Sunday March 20 2016

Follow on us:

Contact Us
kudsep
  430

ಭಟ್ಕಳ ಗೌಸೀಯ ಸ್ಟ್ರೀಟ್ ಬಾವಿಗಳಿಗೇ ನುಗ್ಗುತ್ತಿದೆ ಒಳಚರಂಡಿ ನೀರು; ಕುಡ್ಸೆಂಪ್ ಕರ್ಮಕಾಂಡ

-ಎಂ.ಆರ್.ಮಾನ್ವಿ

ನ್ಯೂಸ್ ಕನ್ನಡ  ವಿಶೇಷ ವರದಿ-ಭಟ್ಕಳ: ಜನತೆಯ ಮೂಲಭೂತ ಅವಶ್ಯಕತೆಯಾದ ಕುಡಿಯುವ ನೀರಿನ ಸಮಸ್ಯೆಯಿಂದ ನಗರವು ಬಳಲುತ್ತಿದೆ. ಪುರಸಭೆ ವ್ಯಾಪ್ತಿಯ ಗೌಸೀಯಾ ಸ್ಟ್ರೀಟ್ ನಲ್ಲಿ ಒಳಚರಂಡಿಯ ಅವ್ಯವಸ್ಥೆಯಿಂದಾಗಿ ಕಳೆದ ಐದಾರು ವರ್ಷಗಳಿಂದ ಈ ಭಾಗದ ಜನರಿಗೆ ಸರಿಯಾಗಿ ಕುಡಿಯುವ ನೀರು ಸಿಗದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

20-bkl-gausia street drink water8

ಎಡಿಬಿ ನೆರವಿನ ಕುಡ್ಸೆಂಪ್ ಒಳಚರಂಡಿ ಕಾಮಗಾರಿ ಕರ್ಮಕಾಂಡದಿಂದಾಗಿ ಕೋಟ್ಯಾಂತರ ರೂ. ವೆಚ್ಚದಲ್ಲಿ ಗೌಸೀಯಾ ಸ್ಟ್ರೀಟ್ ನಲ್ಲಿ ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಿದ ಒಳಚರಂಡಿ ಪಂಪ್ ಹೌಸ್ ನಿಂದಾಗಿ ವರ್ಷವಿಡೀ ಕುಡಿಯುವ ನೀರಿನ ಮೂಲಗಳಿಗೆ ಒಳಚರಂಡಿ ನೀರು ಸೋರಿಕೆಯಾಗಿ ಈ ಭಾಗದ ಕುಡಿಯುವ ಬಾವಿಗಳು ಕಲುಷಿತಗೊಂಡಿವೆ. ಬೇಸಿಗೆಯಲ್ಲಂತೂ ಬಾವಿಗಳಿಂದ ಗಟಾರ ನೀರಿನ ವಾಸನೆ ಮೂಗಿಗೆ ಬಡಿಯುತ್ತಿರುತ್ತದೆ ಎಂದು ಇಲ್ಲಿನ ನಿವಾಸಿಗಳು ದೂರಿದ್ದಾರೆ.

ಹಲವು ಬಾರಿ ಪುರಸಭೆಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುವುದು ಇಲ್ಲಿನ ನಾಗರಿಕರ ಅಳಲು. ಇದರಿಂದ ಕುಡಿಯುವ ನೀರಿನ ಬಾವಿಗಳು ಹಾಳಾಗಿದ್ದರೂ ಈವರೆಗೂ ಸಮಸ್ಯೆಯನ್ನು ಬಗೆಹರಿಸಲು ಮಾತ್ರ ಸಾಧ್ಯವಾಗಿಲ್ಲ.

