Saturday October 21 2017

Follow on us:

Contact Us
    249

ನಾನು ಪರಿಶುದ್ಧನಾಗಿದ್ದೇನೆ, ಯಾರಿಂದಲೂ ಹಣ ಪಡೆದವನಲ್ಲ: ಸಚಿವ ರಮೇಶ್ ಕುಮಾರ್

ನ್ಯೂಸ್ ಕನ್ನಡ ವರದಿ-(21.10.17): ಗುತ್ತಿಗೆದಾರರು ನಿಮಗೆ ನೀಡಿರುವ ಕಾಮಗಾರಿಯಿಂದ ಹಣವನ್ನು ಕಳೆದುಕೊಳ್ಳಬೇಡಿ. ಸಾರ್ವಜನಿಕರ ಸ್ವತ್ತು ಆಗಿರುವುದರಿಂದ ಜವಾಬ್ದಾರಿಯುತವಾಗಿ ಉತ್ತಮ ಗುಣಮಟ್ಟದ ಕೆಲಸವನ್ನು ಮಾಡಿ. ನಾನು ಪರಿಶುದ್ದನಾಗಿದ್ದೇನೆ. ಯಾವುದೇ ಕಾಮಗಾರಿಯಲ್ಲಿ ನಾನು ಎಂದೂ ಯಾರಿಂದಲೂ ಹಣ ಪಡೆದವನಲ್ಲ ಹಾಗೆಯೇ ಗುಣಮಟ್ಟದಲ್ಲಿಯೂ ರಾಜಿಯಾಗುವ ಪ್ರಶ್ನೆಯೇ ಇರುವುದಿಲ್ಲ ಎಂದು ರಾಜ್ಯ ಆರೋಗ್ಯ ಸಚಿವ ಕೆ.ಆರ್.ರಮೇಶ್‍ಕುಮಾರ್ ನುಡಿದರು.

ತಾಲೂಕಿನ ಒಳಗೆರನಹಳ್ಳಿ ಕ್ರಾಸ್‍ನಲ್ಲಿ ಏರ್ಪಡಿಸಿದ್ದ ಸುಮಾರು 5ಕೋಟಿ ರೂಗಳ ವೆಚ್ಚದಲ್ಲಿ ರೋಜೋರ್ನಹಳ್ಳಿ ಕ್ರಾಸ್ ನಿಂದ ಹೋಳೂರು ಗ್ರಾಮದವರೆಗೆ 5ಕಿ.ಮೀ. ರಸ್ತೆ ಅಗಲೀಕರಣ ಹಾಗೂ ಡಾಂಬರು ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರೆವೇರಿಸಿ ಮಾತನಾಡಿದ ಇವರು ಮಳೆಯ ಪ್ರಭಾವದಿಂದ ಕೆಲವು ರಸ್ತೆಗಳು ಗುಣಿ ಬಿದ್ದು ಹಾಳಾಗಿವೆ. ತಕ್ಷಣಕ್ಕೆ ಸರಿ ಮಾಡಲು ಸಾಧ್ಯವಿಲ್ಲ. ಇಂಜಿನೀಯರ್‍ಗಳು ಅಂದಾಜು ಪಟ್ಟಿ ನೀಡಬೇಕು. ಹಣಕಾಸು ಬಿಡುಗಡೆಯಾಗಬೇಕು. ಅದಕ್ಕೆ ಟೆಂಡರ್ ಕರೆಯಬೇಕು. ನಂತರ ಕೆಲಸ ಪ್ರಾರಂಬಿಸ ರಸ್ತೆಗಳನ್ನು ನಿರ್ಮಿಸಲು ಕೆಲವು ದಿನಗಳು ಬೇಕಾಗುತ್ತದೆ. ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಕೆಲಸದಲ್ಲಿ ಅಸಡ್ಡೆ ತೋರಿಸಿಲ್ಲ ಮತ್ತು ಬೇಜವಾಬ್ದಾರಿಯಿಂದ ನಡೆದುಕೊಂಡಿಲ್ಲ ಎಂದರು.

