ಒಂದೇ ದಿನದಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸ್​ ಸಂಗ್ರಹಿಸಿದ ದಂಡ ಎಷ್ಟು ಗೊತ್ತೆ? ಸುದ್ದಿ ಓದಿ

0
664

ನ್ಯೂಸ್ ಕನ್ನಡ ವರದಿ: ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು ಹೊಸ ದಂಡದ ಮೊತ್ತ ಜಾರಿಯಾದ ನಂತರ ಟ್ರಾಫಿಕ್ ರೂಲ್ಸ್​ ಉಲ್ಲಂಘಿಸಿದ ವಾಹನ ಸವಾರರಿಗೆ ಭಾರಿ ಫೈನ್ ಬೀಳ್ತಿದೆ. ನಿನ್ನೆ ಬೆಳಗ್ಗೆ 10 ಗಂಟೆಯಿಂದ ಇಂದು ಬೆಳಗ್ಗೆ 10 ಗಂಟೆವರೆಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ಸಂಚಾರಿ ನಿಯಮಗಳ ಉಲ್ಲಂಘನೆ ಸಂಬಂಧ ಒಟ್ಟು 6350 ಕೇಸ್​​ಗಳನ್ನ ದಾಖಲಿಸಿದ್ದಾರೆ.

ಹೆಲ್ಮೆಟ್​ ಇಲ್ಲದೆ ದ್ವಿಚಕ್ರ ವಾಹನ ಚಾಲನೆ ಮಾಡಿದ ಸಂಬಂಧ 1274 ಪ್ರಕರಣಗಳು ದಾಖಲಾಗಿವೆ. ಪಾರ್ಕಿಂಗ್ ನಿಯಮ ಉಲ್ಲಂಘಿಸಿದ್ದಕ್ಕೆ 919 ಪ್ರಕರಣಗಳು ಹಾಗೂ ಟ್ರಾಫಿಕ್ ಸಿಗ್ನಲ್​ ಜಂಪ್​ಗೆ​ ಸಂಬಂಧಿಸಿದಂತೆ 886 ಪ್ರಕರಣಗಳು ದಾಖಲಾಗಿವೆ. ಹೀಗೆ ಒಂದೇ ದಿನ 6350 ಕೇಸ್​​ಗಳು ಬುಕ್​ ಆಗಿದ್ದು, ಇದರಿಂದ 20 ಲಕ್ಷದ 55 ಸಾವಿರದ 200 ರೂಪಾಯಿ ದಂಡ ಸಂಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here