ಭಟ್ಕಳ ಪಟ್ಟಣ ವ್ಯಾಪ್ತಿಯಲ್ಲಿ ಕಳೆದ ಆರೇಳು ವರ್ಷಗಳ ಹಿಂದೆ ಏಶ್ಯನ್ ಡೆವಲಪ್ ಮೆಂಟ್ ಬ್ಯಾಂಕಿನ ನೆರವಿನಡಿಯಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಕುಡ್ಸೆಂಪ್ ನವರು ಒಳಚರಂಡಿ ಸೇರಿದಂತೆ ವಿವಿಧ ಕಾಮಗಾರಿಗಳನ್ನು ನಡೆಸಿದ್ದರು. ಪಟ್ಟಣದ ಗೌಸೀಯಾ ಸ್ಟ್ರೀಟ್ ನಲ್ಲಿ ಒಳಚರಂಡಿ ಪಂಪ್ ಹೌಸ್ ಕೂಡ ಸ್ಥಾಪಿಸಲಾಗಿತ್ತು. ಪಟ್ಟಣದ ಒಳಚರಂಡಿ ನೀರನ್ನು ಈ ಪಂಪ್ ಹೌಸ್ ಮೂಲಕ ವೆಂಕಟಾಪುರದಲ್ಲಿರುವ ಒಳಚರಂಡಿ ಶುದ್ಧೀಕರಣ ಘಟಕಕ್ಕೆ ಪಂಪ್ ಮಾಡಲಾಗುತ್ತಿದೆ. ಆದರೆ ಗೌಸೀಯಾ ಸ್ಟ್ರೀಟ್ ನಲ್ಲಿ ಅಳವಡಿಸಿದ ಒಳಚರಂಡಿ ಪೈಪ್ ಲೈನ್ ಮೂಲಕ ನೀರು ಸೋರಿಕೆಯಾಗಿ ಸನಿಹದ 30ಕ್ಕೂ ಅಧಿಕ ಬಾವಿಗಳಿಗೆ ಸೇರಿಕೊಂಡಿದ್ದರಿಂದ ಕಳೆದ ಕೆಲವು ವರ್ಷಗಳಿಂದ ನೀರು ಕುಡಿಯುವುದಿರಲಿ, ಉಪಯೋಗಿಸಲೂ ಕೂಡ ಸಾಧ್ಯವಾಗುತ್ತಿಲ್ಲ.

20-bkl-gausia street drink water7

ಕುಡಿಯುವ ನೀರಿನ ಬಾವಿಗಳು ಸಂಪೂರ್ಣ ಒಳಚರಂಡಿ ನೀರು ಮಯವಾಗಿದ್ದರಿಂದ ಇಲ್ಲಿನ ಜನರು ಕುಡಿಯುವ ನೀರಿಗಾಗಿ ತೀವ್ರ ತೊಂದರೆ ಪಡುವಂತಾಗಿದೆ. ಗೌಸೀಯಾ ಸ್ಟ್ರೀಟ್‍ನಲ್ಲಿರುವ ಶೇ.90 ರಷ್ಟು ಬಾವಿಗಳಲ್ಲಿ ಒಳಚರಂಡಿ ನೀರು ಸೇರ್ಪಡೆಯಾಗಿರುವುದರ ಜೊತೆಗೆ ಕಸ ಕಡ್ಡಿ, ತ್ಯಾಜ್ಯಗಳ ಮಯವಾಗಿದೆ. ಈ ಸಲದ ಬೇಸಿಗೆಯಲ್ಲಂತೂ ಒಂದು ಕೊಡ ನೀರಿಗೂ ಅಲ್ಲಿನ ಜನರು ಪರದಾಡುವಂತಾಗಿದೆ. ಬಾವಿ ನೀರಿಗೆ ಒಳಚರಂಡಿಯ ಕಲುಷಿತ ನೀರು ಸೇರಿದ್ದರಿಂದಾಗಿ ಇಲ್ಲಿನ ವಾಸಿಗಳು ಪ್ರತಿನಿತ್ಯ ದೂರದ ಬಾವಿಯಿಂದ ನೀರನ್ನು ತಂದು ಕುಡಿಯುವಂತಾಗಿದೆ. ಈ ಸಮಸ್ಯೆ ಕಳೆದ ಐದಾರು ವರ್ಷಗಳಿಂದಿದ್ದರೂ ಯಾರೂ ಕೂಡ ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ ಎನ್ನುವುದು ಅಲ್ಲಿನ ಸಾರ್ವಜನಿಕರ ಅಳಲಾಗಿದೆ.

