Thursday October 12 2017

Follow on us:

Contact Us
    630

ಸೈನೈಡ್ ಮೋಹನ್ ಗೆ ಗಲ್ಲುಶಿಕ್ಷೆ ರದ್ದು: ಅಜೀವ ಸೆರೆವಾಸ ಶಿಕ್ಷೆ ವಿಧಿಸಿದ ಕೋರ್ಟ್!

ನ್ಯೂಸ್ ಕನ್ನಡ ವರದಿ-(12.10.17): ಸುಮಾರು 20 ಯುವತಿಯರನ್ನು ಪ್ರೀತಿಸುವುದಾಗಿ ವಂಚಿಸಿ ಬಳಿಕ ಕೊಲೆಗೈದ ಆರೋಪದ ಮೇರೆಗೆ ಸಯನೈಡ್ ಮೋಹನ್ ಎಂಬಾತನನ್ನು ಬಂಧಿಸಲಾಗಿತ್ತು ಹಾಗೂ ಮೂರು ಪ್ರಕರಣಗಳಲ್ಲಿ ಗಲ್ಲು ಶಿಕ್ಷೆಗೆ ಗುರಿಪಡಿಸಲಾಗಿತ್ತು. ಇದೀಗ ಬಂಟ್ವಾಳ ತಾಲೂಕಿನ ಕೋಳಿಮನೆ ಗ್ರಾಮದ ಅನಿತಾ ಎಂಬ ಮಹಿಳೆಯನ್ನು ಅತ್ಯಾಚಾರಗೈದು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈನೈಡ್ ಮೋಹನ್ ನ ಗಲ್ಲುಶಿಕ್ಷೆಯನ್ನು ರದ್ದುಪಡಿಸಿ ಆತನಿಗೆ ಅಜೀವ ಸೆರೆವಾಸವನ್ನು ವಿಧಿಸಿದೆ.

ರವಿ ಮಳಿಮಠ್ ಮತ್ತು ಜಾನ್ ಮೈಕೆಲ್ ಚುನಾ ಅವರಿದ್ದ ವಿಭಾಗೀಯ ಪೀಠ ಅಧೀನ ನ್ಯಾಯಾಲಯ ನೀಡಿದ್ದ ಗಲ್ಲು ಶಿಕ್ಷೆಯನ್ನು ಪರಿಷ್ಕರಿಸಿ, ಆತ ಸಾಯುವವರೆಗೂ ಜೈಲಿನಿಂದ ಬಿಡುಗಡೆ ಮಾಡದಂತೆ ಕಾರಾಗೃಹ ಅಧಿಕಾರಿಗಳಿಗೆ ಸೂಚಿಸಿದೆ.

2009 ರಲ್ಲಿ ಮದುವೆಯಾಗುವುದಾಗಿ ನಂಬಿಸಿ ಬಂಟ್ವಾಳದ ಅನಿತಾ ಎಂಬಾಕೆಯನ್ನು ಹಾಸನಕ್ಕೆ ಕರೆತಂದು ಮೇಲೆ ಮೋಹನ್ ಅತ್ಯಾಚಾರ ನಡೆಸಿದ್ದ, ನಂತರ ಆಕೆಯನ್ನು ಬಸ್ ನಿಲ್ದಾಣಕ್ಕೆ ಕರೆತಂದು, ಗರ್ಭಿಣಿ ಆಗುವುದನ್ನು ತಪ್ಪಿಸಲು ಆಕೆಗೆ ಮಾತ್ರೆ ನೀಡಿದ್ದ, ಆ ಮಾತ್ರೆ ಸೈನೈಡ್ ಲೇಪಿತವಾಗಿತ್ತು ಅದನ್ನು ಸೇವಿಸಿದ್ದ ಅನಿತಾ ಹಾಸನ ಬಸ್ ನಿಲ್ದಾಣದ ಶೌಚಾಲಯದಲ್ಲಿ ಸತ್ತು ಬಿದ್ದಿದ್ದಳು. 2003 ರಿಂದ 2009 ರವರೆಗೆ ಮೋಹನ್ ಇದೇ ರೀತಿ ಸುಮಾರು 20 ಅಪರಾಧಗಳನ್ನು ಮಾಡಿದ್ದ, ಸರಣಿ ಹಂತಕ ಮೋಹನ್ ಗೆ ನಾಲ್ಕು ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಯಾಗಿತ್ತು,. ಮೂರು ಪ್ರಕರಣಗಳಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಚಡ್ಡಿ ಧರಿಸಿದ ಮಹಿಳೆಯರನ್ನು ನೋಡಲೇಬೇಕೆಂದಿದ್ದರೆ ರಾಹುಲ್ ಮಹಿಳಾ ಹಾಕಿ ಪಂದ್ಯ ನೋಡಲಿ: ಆರೆಸ್ಸೆಸ್

ಮುಂದಿನ ಸುದ್ದಿ »

ಪಟಾಕಿಯನ್ನು ನಿಷೇಧಿಸುವ ಮೂಲಕ ಹಿಂದೂಗಳನ್ನು ಗುರಿಪಡಿಸಲಾಗುತ್ತಿದೆ: ಬಾಬಾ ರಾಮ್ ದೇವ್

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×