೈರಸ್‌ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ರೈಲು ಸಂಚಾರಗಳನ್ನೂ ರದ್ದು ಮಾಡಲಾಗಿದೆ ಎಂದು ಭಾರತೀಯ ರೈಲ್ವೆ ಇಂದು ಆದೇಶಿಸಿದೆ.

ಪ್ರಯಾಣಿಕ ರೈಲುಗಳ ಸಂಚಾರದ ಬಗ್ಗೆ ರೈಲ್ವೆ ಮಂಡಳಿ ಮಹತ್ವದ ತೀರ್ಮಾನ ಕೈಗೊಂಡಿದೆ. ಆಗಸ್ಟ್ 12ರ ತನಕ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದೆ.

ಗುರುವಾರ ನಡೆದ ರೈಲ್ವೆ ಮಂಡಳಿ ಸಭೆಯಲ್ಲಿ ಪ್ರಯಾಣಿಕ ರೈಲುಗಳ ಸಂಚಾರದ ಬಗ್ಗೆ ಚರ್ಚೆ ನಡೆದಿದೆ. ಸಾಮಾನ್ಯ ವೇಳಾಪಟ್ಟಿಯ ಪ್ಯಾಸೆಂಜರ್/ಮೇಲ್/ಎಕ್ಸ್‌ಪ್ರೆಸ್/ಸಬ್ ಅರ್ಬನ್ ರೈಲುಗಳ ಸಂಚಾರವನ್ನು ರದ್ದುಗೊಳಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ.

ಸಾಮಾನ್ಯ ವೇಳಾಪಟ್ಟಿಯ ರೈಲುಗಳಿಗೆ 1/7/2020 ರಿಂದ 12/8/2020ರ ತನಕ ಬುಕ್ ಮಾಡಿದ ಎಲ್ಲಾ ಟಿಕೆಟ್‌ಗಳ ಹಣವನ್ನು ವಾಪಸ್ ಮಾಡಲು ಒಪ್ಪಿಗೆ ನೀಡಲಾಗಿದೆ.

ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಭೀತಿ ಹೆಚ್ಚುತ್ತಲೇ ಇದೆ. ಅಲ್ಲದೆ, ಸಾಂಕ್ರಾಮಿಕ ವೈರಸ್‌ ಸಾಮೂದಾಯಿಕವಾಗಿಯೂ ಹರಡುವ ಭೀತಿ ಎದುರಾಗಿದೆ. ಹೀಗಾಗಿ ಭಾರತೀಯ ರೈಲ್ವೆ ಇಂದು ದೇಶದ ಎಲ್ಲಾ ರೈಲು ಸಂಚಾರವನ್ನೂ ಆಗಸ್ಟ್ 12ರವರೆಗೆ ರದ್ದು ಮಾಡಿ ಆದೇಶಿಸಿದೆ. 

ಈ ಮೂಲಕ ಆಗಸ್ಟ್ 12ರ ತನಕ ರೈಲುಗಳು ಸಂಚಾರ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

LEAVE A REPLY

Please enter your comment!
Please enter your name here