Tuesday November 14 2017

Follow on us:

Contact Us
    196

ಗೋರಕ್ಷಕರು ಗುಂಡಿಕ್ಕಿ ಕೊಂದ ವ್ಯಕ್ತಿಯ ವಿರುದ್ಧವೇ ಗೋಕಳ್ಳಸಾಗಾಣಿಕೆ ಪ್ರಕರಣ ದಾಖಲು!

ನ್ಯೂಸ್ ಕನ್ನಡ (14.11.2017): ಜೈಪುರದ ಆಲ್ವಾರ್ ಎಂಬ ಪ್ರದೇಶದಲ್ಲಿ ಗೋರಕ್ಷಕರು ಉಮರ್ ಮುಹಮ್ಮದ್ ಎಂಬ ವ್ಯಕ್ತಿ ದನಗಳನ್ನು ಸಾಗಿಸುತ್ತಿದ್ದ ವೇಳೆ ಗೋರಕ್ಷಕರು ದಾಳಿಗೈದು ಉಮರ್ ಹಾಗೂ ಅವರ ಜೊತೆಗಿದ್ದವರಿಗೆ ಹಲ್ಲೆ ನಡೆಸಿದ್ದರು. ಈ ವೇಳೆ ಉಮರ್ ರನ್ನು ಗುಂಡಿಕ್ಕಿ ಕೊಂದು ರೈಲ್ವೇ ಹಳಿಗಳ ಮೇಲೆ ಎಸೆದು ಹೋಗಿದ್ದರು. ಇದೀಗ ಸ್ಥಳೀಯ ಪೊಲೀಸರು ಉಮರ್ ಮುಹಮ್ಮದ್ ಹಾಗೂ ಅವರೊಂದಿಗಿದ್ದ ತ್ವಾಹಿರ್ ಖಾನ್, ಜಾವೆದ್ ಎಂಬವರ ವಿರುದ್ಧ ಅಕ್ರಮ ಗೋಸಾಗಾಟ ಮಾಡಿದ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಉಮರ್ ಮೃತದೇಹ ಅಲ್ವಾರ್ ಜಿಲ್ಲೆಯ ರಾಮಗಡದಲ್ಲಿ ಇದೇ ತಿಂಗಳ 11 ರಂದು ರೈಲ್ವೆ ಹಳಿ ಪಕ್ಕ ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ. ಉಮರ್ ಪ್ರಕರಣದಲ್ಲಿ ಎರಡು ದೂರಗಳನ್ನು ದಾಖಲಿಸಲಾಗಿದೆ ಎಂದು ಆಲ್ವಾರ್ ಎಸ್ಪಿ ಹೇಳಿದ್ದಾರೆ. ದನಗಳನ್ನು ಸಾಗಿಸುತ್ತಿದ್ದ ವಾಹನ ಗೋವಿಂದಗಡದಲ್ಲಿ ಪತ್ತೆಯಾಗಿದೆ. ಈ ಕುರಿತು ಒಂದು ಪ್ರಕರಣ ದಾಖಲಿಸಲಾಗಿದೆ. ಇದು ಅಕ್ರಮ ಗೋ ಸಾಗಣೆ ಎಂಬುದು ಸ್ಪಷ್ಟವಾಗಿದೆ. ಇದರಿಂದಾಗಿ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಪಡುಬಿದ್ರಿ; ರಾತೋ ರಾತ್ರಿ ಸುಜ್ಲಾನ್ ಕಂಪನಿ ಲಾಕೌಟ್: ಕಂಪನಿ ಮುಂಭಾಗದಲ್ಲಿ ಕಾರ್ಮಿಕರ ಪ್ರತಿಭಟನೆ

ಮುಂದಿನ ಸುದ್ದಿ »

ಪುತ್ರ ತೈಮೂರ್ ಗೆ ತಂದೆ ಸೈಫ್ ಅಲಿಖಾನ್ ನೀಡಿದ ದುಬಾರಿ ಗಿಫ್ಟ್ ಏನು ಗೊತ್ತೇ?

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×