20-bkl-gausia street drink water6

ಈ ಬಗ್ಗೆ ಸಾಕಷ್ಟು ಬಾರಿ ಪುರಸಭೆಗೆ, ಜನಪ್ರತಿನಿಧಿಗಳಿಗೆ, ಎಸಿ, ಜಿಲ್ಲಾಧಿಕಾರಿಗೆ, ಸಚಿವರಿಗೆ ತಿಳಿಸಿದ್ದರೂ ಪ್ರಯೋಜನವಾಗಿಲ್ಲ. ಎಲ್ಲರೂ ಸ್ಥಳಕ್ಕೆ ಬಂದು ಭೇಟಿ ನೀಡಿ ಪರಿಶೀಲಿಸಿ ಭರವಸೆ ನೀಡಿ ಹೋಗುತ್ತಾರೆಯೇ ವಿನಹ: ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಿಲ್ಲ. ಇಲ್ಲಿನ ಒಳಚರಂಡಿ ಅವ್ಯವಸ್ಥೆಯಿಂದ ಮಲಿನ ನೀರು ಶರಾಬಿ ಹೊಳೆಗೂ ಸೇರುತ್ತಿದ್ದು, ಹೊಳೆಯ ನೀರು ದುರ್ವಾಸನೆ ಬೀರುತ್ತಿದೆ. ಈ ಭಾಗದಲ್ಲಿ ಒಳಚರಂಡಿ ಅವ್ಯವಸ್ಥೆಯಿಂದ ರೋಗ ರುಜಿನಗಳು ಬಂದರೆ ಯಾರು ಹೊಣೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

20-bkl-gausia street drink water5

ಒಳಚರಂಡಿ ಅವ್ಯವಸ್ಥೆಯಿಂದಾಗುತ್ತಿರುವ ಸಮಸ್ಯೆಯಿಂದ ರೋಸಿ ಹೋಗಿರುವ ಇಲ್ಲಿನ ಜನತೆ ಒಳಚರಂಡಿ ಪಂಪ್ ಹೌಸನ್ನೇ ಬೇರೆ ಕಡೆ ಸ್ಥಳಾಂತರ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಇಲ್ಲಿನ ಸಮಸ್ಯೆ ಕುರಿತು ಜನರು ಈ ಹಿಂದೆ ತಂಝೀಂ ಕಚೇರಿಗೆ ಮುತ್ತಿಗೆ ಹಾಕಿ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸಮಸ್ಯೆ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರೆ ಸಮಸ್ಯೆ ಬಗೆಹರಿಸಲು ಹೆಚ್ಚಿನ ಅನುದಾನದ ಅಗತ್ಯವಿದೆ ಎಂದು ತಿಳಿಸುತ್ತಾರೆ. ಕಳೆದ ಕೆಲವು ವರ್ಷಗಳಿಂದಿರುವ ಗೌಸೀಯಾ ಸ್ಟ್ರೀಟ್ ನ ಒಳಚರಂಡಿ ಮತ್ತು ಕುಡಿಯುವ ನೀರಿನ ಸಮಸ್ಯೆಯನ್ನು ಕೂಡಲೇ ಅಧಿಕಾರಿಗಳು, ಜನಪ್ರತಿನಿಧಿಗಳು ಬಗೆಹರಿಸಬೇಕಿದೆ. ಒಳಚರಂಡಿ ಅವ್ಯವಸ್ಥೆ ಸರಿಪಡಿಸಲು ಸರಕಾರದಿಂದ ಅನುದಾನ ಮಂಜೂರು ಮಾಡಿಸಿಕೊಳ್ಳಲು ಒತ್ತಡ ಹಾಕಬೇಕಾದ ಅಗತ್ಯತೆ ಇದೆ. ಒಳಚರಂಡಿ ಅವ್ಯವಸ್ಥೆಯಿಂದ ಕುಡಿಯುವ ನೀರಿನ ಬಾವಿಗಳು ಸಂಪೂರ್ಣ ಹಾಳಾಗಿದ್ದರಿಂದ ಮೊದಲು ಇಲ್ಲಿನ ಜನರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಸಂಬಂಧಪಟ್ಟವರು ಮುಂದಾಗಬೇಕಿದೆ ಎನ್ನುವ ಆಗ್ರಹ ಕೇಳಿ ಬಂದಿದೆ.

