Tuesday November 14 2017

Follow on us:

Contact Us
    265

ಹಿಂದುತ್ವವನ್ನು ವಿರೋಧಿಸುವವರು ದೇಶವಿರೋಧಿಗಳು: ಯೋಗಿ ಆದಿತ್ಯನಾಥ್

ನ್ಯೂಸ್ ಕನ್ನಡ (14.11.2017): ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಿಂದುತ್ವವನ್ನು ವಿರೋಧಿಸುವವರ ವಿರುದ್ಧ ಕಿಡಿಕಾರಿದ್ದು, ವಿರೋಧ ಪಕ್ಷಗಳು ಹಿಂದುತ್ವವನ್ನು ವಿರೋಧಿಸುವ ಮೂಲಕ ದೇಶದಲ್ಲಿನ ಅಭಿವೃದ್ಧಿ ಮತ್ತು ಭಾರತೀಯ ಸಂಪ್ರದಾಯವನ್ನು ವಿರೋಧಿಸುತ್ತಿದೆ ಎಂದು ಹೇಳಿದ್ದಾರೆ. ಹಿಂದುತ್ವ ಎನ್ನುವುದು ಯಾವುದೇ ಧರ್ಮಕ್ಕೆ ಅಥವಾ ವರ್ಗಕ್ಕೆ ಸೀಮಿತವಾಗಿಲ್ಲ. ಹಿಂದುತ್ವವೆಂದರೆ ಅದು ಭಾರತೀಯತೆ ಮತ್ತು ದೇಶಪ್ರೇಮವನ್ನು ಸೂಚಿಸುತ್ತದೆ ಎಂದು ಅವರು ಹೇಳಿದ್ದಾರೆ.

ಹಿಂದುತ್ವ ಮತ್ತು ಅಭಿವೃದ್ಧಿ- ಎರಡೂ ಒಂದಕ್ಕೊಂದು ಪೂರಕ… ಹಿಂದುತ್ವವನ್ನು ವಿರೋಧಿಸುವವರು ವಾಸ್ತವದಲ್ಲಿ ಅಭಿವೃದ್ಧಿ ಮತ್ತು ಭಾರತೀಯತೆಯನ್ನೇ ವಿರೋಧಿಸುತ್ತಾರೆ’ ಎಂದು ಯೋಗಿ ನುಡಿದರು. ಪ್ರತಿಪಕ್ಷಗಳು ನಿಮ್ಮ ಮಾತುಗಳನ್ನು ಹಿಂದುತ್ವಕ್ಕೆ ತಳುಕು ಹಾಕುತ್ತಾರೆ, ಆದರೆ ಅಭಿವೃದ್ಧಿ ಜತೆ ಜೋಡಿಸುವುದಿಲ್ಲ ಏಕೆ ಎಂದು ಪ್ರಶ್ನಿಸಿದಾಗ, ‘ಜಾತ್ಯತೀತತೆ (ಸೆಕ್ಯುಲರಿಸಂ) ಹೆಸರಿನಲ್ಲಿ ವಂಶ ರಾಜಕಾರಣ ಮತ್ತು ಜಾತೀಯತೆಯನ್ನು ಬಿತ್ತಿ ಬೆಳೆಸಿದವರು ಮತ್ತು ಭ್ರಷ್ಟಾಚಾರದಲ್ಲಿ ಮುಳುಗಿದವರು ಮಾತ್ರ ಈ ರೀತಿ ಮಾತನಾಡುತ್ತಾರೆ’ ಎಂದು ಯೋಗಿ ಉತ್ತರಿಸಿದರು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ದೇಶದೆಲ್ಲೆಡೆ ಮೂತ್ರಬ್ಯಾಂಕ್ ಸ್ಥಾಪಿಸುವ ಕುರಿತು ಸರಕಾರ ಚಿಂತನೆ ನಡೆಸುತ್ತಿದೆ: ನಿತಿನ್ ಗಡ್ಕರಿ

ಮುಂದಿನ ಸುದ್ದಿ »

ಭಾರತದ ಯೋಗಕ್ಕೆ ಕ್ರೀಡಾ ಮಾನ್ಯತೆ ನೀಡಿದ ಸೌದಿ ಅರೇಬಿಯಾ ಸರಕಾರ

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×