Thursday October 12 2017

Follow on us:

Contact Us
    254

ಪಟಾಕಿಯನ್ನು ನಿಷೇಧಿಸುವ ಮೂಲಕ ಹಿಂದೂಗಳನ್ನು ಗುರಿಪಡಿಸಲಾಗುತ್ತಿದೆ: ಬಾಬಾ ರಾಮ್ ದೇವ್

ನ್ಯೂಸ್ ಕನ್ನಡ ವರದಿ-(12.10.17): ಹಿಂದೂ ಧರ್ಮೀಯರ ಪ್ರಮುಖ ಹಬ್ಬವಾದ ದೀಪಾವಳಿಯ ಸಂದರ್ಭದಲ್ಲೇ ದೆಹಲಿಯಲ್ಲಿ ಸುಪ್ರೀಮ್ ಕೋರ್ಟ್ ಪಟಾಕಿಗಳನ್ನು ಬಳಸುವುದನ್ನು ನಿಷೇಧ ಹೇರಿದ್ದು, ಈ ಕ್ರಮಕ್ಕೆ ಎಲ್ಲೆಡೆಯಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಖ್ಯಾತ ಲೇಖಕ ಚೇತನ್ ಭಗತ್, ಪಟಾಕಿಗಳನ್ನು ನಿಷೇಧಿಸುವುದರೊಂದಿಗೆ ಬಕ್ರೀದ್ ನ ಕುರಿಬಲಿ ಮತ್ತು ಕ್ರಿಸ್ ಮಸ್ ಟ್ರೀ ಮಾರಾಟವನ್ನೂ ನಿಷೇಧಿಸಿ ಎಂದಿದ್ದರು. ಇದೀಗ ಖ್ಯಾತ ಉದ್ಯಮಿ ಮತ್ತು ಯೋಗಗುರು ಬಾಬಾ ರಾಮದೇವ್, ಪಟಾಕಿಯನ್ನು ನಿಷೇಧಿಸುವ ಮೂಲಕ ಹಿಂದೂಗಳನ್ನು ಗುರಿಪಡಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟಾಕಿ ನಿಷೇಧ ಆದೇಶ ಕುರಿತಂತೆ ಖಾಸಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ದೇಶದಲ್ಲಿ ಇಂದು ನಿರ್ದಿಷ್ಟ ಸಮುದಾಯವನ್ನು ಗುರಿ ಮಾಡಲಾಗುತ್ತಿದೆ. ಹಿಂದುಗಳನ್ನು ಗುರಿ ಮಾಡಲಾಗುತ್ತಿದ್ದು, ಹಿಂದೂಗಳ ಹಬ್ಬಗಳನ್ನು ರಡಾರ್ ಗಳನ್ನು ತರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಪ್ರತಿಯೊಂದಕ್ಕೂ ಕಾನೂನಾತ್ಮಕ ನಿರ್ಣಯಗಳನ್ನು ತೆಗೆದುಕೊಳ್ಳುವುದು ಸರಿಯಿದೆಯೇ? ನಾನು ಕೂಡ ಶಾಲೆಗಳು, ವಿಶ್ವವಿದ್ಯಾಲಯಗಳನ್ನು ನಡೆಸುತ್ತಿದ್ದೇನೆ. ಕೈಯಲ್ಲಿ ಸುಡುವ ಹಾಗೂ ಕಡಿಮೆ ಶಬ್ದವುಳ್ಳ ಪಟಾಕಿಗಳನ್ನು ಹಚ್ಚಲು ನಾವು ಅನುಮತಿ ನೀಡಿದ್ದೇವೆ. ಅತೀ ಹೆಚ್ಚು ಶಬ್ಧ ಮಾಡುವ ಪಟಾಕಿಗಳಿಗೆ ನಾವು ಬೆಂಬಲಿಸುವುದಿಲ್ಲ. ದೊಡ್ಡ ದೊಡ್ಡ ಪಟಾಕಿಗಳ ಮೇಲೆ ನಿಷೇಧ ಹೇರಬೇಕಿದೆ ಎಂದಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಸೈನೈಡ್ ಮೋಹನ್ ಗೆ ಗಲ್ಲುಶಿಕ್ಷೆ ರದ್ದು: ಅಜೀವ ಸೆರೆವಾಸ ಶಿಕ್ಷೆ ವಿಧಿಸಿದ ಕೋರ್ಟ್!

ಮುಂದಿನ ಸುದ್ದಿ »

ಗೌರಿ ಲಂಕೇಶ್ ಹತ್ಯೆಯಲ್ಲಿ ಹೊರರಾಜ್ಯದವರ ಕೈವಾಡದ ಶಂಕೆಯಿದೆ: ರಾಮಲಿಂಗಾ ರೆಡ್ಡಿ

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×