ಭಟ್ಕಳದ ಬಹುತೇಕ ಮಂದಿ ಗಲ್ಫ್ ಮತ್ತಿತರ ಹೊರರಾಷ್ಟ್ರಗಳಲ್ಲಿ ದುಡಿಯುತ್ತಿದ್ದಾರೆ. ಉತ್ತಮ ಸ್ಥಿತಿವಂತರಾಗಿದ್ದು ಯಾವಾಗಲೂ ತಮ್ಮ ತಾಯ್ನಾಡಿನ ಚಿಂತೆಯಲ್ಲೇ ಇರುತ್ತಾರೆ. ಭಟ್ಕಳದಲ್ಲಿ ಹೊಸ ಹೊಸ ಪ್ರೋಜೆಕ್ಟ್ ಬರಬೇಕು, ಇಲ್ಲಿನ ಜನರು ಉದ್ಯೋಗಕ್ಕಾಗಿ ಹೊರರಾಷ್ಟ್ರಗಳನ್ನು ಆಶ್ರಯಿಸದೆ ತಮ್ಮದೇ ತಾಯ್ನೆಲದಲ್ಲಿ ಪತ್ನಿ ಮಕ್ಕಳೊಂದಿಗೆ ಇದ್ದು ಇತರರಂತೆ ಸಂತೋಷದ ಬದುಕು ಸಾಗಿಸಬೇಕೆಂಬುದು ಇವರ ಮನದಾಸೆಯಾಗಿದೆ. ಇದಕ್ಕಾಗಿ ಹಲವು ಬಾರಿ ಸಭೆಗಳನ್ನು ನಡೆಸಿದ್ದಾರೆ. ವರ್ಷಕೊಮ್ಮೆ ಭಟ್ಕಳಕ್ಕೆ ಬರುವ ಇವರು ಇಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಾರೆ. ಭಟ್ಕಳ ನಗರವನ್ನು ಸ್ವಚ್ಛ ಹಾಗೂ ಸುಂದರ ನಗರವನ್ನಾಗಿ ಮಾಡಲು ಇಲ್ಲಿನ ರಾಬಿತಾ ಸಂಸ್ಥೆ ಹಲವು ಮಹತ್ತರ ಕಾರ್ಯಗಳನ್ನು ಮಾಡಿದೆ. ಪುರಸಭೆಗೆ ಕಸ ವಿಲೇವಾರಿ ಮಾಡಲು ಅನುಕೂಲವಾಗಲೆಂದು ವಾಹನಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ನೀಡಿದ್ದಾರೆ. ಟ್ಯಾಂಕರ್ ಗಳ ಮೂಲಕ ಕುಡಿಯುವ ನೀರಿನ ವ್ಯವಸ್ಥೆ, ಬಡ ವಿದ್ಯಾರ್ಥಿಗಳಿಗಾಗಿ ಉಚಿತ ಶಿಕ್ಷಣ ಹೀಗೆ ಹತ್ತು ಹಲವು ಯೋಜನೆಗಳನ್ನು ಹಾಕಿಕೊಂಡು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಆದರೆ ಸರ್ಕಾರದ ಯೋಜನೆಗಳು ವಿಫಲಗೊಂಡಲ್ಲಿ ಅದನ್ನು ಯಾರೂ ತಾನೆ ಏನು ಮಾಡಬಲ್ಲರು. ಗೌಸೀಯ ಸ್ಟ್ರೀಟ್ ನಲ್ಲಿ ಬಾವಿಗೆ ನುಗ್ಗುವ ಚರಂಡಿ ನೀರು ನಿಲ್ಲಿಸಲು ಯಾರಿಂದ ಸಾಧ್ಯವಾಗಬಲ್ಲದು. ಕೋಟ್ಯಂತರ ಹಣ ವ್ಯಯಿಸಿಯೂ ನಿಲ್ಲದ ಕೊಳಚೆ ನೀರು ಸಂಘ ಸಂಸ್ಥೆಗಳಿಂದ ನಿಲ್ಲಿಸಲು ಸಾಧ್ಯವೇ? ಇದಕ್ಕಾಗಿ ಮತ್ತೆ ಕೋಟ್ಯಾಂತರ ಹಣ ಹಾಕುವ ದುಸ್ಸಾಹಾಸಕ್ಕಂತೂ ಯಾರೂ ಮುಂದೆ ಬರುವುದಿಲ್ಲ.

