ಇಂಜಿನ್ ಇಲ್ಲದೇ 10ಕಿ.ಮೀ. ಹಿಮ್ಮುಖ ಚಲಿಸಿದ ರೈಲು: ನಿಲ್ಲಿಸಿದ್ದು ಹೇಗೆ ಗೊತ್ತೇ?

0
566

ನ್ಯೂಸ್ ಕನ್ನಡ ವರದಿ-(08.04.18): ಇಂಜಿನ್ ನಿಂದ ಬೇರ್ಪಟ್ಟಿದ್ದ ರೈಲೊಂದು ಅಕಸ್ಮಾತ್ ಆಗಿ ಹಿಮ್ಮುಖ ಚಲಿಸಲು ಪ್ರಾರಂಭಿಸಿದ್ದು ಬರೋಬ್ಬರಿ 10ಕಿ.ಮೀ ವರೆಗೆ ಚಲಿಸಿದ ಘಟನೆಯು ಒಡಿಶಾದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ. ಅಹ್ಮದಾಬಾದ್-ಪುರಿ ಎಕ್ಸ್ ಪ್ರೆಸ್ ರೈಲು ಇಂಜಿನ್ ನಿಂದ ಬೇರ್ಪಟ್ಟಿದ್ದು, ಈ ಸಂದರ್ಭ ರೈಲಿನ ಚಕ್ರವು ತನ್ನಿಂತಾನೇ ಚಲಿಸಲು ಪ್ರಾರಂಭಿಸಿದೆ. ಒಟ್ಟು 23 ಬೋಗಿಗಳಿದ್ದು ಸುಮಾರು 10ಕಿ,ಮೀ ದೂರ ಚಲಿಸಿದೆ ಎನ್ನಲಾಗಿದೆ. ರಾತ್ರಿ 9:35ಕ್ಕೆ ತಿತ್ಲಾಘರ್ ರೈಲ್ವೇ ನಿಲ್ದಾಣಕ್ಕೆ ಅಹ್ಮದಾಬಾದ್ ಪುರಿ ಎಕ್ಸ್ ಪ್ರೆಸ್ ರೈಲು ಆಗಮಿಸಿತ್ತು.

ಇಂಜಿನ್ ಬೇರ್ಪಟ್ಟ ತಕ್ಷಣವೇ ರೈಲು ಹಿಮ್ಮುಖವಾಗಿ ಚಲಿಸಲು ಪ್ರಾರಂಬಿಸಿದೆ. ಈ ಕುರಿತು ಮಾತನಾಡಿದ ಪ್ರಯಾಣಿಕನೋರ್ವ, “ನಾವು ರೈಲಿನಲ್ಲಿ ಕುಳಿತಿರುವಂತೆಯೇ ರೈಲು ಹಿಮ್ಮುಖವಾಗಿ ಚಲಿಸಲು ಪ್ರಾರಂಭವಾಯಿತು. ನಾವೆಲ್ಲಾ ಗಾಬರಿಯಾಗಿದ್ದೆವು. ಪ್ರತಿಯೊಬ್ಬರ ಮುಖಂದಲ್ಲೂ ಚಿಂತೆ ಎದ್ದು ಕಾಣುತ್ತಿತ್ತು. ಕೊನೆಗೆ ರೈಲಿನ ಚೈನ್ ಎಳೆದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ ಎಂದಿದ್ದಾರೆ. ಕೊನೆಗೆ ರೈಲು ಚಲಿಸಲು ಪ್ರಾರಂಭವಾಗಿ ಅರ್ಧ ಗಂಟೆಯ ಬಳಿಕ ಕೇಸಿಂಗ ರೈಲ್ವೇ ನಿಲ್ದಾಣದಲ್ಲಿ ರೈಲು ಹಳಿಗೆ ಬೃಹತ್ ಕಲ್ಲುಗಳನ್ನು ತಂದಿಟ್ಟು ಅದರ ಮೂಲಕ ರೈಲು ನಿಲ್ಲಿಸುವಲ್ಲಿ ಯಶಸ್ವಿಯಾದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಚಾಲಕರು ಸೇರಿದಂತೆ ಏಳು ಮಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here