Thursday December 7 2017

Follow on us:

Contact Us
    1081

ಮುಸ್ಲಿಮ್ ಯುವತಿಯರ ಜಿಮಿಕಿ ಕಮ್ಮಲ್ ಡ್ಯಾನ್ಸ್: ಅಪಮಾನಿಸಿದವರ ವಿರುದ್ಧ ದೂರು ದಾಖಲು!

ನ್ಯೂಸ್ ಕನ್ನಡ ವರದಿ-(07.12.17): ಕೇರಳದ ಮಲಪ್ಪುರಂನಲ್ಲಿ ಏಡ್ಸ್ ದಿನಾಚರಣೆಯ ಅಂಗವಾಗಿ ಫ್ಲಾಶ್ ಮೊಬ್ ನಡೆಸಲಾಗಿತ್ತು. ಈ ಸಂದರ್ಭ ಹದ್ದಾರಿಯ ವೃತ್ತದ ಬಳಿ ಮೂವರು ಮುಸ್ಲಿಮ್ ಯುವತಿಯರು ಪರ್ದಾ ಧರಿಸಿಕೊಂಡು ಮಲಯಾಳಂ ನ ಖ್ಯಾತ ವೈರಲ್ ಹಾಡು ಜಿಮಿಕ ಕಮ್ಮಲ್ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಮುಸ್ಲಿಮ್ ಯುವತಿಯರು ಬೀದಿಗೆ ಬಂದು ನಡು ರಸ್ತೆಯಲ್ಲಿ ಕುಣಿಯುವುದು ಸರಿಯಲ್ಲವೆಂದು ಹಲವು ಸಂಪ್ರದಾಯವಾದಿಗಳು ಸಾಮಾಜಿಕ ತಾಣಗಳಲ್ಲಿ ಮತ್ತು ಹಲವೆಡೆ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಈ ಯುವತಿಯರ ಕುರಿತು ಮಾನಹಾನಿಕರ ಪೋಸ್ಟ್ ಗಳನ್ನು ಹಾಕಿದವರ ವಿರುದ್ಧ ಕೇರಳದ ಮಹಿಳಾ ಆಯೋಗ ದೂರು ನೀಡಿದೆ ಎಂದು ತಿಳಿದು ಬಂದಿದೆ.

ಕೇರಳದ ಮಲಪ್ಪುರಂ ಮುಸ್ಲಿಮ್ ಬಾಹುಳ್ಯವಿರುವ ಪ್ರದೇಶವಾಗಿದ್ದು, ಇಲ್ಲಿನ ದಂತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯರು ಏಡ್ಸ್ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಯುವತಿಯರು ನೃತ್ಯ ಮಾಡಿದ್ದನ್ನು ಸಂಪ್ರದಾಯವಾದಿಗಳು ತರಾಟೆಗೆ ತೆಗೆದುಕೊಂಡಿದ್ದು, ಟ್ರೋಲ್ ಗಳನ್ನು ಮಾಡಲು ಪ್ರಾರಂಭಿಸಿದರು. ಇದೀಗ ಈ ರೀತಿಯ ಅಪಮಾನಕರ ಹೇಳಿಕೆಗಳನ್ನು ವ್ಯಕ್ತಪಡಿಸಿದ ವ್ಯಕ್ತಿಗಳ ವಿರುದ್ಧ ಸೂಮೋಟೊ ಪ್ರಕರಣವನ್ನು ಕೇರಳ ಮಹಿಳಾ ಆಯೋಗವು ದಾಖಲಿಸಿದೆ ಎಂದು ತಿಳಿದು ಬಂದಿದೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಶ್ರೀರಾಮನ ಅಸ್ತಿತ್ವದ ಕುರಿತು ದ್ವಾರಕನಾಥ್ ಹೇಳಿಕೆ ದೇಶಕ್ಕೆ ಮಾಡಿದ ಘೋರ ಅವಮಾನ

ಮುಂದಿನ ಸುದ್ದಿ »

ಗಣೇಶಪೇಟೆಯು ಪಾಕಿಸ್ತಾನದಂತಿದೆ ಎಂದು ಹೇಳಿಕೆ ನೀಡಿದ್ದ ಮೌಲ್ವಿಯ ಬಂಧನ!

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×