ಎಲ್ಲರೂ ದೇವರ ದರ್ಶನಕ್ಕೆ ದೇವಾಲಯಕ್ಕೆ ಹೋಗುತ್ತಾರೆ, ನಾನು ನಿಮ್ಮನ್ನು ನೋಡಿದಾಗ ದೇವರ ದರ್ಶನವಾದಂತೆ ನನಗೆ ಭಾಸವಾಗುತ್ತದೆ. ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಹಣವನ್ನು ಮಂಜೂರು ಮಾಡಿಸಿದ್ದೇನೆ. ಇಷ್ಟೊಂದು ಹಣವನ್ನು ಸರ್ಕಾರದಿಂದ ತರುವುದು ಸುಲಭದ ಕೆಲಸವಲ್ಲ. ರಾಜ್ಯದಲ್ಲಿಯೇ ಇದೇ ಮೊದಲಬಾರಿಗೆ 17ಸಾವಿರ ಮನೆಗಳ ನಿರ್ಮಾಣಕ್ಕೆ ಸಾವಿರಾರು ಕೋಟಿ ರೂಗಳು ಮಂಜೂರಾಗಿದೆ. ಅದರಂತೆ ಶಾಲೆ, ರಸ್ತೆ, ಶುದ್ದ ಕುಡಿಯುವ ನೀರಿನ ಘಟಕಗಳು, ಪ್ರಯೋಗಾಲಯಗಳು, ಚೆಕ್ ಡ್ಯಾಂಗಳು, ಕೆರೆಗಳ ಅಭಿವೃದ್ಧಿಗಾಗಿ ನಾನು ನನ್ನ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಶಾಸಕನಾಗಿ ನನಗೆ ಪ್ರಮಾಣಪತ್ರ ನೀಡಿದ ದಿನದಿಂದ ಇದುವರೆವಿಗೂ ನನ್ನ ಕ್ಷೇತ್ರದ ಜನರ ಅಭಿವೃದ್ಧಿಗಾಗಿ ಅವಿರತವಾಗಿ ಶ್ರಮವಹಿಸುತ್ತಲೇ ಬಂದಿದ್ದೇನೆ ಎಂದು ತಿಳಿಸಿದರು.

ಯರಗೋಳ್ ಯೋಜನೆ: ನಾನು ಎತ್ತಿನಹೊಳೆ ಮತ್ತು ಕೆ.ಸಿ.ವ್ಯಾಲಿ ನೀರು ತರಲು ಸಾಕಷ್ಟು ಹೋರಾಟ ನಡೆಸಿ ಅದರಲ್ಲಿ ಸಫಲತೆಯನ್ನು ಸಹ ಕಂಡಿದ್ದೇನೆ. ಇನ್ನು ಕೆಲವೇ ತಿಂಗಳಿನಲ್ಲಿ ಕೆ.ಸಿ.ವ್ಯಾಲಿ ನೀರು ನರಸಾಪುರ ಕೆರೆಗೆ ಬರಲಿದೆ. ದೇವರ ಕೃಪೆಯಿಂದ ಉತ್ತಮ ಮಳೆಯಾಗಿದ್ದು ಜನ ಸಾಮಾನ್ಯರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದೆ. ಯರಗೋಳ್‍ನಿಂದ ಸುಮಾರು ಟಿ.ಎಂ.ಸಿಗಳ ನೀರು ಆಂದ್ರ ಪ್ರದೇಶಕ್ಕೆ ಹರಿದುಹೋಗುತ್ತಿರುವುದು ಕಂಡು ಬೇಸರವಾಯಿತು. ಇನ್ನು ಕೆಲವೇ ದಿನಗಳಲ್ಲಿ ಅಲ್ಲಿಗೆ ಬೇಟಿ ನೀಡಿ ಕೂಲಂಕುಶವಾಗಿ ಪರಿಶೀಲನೆ ನಡೆಸಿ ಯಾವುದೇ ಕಾರಣಕ್ಕೆ ರಾಜ್ಯದ ನೀರು ಪೋಲಾಗದಂತೆ ಕಾಪಾಡಿಕೊಳ್ಳುತ್ತೇನೆ. ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯ ಎಲ್ಲಾ ತಾಲೂಕುಗಳ ಕೆರೆಗಳಿಗೆ ನೀರು ಹರಿಸುವುದೇ ನನ್ನ ಮುಖ್ಯ ಗುರಿ ಎಂದು ಭರವಸೆ ನೀಡಿದರು.