nkgkp

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಆನ್ ಲೈನ್ ಶಾಪಿಂಗ್ ನಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಜೀವ ವಿಮಾ ಕಂಪೆನಿಯ ಮ್ಯಾನೇಜರ್

ಮುಂದಿನ ಸುದ್ದಿ »

ಲಂಡನ್ ಬಸವಣ್ಣನ ಪ್ರತಿಮೆ ಬಳಿ ನಟ ಶಿವರಾಜಕುಮಾರ್ ಸನ್ಮಾನ

ಸಿನೆಮಾ

 • 3

  ನನಗೂ ತುಳು ಸಿನಿಮಾದಲ್ಲಿ ನಟಿಸುವ ಆಸೆ: ಶಿವರಾಜ್ ಕುಮಾರ್

  January 19, 2017

  – ಶಫೀ ಉಚ್ಚಿಲ ನ್ಯೂಸ್ ಕನ್ನಡ ವರದಿ (19-1-17): ಕಾಪು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ಟಗರು ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ‘ಟಗರು’ ತಂಡ ಎರಡನೇ ಹಂತವನ್ನು ಕಾಪು ಸಮೀಪದ ಉಚ್ಚಿಲದಲ್ಲಿ ಚಿತ್ರೀಕರಿಸುತ್ತಿದ್ದು, ...

  Read More
 • Chennai-Express-First-Look-tbwm

  ಚೆನ್ನೈ ಎಕ್ಸ್ ಪ್ರೆಸ್ ನಿರ್ಮಾಪಕನ ವಿರುದ್ಧ ಅತ್ಯಾಚಾರ ಆರೋಪ

  January 18, 2017

  ನ್ಯೂಸ್ ಕನ್ನಡ(18-1-2017): ಸೂಪರ್ ಹಿಟ್ ಬಾಲಿವುಡ್ ಚಲನಚಿತ್ರ “ಚೆನ್ನೈ ಎಕ್ಸ್ ಪ್ರೆಸ್”ನ ನಿರ್ಮಾಪಕ ಕರೀಂ ಮೊರಾನಿ ವಿರುದ್ಧ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 25 ವರ್ಷದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರಗೈದಿರುವುದಾಗಿ ದೂರು ದಾಖಲಾಗಿದ್ದು, ...

  Read More
 • ra-one

  “ರಾ ಒನ್” ಚಿತ್ರದ ರಾಷ್ಟ್ರಪ್ರಶಸ್ತಿ ವಿಜೇತ ಅನಿಮೇಟರ್ ನಿಧನ

  January 18, 2017

  ನ್ಯೂಸ್ ಕನ್ನಡ(18-1-2017): ರಾ ಒನ್ ಚಿತ್ರದ ಅನಿಮೇಷನ್ ಗಾಗಿ ರಾಷ್ಟ್ರೀಯ ಪ್ರಶಸ್ತಿ ಗಳಿಸಿದ್ದ ಚಾರು ಖಂದಾಲ್ ನಿಧನರಾಗಿದ್ದಾರೆ. 4 ವರ್ಷಗಳ ಹಿಂದೆ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚಾರು ದೀರ್ಘಕಾಲದ ಅಸೌಖ್ಯದಿಂದ ಇಂದು ನಿಧನರಾದರು. ಶಾರುಕ್ ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×