ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ 125ಕೋಟಿ ಮರ ಬೆಳೆಸುವ ಯೋಜನೆ: ನಿತಿನ್ ಗಡ್ಕರಿ

0
1690

ನ್ಯೂಸ್ ಕನ್ನಡ ವರದಿ : ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ದೇಶದ ಸಾರಿಗೆ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಪ್ರಶಂಸಿಸಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಎಲ್ಲ ಸಂಸದರು ಅಭಿನಂದನೆ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಈಗ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ 125 ಕೋಟಿ ಮರ ಬೆಳೆಸಲು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಸಂಕಲ್ಪ ಮಾಡಿದ್ದಾರೆ. ಈ ಸಂಖ್ಯೆ ದೇಶದ ಹಾಲಿ ಜನಸಂಖ್ಯೆಗೆ ಸಮನಾಗಿದೆ ಎನ್ನುವುದು ವಿಶೇಷ ಎಂದು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಸಾರಿಗೆ ಸಚಿವರಾಗಿ ಎರಡನೇ ಅವಧಿಯಲ್ಲಿ ಹೆದ್ದಾರಿ ಸುತ್ತಮುತ್ತ ಹಸಿರೀಕರಣಕ್ಕೆ ಒತ್ತು ನೀಡುವುದೇ ತಮ್ಮ ಗುರಿ ಎಂದು ತಿಳಿಸಿದರು. ದೇಶದಲ್ಲಿ ಈಗ ಕೈಗೆತ್ತಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು 2022ರ ಹೊತ್ತಿಗೆ ಪೂರ್ಣಗೊಳ್ಳಲಿವೆ. ತಮ್ಮ ಮೊದಲ ಅವಧಿಯಲ್ಲಿ ನಿತ್ಯ 32 ಕಿ.ಮೀ ಹೆದ್ದಾರಿ ನಿರ್ಮಿಸಲಾಗಿದ್ದು, ಈ ಪ್ರಮಾಣವನ್ನು 40 ಕಿ.ಮೀಗೆ ಹೆಚ್ಚಿಸುವ ಗುರಿ ಹೊಂದಿರುವುದಾಗಿಯೂ ಗಡ್ಕರಿ ತಿಳಿಸಿದರು. ತಮಗೆ ಹೆಚ್ಚುವರಿಯಾಗಿ ನೀಡಲಾಗಿರುವ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆ ಖಾತೆ ಕುರಿತಾಗಿಯೂ ಪ್ರಸ್ತಾಪಿಸಿದ ಅವರು, ”ಸಣ್ಣ ಕೈಗಾರಿಕೆಗಳ ಉತ್ತೇಜನಕ್ಕೆ ಸಂಬಂಧಿಸಿ ನನ್ನ ಮನಸ್ಸಿನಲ್ಲಿ ಹಲವು ಆಲೋಚನೆಗಳಿವೆ. ಅವುಗಳಿಗೆ ಶೀಘ್ರವೇ ಅಂತಿಮ ರೂಪ ನೀಡಲಾಗುವುದು,” ಎಂದು ತಿಳಿಸಿದರು.

LEAVE A REPLY

Please enter your comment!
Please enter your name here