Friday January 12 2018

Follow on us:

Contact Us
    573

ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಹೊಸ ಯಮಹಾ FZS-FI ರಿಯರ್ ಡಿಸ್ಕ್ ಬ್ರೇಕ್‌ ಮಾರುಕಟ್ಟೆಗೆ!

ನ್ಯೂಸ್ ಕನ್ನಡ ವರದಿ: ಎಫ್‌ಝಡ್ ಶ್ರೇಣಿಯ ಬೈಕ್‌ಗಳನ್ನು ದೇಶಕ್ಕೆ ಪರಿಚಯಿಸಿ 10 ವರ್ಷಗಳ ಹೊಸ್ತಿಲಲ್ಲಿರುವ ಇಂಡಿಯಾ ಯಮಹಾ ಮೋಟಾರ್ (ಐವೈಎಂ) ಸಂಸ್ಥೆಯೀಗ, ಈ ನೆನಪನ್ನು ಮತ್ತಷ್ಟು ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ತನ್ನ ಜನಪ್ರಿಯ ಎಫ್‌ಝಡ್‌ಎಸ್-ಎಫ್ಐ (Yamaha FZS FI) ಮಾದರಿಯ ನೂತನ ರಿಯರ್ ಡಿಸ್ಕ್ ಬ್ರೇಕ್ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ.

ದೆಹಲಿ ಎಕ್ಸ್ ಶೋರೂಂ ಬೆಲೆ:86,042 ರೂ.
220 ಎಂಎಂ ರಿಯರ್ ಡಿಸ್ಕ್ ಪಡೆದುಕೊಳ್ಳಲಿರುವ ನೂತನ ಯಮಹಾ ಎಫ್‌ಝಡ್‌ಎಸ್-ಎಫ್ಐ ರಿಯರ್ ಡಿಸ್ಕ್ ಬ್ರೇಕ್ ಆವೃತ್ತಿಯು, ಸ್ಟ್ಯಾಂಡರ್ಡ್ ಮಾದರಿಗಿಂತಲೂ 3,000 ರೂ.ಗಳಷ್ಟು ಹೆಚ್ಚು ದುಬಾರಿಯೆನಿಸಲಿದೆ. ಅದೇ ಹೊತ್ತಿಗೆ ಹೊಸತಾದ ‘ಆರ್ಮಡಾ ಬ್ಲೂ’ ಬಣ್ಣದ ಆಯ್ಕೆಯನ್ನು ಪರಿಚಯಿಸುತ್ತಿದ್ದು, ವಾಹನ ಪ್ರೇಮಿಗಳಲ್ಲಿ ಹೆಚ್ಚಿನ ಆಕರ್ಷಣೆಗೆ ಪಾತ್ರವಾಗಲಿದೆ.

ಇನ್ನುಳಿದಂತೆ ಮುಂದುಗಡೆ 282 ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್, 41ಎಂಎಂ ಫ್ರಂಟ್ ಫಾರ್ಕ್, ರಿಯರ್ ಮೊನೊಶಾಕ್ ಸಸ್ಪೆನ್ಷನ್ ಮತ್ತು 140 ಸೆಕ್ಷನ್ ಚಕ್ರಗಳನ್ನು ಪಡೆಯಲಿದೆ. ಎಂಟ್ರಿ ಲೆವೆಲ್ ಕ್ರೀಡಾ ಬೈಕ್‌ಗಳಲ್ಲಿ ಯಮಹಾ ಎಫ್‌ಝಡ್ ಕಳೆದೊಂದು ದಶಕದಲ್ಲಿ ಅತಿ ಹೆಚ್ಚು ಜನಪ್ರಿಯತೆಯನ್ನು ಕಾಪಾಡಿಕೊಂಡಿದೆ. ಪ್ರಮುಖವಾಗಿಯೂ ಯುವ ಗ್ರಾಹಕರಲ್ಲಿ ಹೆಚ್ಚಿನ ಪ್ರೀತಿಗೆ ಪಾತ್ರವಾಗಿತ್ತು.

ಅಂದ ಹಾಗೆ ಸಂಸ್ಥೆಯ ಬ್ಲೂ ಕೋರ್ ತಂತ್ರಗಾರಿಕೆಯ 149 ಸಿಸಿ ಏರ್ ಕೂಲ್ಡ್ ಎಂಜಿನ್ ಉಳಿಸಿಕೊಳ್ಳಲಾಗಿದೆ. ಇದು 12.8 ಎನ್‌ಎಂ ತಿರುಗುಬಲದಲ್ಲಿ 13.2 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಐದು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

Auto news courtesy Times of india

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಕನ್ನಡ ನಟಿ ರಾಗಿಣಿಯನ್ನು ಬೆಡ್ ರೂಮ್ ಗೆ ಕರೆದ ರಾಜಕಾರಣಿ ನಾಗರಾಜ್!!

ಮುಂದಿನ ಸುದ್ದಿ »

ಸಿದ್ದರಾಮಯ್ಯರಿಗೆ ಕಾಮಾಲೆ ರೋಗ: ಡಿ.ವಿ ಸದಾನಂದಗೌಡ ಲೇವಡಿ

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×