ಮಳೆಯಿಂದಾಗಿ ಭಾರತ-ನ್ಯೂಜಿಲೆಂಡ್ ನಡುವಿನ ಪಂದ್ಯಾಟದ ಟಾಸ್ ವಿಳಂಬ!

0
258

ನ್ಯೂಸ್ ಕನ್ನಡ ವರದಿ: (12.06.19): ಲಂಡನ್ ನಲ್ಲಿ ವಿಶ್ವಕಪ್ ಕ್ರಿಕೆಟ್ ಪಂದ್ಯಾಟಗಳನ್ನು ಆಯೊಜಿಸಿದ ಬಳಿಕ ಇದೀಗ ಆಯೋಜಕರಿಗೆ ತಲೆನೋವು ಉಂಟಾಗಿದೆ. ಲಂಡನ್ ನಲ್ಲಿ ಭಾರೀ ಮಳೆ ಸುರಿಯುತ್ತಿರುವ ಕಾರಣ ಈಗಾಗಲೇ ಮೂರು ಪಂದ್ಯಗಳನ್ನು ರದ್ದು ಮಾಡಿ ಉಭಯ ತಂಡಗಳಿಗೆ ಅಂಕ ಹಂಚಿಕೆ ಮಾಡಲಾಗಿದೆ. ಇದೀಗ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಪಂದ್ಯಾಟವು ಕೂಡಾ ಮಳೆಗೆ ಬಲಿಯಾಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ. ಈಗಾಗಲೇ ಟಾಸ್ ಮಳೆಯಿಂದಾಗಿ ವಿಳಂಬವಾಗಿದೆ.

3 ಗಂಟೆಗೆ ಆರಂಭವಾಗಬೇಕಿರುವ ಪಂದ್ಯ ಮಳೆಯ ಕಾರಣದಿಂದಲಾಗಿ ವಿಳಂಬವಾಗಲಿದೆ. ಪಂದ್ಯಕ್ಕೆ ಪೂರ್ಣಪ್ರಮಾಣದಲ್ಲಿ ಮಳೆ ಅಡ್ಡಿ ಮಾಡುವ ಸಾಧ್ಯತೆಯಿಲ್ಲ ಎಂದು ವರದಿಯಾಗಿದೆ. ಡಕ್‌ವರ್ಥ್ ಲೂಯಿಸ್‌ ನಿಯಮದಡಿಯಾದರೂ ಫ‌ಲಿತಾಂಶ ಬರಬಹುದೆನ್ನುವ ನಿರೀಕ್ಷೆಯಿದೆ. ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಇಂಗ್ಲೆಂಡ್‌ನ‌ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಈಗಾಗಲೇ 3 ಪಂದ್ಯ ಮಳೆಯಿಂದ
ರದ್ದಾಗಿದೆ.

LEAVE A REPLY

Please enter your comment!
Please enter your name here