ಕೊಳಚೆನೀರು ಎಂದು ಅಪಹಾಸ್ಯ ಸಲ್ಲದು: ಕೆಲವರು ಇತ್ತೀಚೆಗೆ ಮಳೆಯಿಂದ ಕೋಲಾರ ಜಿಲ್ಲೆಯ ಜನರು ಕೆ.ಸಿ.ವ್ಯಾಲಿಯ ಕೊಳಚೆ ನೀರು ಕುಡಿಯುವುದು ತಪ್ಪಿದೆ ಎಂದು ಅಪಹಾಸ್ಯ ಮಾಡಿರುವುದನ್ನು ನೆನಪಿಸಿಕೊಂಡು ಯಾವುದೇ ಕಾರಣಕ್ಕೆ ಕೊಳಚೆ ನೀರು ನೀಡಲು ಸಾಧ್ಯವಿಲ್ಲ. ನೀರನ್ನು ಶುದ್ದೀಕರಣ ಮಾಡುವ ಯಂತ್ರಗಳನ್ನು ಜೋಡಿಸಿ ಮೂರು ಪಟ್ಟು ನೀರನ್ನು ಶುದ್ದೀಕರಿಸಿದ ನಂತರವೇ ನರಸಾಪುರ ಕೆರೆಗೆ ನೀರು ಕೊಡಲಾಗುವುದು. ನೀರಿನ ಬಗ್ಗೆ ತಾತ್ಸಾರ ಮನೋಬಾವನೆಯನ್ನು ಬಿಡಬೇಕು. ಅಶುದ್ದ ಮತ್ತು ಕುಡಿಯಲು ಯೋಗ್ಯವಲ್ಲದ ನೀರನ್ನು ಯಾರೂ ನೀಡುವುದೂ ಇಲ್ಲ ಮತ್ತು ಅದನ್ನು ಯಾರೂ ಬಳಕೆಯೂ ಮಾಡುವುದಿಲ್ಲ ಎಂದರು.

ಈ ಕಾರ್ಯಕ್ರಮದಲ್ಲಿ ರಾಜ್ಯ ಮಾವುಮಂಡಳಿ ಅಧ್ಯಕ್ಷ ದಳಸನೂರು ಎಲ್.ಗೋಪಾಲಕೃಷ್ಣ, ಕೋಚಿಮುಲ್ ಅಧ್ಯಕ್ಷ ಬ್ಯಾಟಪ್ಪ, ವಿಎಸ್‍ಎಸ್ ಸೊಸೈಟಿ ಅಧ್ಯಕ್ಷ ವೀರಭದ್ರಸ್ವಾಮಿ, ಡಿಸಿಸಿ ಬ್ಯಾಂಕ್ ಜಿಲ್ಲಾ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಬಗಲಹಳ್ಳಿ ಚಂದ್ರೇಗೌಡ, ಹೂಹಳ್ಳಿ ಬಾಬು, ಕಾಮಗಾರಿ ಗುತ್ತಿಗೆದಾರ ಜೊನ್ನಪ್ಪನಹಳ್ಳಿ ಶಿವಾರೆಡ್ಡಿ, ಕೋಲಾರ ಜಿಲ್ಲಾ ಯೂತ್ ಕಾಂಗ್ರೆಸ್‍ನ ಉಪಾಧ್ಯಕ್ಷ ನವೀನ್‍ಕುಮಾರ್, ಬೈಚಪ್ಪ, ಜೊನ್ನಪ್ಪನಹಳ್ಳಿ ಗ್ರಾಮದ ಮುಖಂಡರಾದ ನಾರಾಯಣಸ್ವಾಮಿ, ಮೂರ್ತಿ, ಆನಂದ್, ಸುರೇಶ್ ಇತರರು ಹಾಜರಿದ್ದರು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಸಿಎಂ ಶಾಂತಿರಾಮಯ್ಯನಾಗಬೇಕೆ ಹೊರತು ಬೆಂಕಿರಾಮಯ್ಯ ಆಗಬಾರದು: ಆರ್. ಅಶೋಕ್

ಮುಂದಿನ ಸುದ್ದಿ »

ಇಸ್ಲಾಂನಲ್ಲಿ ವಧುದಕ್ಷಿಣೆಗೆ ಮಾತ್ರ ಅವಕಾಶ ವರದಕ್ಷಿಣೆಗಲ್ಲ: ಬೇಕಲ ಖಾಝಿ 

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×